ಲಂಡನ್:ಇಂಗ್ಲೆಂಡ್ನ ಹೊಸ ಪ್ರಧಾನಿಯಾಗಿ ಆಯ್ಕೆಯಾದ ಕನ್ಸರ್ವೇಟಿವ್ ಪಕ್ಷದ ನಾಯಕಿ ಲಿಜ್ ಟ್ರಸ್ ಅವರಿಗೆ ರಾಣಿ ಎಲಿಜಬೆತ್ II ಮಂಗಳವಾರ ಅಧಿಕಾರ ಹಸ್ತಾಂತರಿಸಿದರು. ನಿರ್ಗಮಿತ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಔಪಚಾರಿಕವಾಗಿ ರಾಜೀನಾಮೆ ನೀಡಲು ರಾಣಿಯನ್ನು ಭೇಟಿಯಾದ ಸ್ವಲ್ಪ ಸಮಯದ ನಂತರ ಬ್ರಿಟನ್‌ನ ಮುಂದಿನ ಪ್ರಧಾನ ಮಂತ್ರಿಯಾಗಿ ಲಿಜ್ ಟ್ರಸ್ ಅವರನ್ನು ನೇಮಿಸಲಾಯಿತು.
ಮುರಿದ ಸಂಪ್ರದಾಯ:ರಾಣಿ ಎಲಿಜಬೆತ್ ಅವರ 70 ವರ್ಷಗಳ ಆಳ್ವಿಕೆಯಲ್ಲಿ ಲಂಡನ್‌ನ ಬಕಿಂಗ್‌ಹ್ಯಾಮ್ ಅರಮನೆಯಲ್ಲಿಯೇ ನೂತನ ಪ್ರಧಾನಿಗಳಿಗೆ ಅಧಿಕಾರ ಹಸ್ತಾಂತರಿಸುತ್ತಿದ್ದರು. ಆದರೆ, ಇದೇ ಮೊದಲ ಬಾರಿಗೆ ಸ್ಕಾಟ್ಲೆಂಡ್ನ ಬಾಲ್ಮೋರಲ್ ಎಸ್ಟೇಟ್ನಲ್ಲಿ ಲಿಜ್ ಟ್ರಸ್ ಅವರಿಗೆ ಅಧಿಕಾರದ ಜವಾಬ್ದಾರಿ ನೀಡಿದರು. 96 ವರ್ಷದ ರಾಣಿ ಎಲಿಜಬೆತ್ ಆರೋಗ್ಯದ ಕಾರಣಕ್ಕಾಗಿ ಅವರು ಇಂಗ್ಲೆಂಡ್ನಲ್ಲಿನ ಬಕಿಂಗ್‌ಹ್ಯಾಮ್ ಅರಮನೆಗೆ ಬರಲಾಗಲಿಲ್ಲ.