ಕರ್ನಾಟಕ

karnataka

'ಲಿಖಿತ ಒಪ್ಪಂದ'ದ ನಂತರವೇ ಪುಟಿನ್-ಝೆಲೆನ್ಸ್ಕಿ ಭೇಟಿ ಸಾಧ್ಯ: ಕ್ರೆಮ್ಲಿನ್ ವಕ್ತಾರ

By

Published : Apr 6, 2022, 7:27 AM IST

'ಲಿಖಿತ ಒಪ್ಪಂದ'ದ ನಂತರವೇ ಪುಟಿನ್-ಝೆಲೆನ್ಸ್ಕಿ ಭೇಟಿ ಸಾಧ್ಯ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ.

Putin-Zelensky meeting possible only after treaty ready
'ಲಿಖಿತ ಒಪ್ಪಂದ'ದ ನಂತರವೇ ಪುಟಿನ್-ಝೆಲೆನ್ಸ್ಕಿ ಭೇಟಿ ಸಾಧ್ಯ: ಕ್ರೆಮ್ಲಿನ್ ವಕ್ತಾರ

ಮಾಸ್ಕೋ(ರಷ್ಯಾ): ಶಾಂತಿ ಒಪ್ಪಂದದ ನಂತರವೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ನಡುವಿನ ಸಭೆ ಸಾಧ್ಯ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ.

ನಮಗೆ ಏನೂ ಬದಲಾಗಿಲ್ಲ. ಅಂತಹ ಸಾಧ್ಯತೆಯನ್ನು ನಾವು ತಿರಸ್ಕರಿಸುವುದಿಲ್ಲ. ಎರಡು ರಾಷ್ಟ್ರಗಳ ನಿಯೋಗಗಳಿಂದ ನಿರ್ದಿಷ್ಟ ದಾಖಲೆ(ಒಪ್ಪಂದ)ಯನ್ನು ರಚಿಸುವುದು ಈಗಿರುವ ಅವಶ್ಯಕತೆ ಎಂದು ಡಿಮಿಟ್ರಿ ಪೆಸ್ಕೋವ್ ದೂರದರ್ಶನ ಸಂದರ್ಶನದಲ್ಲಿ ಹೇಳಿದ್ದಾರೆ. ಭವಿಷ್ಯದಲ್ಲಿ ಮಾತುಕತೆಗಾಗಿ ಸಭೆ ನಡೆಸಲು ಉಭಯ ರಾಷ್ಟ್ರಗಳು ಕೆಲವು ನಿಯಮಗಳು ಮತ್ತು ಷರತ್ತುಗಳಿಗೆ ಬದ್ಧವಾಗಿರುವುದು ನಿರ್ಣಾಯಕ ಎಂದು ಅವರು ಇದೇ ವೇಳೆ ಒತ್ತಿ ಹೇಳಿದರು. ಅಲ್ಲದೇ, ಪುಟಿನ್ ಅಂತಹ ಸಭೆ ಸಭೆಯನ್ನು ಎಂದಿಗೂ ತಳ್ಳಿಹಾಕಲಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.

ಉಕ್ರೇನ್ ವಿರುದ್ಧ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಯುದ್ಧ ಘೋಷಿಸಿ, ಸುಮಾರು ಒಂದು ತಿಂಗಳಿಗೂ ಹೆಚ್ಚಿನ ಕಾಲಾವಧಿಯಲ್ಲಿ ಉಕ್ರೇನ್ ದೇಶದ ಪ್ರಮುಖ ನಗರಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಂಭವನೀಯ ಶಾಂತಿ ಒಪ್ಪಂದಕ್ಕಾಗಿ ಉಕ್ರೇನ್ ಮತ್ತು ರಷ್ಯಾ ನಡುವೆ ಮಾತುಕತೆ ನಡೆಯುತ್ತಲೇ ಇದೆ.

ಇದನ್ನೂ ಓದಿ:ರಷ್ಯಾದ ಬೆಲ್ಗೊರೊಡ್​​​ ಮೇಲೆ ದಾಳಿ ವಿಚಾರ: ಚರ್ಚೆಗೆ ಝೆಲೆನ್ಸ್ಕಿ ನಕಾರ

For All Latest Updates

ABOUT THE AUTHOR

...view details