ಆಡಮ್ಸ್ಟೌನ್ನ ಪಿಟ್ಕೈರ್ನ್ ದ್ವೀಪಗಳಲ್ಲಿ 6.3 ತೀವ್ರತೆಯ ಭೂಕಂಪನ - ಆಡಮ್ಸ್ಟೌನ್ನ ಪಿಟ್ಕೈರ್ನ್ ದ್ವೀಪಗಳಲ್ಲಿ ಭೂಕಂಪ
ದಕ್ಷಿಣ ಫೆಸಿಪಿಕ್ ಸಮುದ್ರ ಭಾಗದಲ್ಲಿರುವ ಆಡಮ್ಸ್ಟೌನ್ನ ಪಿಟ್ಕೈರ್ನ್ ದ್ವೀಪಗಳಲ್ಲಿ 6.3ರ ತೀವ್ರತೆಯ ಭೂಕಂಪನ ಸಂಭವಿಸಿದೆ.
ಆಡಮ್ಸ್ಟೌನ್ನ ಪಿಟ್ಕೈರ್ನ್ ದ್ವೀಪಗಳಲ್ಲಿ 6.3 ತೀವ್ರತೆಯ ಭೂಕಂಪ
ಆಡಮ್ಸ್ಟೌನ್:ಇಲ್ಲಿನಪಿಟ್ಕೈರ್ನ್ ದ್ವೀಪಗಳಲ್ಲಿ ಕಳೆದ ರಾತ್ರಿ 12.47 ರ ಸುಮಾರಿಗೆ ಭೂಕಂಪನವಾಗಿದೆ. ರಿಕ್ಟರ್ ಮಾಪಕದಲ್ಲಿ 6.3 ರಷ್ಟು ತೀವ್ರತೆ ದಾಖಲಾಗಿದೆ. ಭೂಕಂಪನದ ಕೇಂದ್ರಬಿಂದು ಸಮುದ್ರದ 10 ಕಿಮೀ ಆಳದಲ್ಲಿತ್ತು ಎಂದು ಗುರುತಿಸಲಾಗಿದೆ. ಆಡಮ್ಸ್ಟೌನ್ ಪೂರ್ವ ಭಾಗ 1,621 ಕಿಮೀ ದೂರದಲ್ಲಿ ಅಕ್ಷಾಂಶ 22.55 ಡಿಗ್ರಿ ಮತ್ತು ರೇಖಾಂಶ 114.39 ಡಿಗ್ರಿ ಪೂರ್ವದಲ್ಲಿ ಘಟನೆ ಸಂಭವಿಸಿದೆ. ಯಾವುದೇ ಪ್ರಾಣ ಹಾನಿಗಿರುವ ಬಗ್ಗೆ ವರದಿಯಾಗಿಲ್ಲ.