ಕರ್ನಾಟಕ

karnataka

ETV Bharat / international

ಪುಟಿನ್​ಗೆ ಕ್ಯಾನ್ಸರ್ ಚಿಕಿತ್ಸೆ; ಕೆಲದಿನಗಳ ಮಟ್ಟಿಗೆ ಆಪ್ತನಿಗೆ ಅಧಿಕಾರ ಹಸ್ತಾಂತರ ಸಾಧ್ಯತೆ

ರಷ್ಯಾ ಮತ್ತು ಉಕ್ರೇನ್ ನಡುವಿನ ಭೀಕರ ಯುದ್ಧದ ನಡುವೆಯೇ ರಷ್ಯಾಧ್ಯಕ್ಷ ವ್ಲಾದಿಮಿರ್ ಪುಟಿನ್ ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ತಿಳಿದುಬಂದಿದೆ.

Putin to undergo cancer treatment, handover power to loyalist Nikolai Patrushev: Reports
ಪುಟಿನ್​ಗೆ ಕ್ಯಾನ್ಸರ್ ಚಿಕಿತ್ಸೆ..ಕೆಲದಿನಗಳಿಗೆ ಅಧಿಕಾರ ಹಸ್ತಾಂತರ ಸಾಧ್ಯತೆ: ವರದಿ

By

Published : May 3, 2022, 7:18 AM IST

ಮಾಸ್ಕೋ(ರಷ್ಯಾ): ವ್ಲಾಡಿಮಿರ್ ಪುಟಿನ್ ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗುವ ಸಾಧ್ಯತೆಯಿದೆ. ಹೀಗಾಗಿ, ತಾತ್ಕಾಲಿಕವಾಗಿ ಅಧಿಕಾರವನ್ನು ದೇಶದ ಭದ್ರತಾ ಮಂಡಳಿಯ ಕಾರ್ಯದರ್ಶಿ ನಿಕೊಲಾಯ್ ಪಟ್ರುಶೇವ್ ಅವರಿಗೆ ಹಸ್ತಾಂತರಿಸಲಿದ್ದಾರೆ ಎಂದು ವರದಿಯಾಗಿದೆ. ಶಸ್ತ್ರಚಿಕಿತ್ಸೆಯ ಕಾರಣದಿಂದಾಗಿ ಪುಟಿನ್‌ಗೆ ಸ್ವಲ್ಪ ಸಮಯದ ವಿಶ್ರಾಂತಿ ಬೇಕಾಗಬಹುದು. ಕ್ಯಾನ್ಸರ್ ಮತ್ತು ಪಾರ್ಕಿನ್ಸನ್ ಸೇರಿದಂತೆ ಇತರ ಗಂಭೀರ ಕಾಯಿಲೆಗಳಿಂದ ಅವರು ಬಳಲುತ್ತಿರುವ ಬಗ್ಗೆ ವದಂತಿಗಳಿವೆ.

ಕೆಲವು ದಿನಗಳ ಹಿಂದೆ ಪುಟಿನ್ ಅವರು ನಿಕೊಲಾಯ್ ಪಟ್ರುಶೆವ್ ಅವರೊಂದಿಗೆ ಎರಡು ಗಂಟೆಗಳ ಕಾಲ ಸಂಭಾಷಣೆ ನಡೆಸಿದ್ದರು. ಪಟ್ರುಶೆವ್ ಅವರನ್ನು ಏಕೈಕ ವಿಶ್ವಾಸಾರ್ಹ ಮಿತ್ರ ಮತ್ತು ಸರ್ಕಾರದಲ್ಲಿ ಸ್ನೇಹಿತ ಎಂದು ಪುಟಿನ್ ಪರಿಗಣಿಸುತ್ತಾರೆ. ಒಂದು ವೇಳೆ ಆರೋಗ್ಯ ತೀರಾ ಹದಗೆಟ್ಟರೆ, ತಾತ್ಕಾಲಿಕವಾಗಿ ಮತ್ತಷ್ಟು ದಿನಗಳ ಕಾಲ ದೇಶದ ಅಧಿಕಾರ ಪಟ್ರುಶೆವ್ ಅವರ ಬಳಿ ಮುಂದುವರೆಯುತ್ತದೆ ಎಂದು ತಿಳಿದುಬಂದಿದೆ.

ಆದರೆ, ಪುಟಿನ್ ದೀರ್ಘಕಾಲದವರೆಗೆ ಅಧಿಕಾರವನ್ನು ಹಸ್ತಾಂತರಿಸಲು ಒಪ್ಪಿಕೊಳ್ಳುವ ಸಾಧ್ಯತೆಯಿಲ್ಲ. ದೇಶದ ನಿಯಂತ್ರಣವು ಹೆಚ್ಚೆಂದರೆ ಎರಡರಿಂದ ಮೂರು ದಿನಗಳ ಕಾಲ ಪಟ್ರುಶೇವ್ ಅವರ ಕೈಯಲ್ಲಿರಬಹುದಷ್ಟೇ. ಪಟ್ರುಶೇವ್ ಅವರು ಪುಟಿನ್ ಅವರಂತೆ ರಷ್ಯಾದ ಗುಪ್ತಚರ ಏಜೆಂಟ್ ಆಗಿ ಕೆಲಸ ಮಾಡಿದ್ದರು ಎಂಬ ಮಾಹಿತಿ ಇದೆ.

ಇದನ್ನೂ ಓದಿ:ಜೆಲೆನ್​ಸ್ಕಿದು ಯಹೂದಿ ರಕ್ತ: ಉಕ್ರೇನ್​ ಅಧ್ಯಕ್ಷರನ್ನು ಹಿಟ್ಲರ್​ಗೆ ಹೋಲಿಸಿದ ರಷ್ಯಾ

ABOUT THE AUTHOR

...view details