ಕರ್ನಾಟಕ

karnataka

ETV Bharat / international

ಜಿ20 ಶೃಂಗಸಭೆಯಲ್ಲಿ ಪುಟಿನ್ ಭಾಗವಹಿಸುವ ಸಾಧ್ಯತೆ.. ಇನ್ನೂ ಅಂತಿಮ ನಿರ್ಧಾರವಿಲ್ಲ ಎಂದ ಕ್ರೆಮ್ಲಿನ್​ - ಜಾಗತಿಕ ಆರ್ಥಿಕತೆಯು G7 ರಾಷ್ಟ್ರ

ಭಾರತದಲ್ಲಿ ಸೆಪ್ಟೆಂಬರ್​ನಲ್ಲಿ ನಡೆಯಲಿರುವ ಜಿ20 ರಾಷ್ಟ್ರಗಳ ಶೃಂಗಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾಗವಹಿಸುವ ಸಾಧ್ಯತೆ ಇದೆ. ಈ ಬಗ್ಗೆ ಕ್ರೆಮ್ಲಿನ್​ ವಕ್ತಾರರು ಸುಳಿವು ನೀಡಿದ್ದಾರೆ.

Putin may attend G20 summit in India  though no decision yet Kremlin
ಜಿ20 ಶೃಂಗಸಭೆಯಲ್ಲಿ ಪುಟಿನ್ ಭಾಗವಹಿಸುವ ಸಾಧ್ಯತೆ.. ಇನ್ನೂ ನಿರ್ಧಾರವಿಲ್ಲ ಎಂದ ಕ್ರೆಮ್ಲಿನ್​

By

Published : Mar 13, 2023, 9:26 PM IST

ಮಾಸ್ಕೋ (ರಷ್ಯಾ): ಈ ವರ್ಷದ ಅಂತ್ಯದಲ್ಲಿ ಭಾರತದಲ್ಲಿ ನಡೆಯಲಿರುವ G20 ಶೃಂಗಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾಗವಹಿಸುವ ಸಾಧ್ಯತೆಗಳಿವೆ ಎಂದು ರಷ್ಯಾ ಸರ್ಕಾರದ ಕಡೆಯಿಂದ ತಿಳಿದು ಬಂದಿದೆ. ಆದರೆ ಅಂತಿಮವಾಗಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲಾಗಿಲ್ಲ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಸೋಮವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಭಾರತದಲ್ಲಿ ನಡೆಯುವ ಶೃಂಗಸಭೆಯಲ್ಲಿ ಪುಟಿನ್ ಪಾಲ್ಗೊಳ್ಳುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಮಿಟ್ರಿ ಪೆಸ್ಕೋವ್​, "ಅದನ್ನು ತಳ್ಳಿಹಾಕಲಾಗುವುದಿಲ್ಲ" ಎಂದು ಹೇಳಿದ್ದಾರೆ. "ಆದರೆ ಇನ್ನೂ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲಾಗಿಲ್ಲ" ಎಂದು ಪೆಸ್ಕೋವ್ ಸ್ಪಷ್ಟಪಡಿಸಿದ್ದಾರೆ ಎಂದು ರಷ್ಯಾದ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಸೆಪ್ಟೆಂಬರ್‌ನಲ್ಲಿ ಜಿ20 ಶೃಂಗಸಭೆ: ಜಿ 20ಯಲ್ಲಿ ರಷ್ಯಾ ತನ್ನ ಸಂಪೂರ್ಣ ಭಾಗವಹಿಸುವಿಕೆಯನ್ನು ಮುಂದುವರೆಸಿದೆ. ಇದೇ ಹೀಗೆಯೇ ಸಾಗಲಿದೆ ಎಂದು ಪೆಸ್ಕೋವ್ ಹೇಳಿದ್ದಾರೆ. ಗ್ರೂಪ್ ಆಫ್ ಸೆವೆನ್ ಅಂದರೆ ಜಿ7 ಸ್ವರೂಪವು ಒಟ್ಟಾರೆಯಾಗಿ ಜಾಗತಿಕ ಆರ್ಥಿಕತೆಯನ್ನು ಪ್ರತಿಬಿಂಬಿಸುವುದಿಲ್ಲ ಎಂದೂ ಅವರು ಇದೆ ವೇಳೆ ಪ್ರತಿಪಾದಿಸಿದ್ದಾರೆ. ಅದಕ್ಕಾಗಿಯೇ ಮಾಸ್ಕೋ ಜಿ 20 ಮತ್ತು ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ) ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಿದೆ ಎಂದು ಪೆಸ್ಕೋವ್ ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

ಜಾಗತಿಕ ಜಿಡಿಪಿಯಲ್ಲಿ ಬ್ರಿಕ್ಸ್ ರಾಷ್ಟ್ರಗಳ ಪಾಲು ಜಿ7 ದೇಶಗಳಿಗಿಂತ ಹೆಚ್ಚಾಗಿದೆ ಎಂಬ ಪಾಶ್ಚಿಮಾತ್ಯ ವಿಶ್ಲೇಷಕರ ವರದಿಯ ಬಗ್ಗೆ ಹೇಳಿ ಎಂಬ ಮಾಧ್ಯಮದವರ ಪ್ರಶ್ನೆಗೆ ಪೆಸ್ಕೋವ್​ ಈ ಮೇಲಿನಂತೆ ಪ್ರತಿಕ್ರಿಯೆ ನೀಡಿದ್ದು, “ಈ ತಜ್ಞರ ಸಂಶೋಧನೆಗಳನ್ನು ಲೆಕ್ಕಿಸದೆ, ಬ್ರಿಕ್ಸ್ ದೇಶಗಳ ಆರ್ಥಿಕ ಪ್ರಭಾವವನ್ನು ನಾವು ಜಗತ್ತಿಗೆ ತೋರಿಸಬೇಕಿದೆ ಎಂದು ಪ್ರತಿಪಾದಿಸಿದ ಅವರು, ಜಾಗತಿಕ ಆರ್ಥಿಕತೆಯಲ್ಲಿ ನಿರಂತರವಾಗಿ ಬ್ರಿಕ್ಸ್​ ಬೆಳೆಯುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಾಗತಿಕ ಆರ್ಥಿಕತೆಯು G7 ರಾಷ್ಟ್ರಗಳಿಗೆ ಸೀಮಿತವಾಗಿಲ್ಲದಿರುವುದರಿಂದ G7 ಸ್ವರೂಪವು "ನಿಸ್ಸಂಶಯವಾಗಿ" ವಿಶ್ವದ ಆರ್ಥಿಕ ಅಗತ್ಯಗಳು ಮತ್ತು ಅಗತ್ಯಗಳನ್ನು ಪ್ರತಿಬಿಂಬಿಸಲು ವಿಫಲವಾಗಿದೆ ಎಂದು ರಷ್ಯಾ ನಂಬುತ್ತದೆ. " G20 ವಿಶಾಲವಾದ ಗುಂಪಾಗಿದ್ದು, ವ್ಯವಹಾರಗಳ ನೈಜ ಸ್ಥಿತಿಯನ್ನು ಹೆಚ್ಚು ನಿಕಟವಾಗಿ ಪ್ರತಿಬಿಂಬಿಸುತ್ತದೆ. ಆ ಬಗ್ಗೆ ನಾವು ಕಾಳಜಿ ವಹಿಸುತ್ತೇವೆ" ಎಂದು ಪೆಸ್ಕೋವ್​ ಹೇಳಿದರು.

G7 ಇಂಗ್ಲೆಂಡ್​, ಜರ್ಮನಿ, ಇಟಲಿ, ಕೆನಡಾ, US, ಫ್ರಾನ್ಸ್ ಮತ್ತು ಜಪಾನ್‌ಗಳನ್ನು ಒಳಗೊಂಡಿರುವ ಅಭಿವೃದ್ಧಿ ಹೊಂದಿದ ದೇಶಗಳ ಏಕೀಕರಣವಾಗಿದೆ. ಇದು ಮುಖ್ಯವಾಗಿ ಜಾಗತಿಕ ರಾಜಕೀಯ ಮತ್ತು ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರಗಳನ್ನು ಹುಡುಕುವುದರ ಮೇಲೆ ಕೇಂದ್ರೀಕರಿಸುತ್ತದೆ. ಸಂಸ್ಥೆಯು 1976-1997 ರಿಂದ ಏಳು ಸದಸ್ಯರ ಸ್ವರೂಪದಲ್ಲಿ ಅಸ್ತಿತ್ವದಲ್ಲಿತ್ತು. ರಷ್ಯಾ ಸಂಘಟನೆಗೆ ಸೇರಿದ ನಂತರ ಅದನ್ನು ಜಿ8 ಎಂದು ಕರೆಯಲಾಯಿತು. ಮಾರ್ಚ್ 2014 ರಲ್ಲಿ, ಉಕ್ರೇನ್‌ನಲ್ಲಿನ ಘಟನೆಗಳು ಮತ್ತು ಮಾಸ್ಕೋ ಮತ್ತು ಪಶ್ಚಿಮದ ನಡುವಿನ ಸಂಬಂಧಗಳಲ್ಲಿನ ಬಿಕ್ಕಟ್ಟಿನ ಪರಿಣಾಮವಾಗಿ, ಸಂಸ್ಥೆಯು G7 ಸ್ವರೂಪಕ್ಕೆ ಮರಳಲು ನಿರ್ಧರಿಸಿತು.

ಕಳೆದ ವರ್ಷ, ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರು G20 ನಾಯಕರ ವೇದಿಕೆಯಲ್ಲಿ ರಷ್ಯಾದ ನಿಯೋಗದ ನೇತೃತ್ವ ವಹಿಸಿದ್ದರು. 2020 ಮತ್ತು 2021 ರಲ್ಲಿ ಪುಟಿನ್ ವಿಡಿಯೊ ಲಿಂಕ್ ಮೂಲಕ ಜಿ 20 ಶೃಂಗಸಭೆಯಲ್ಲಿ ಭಾಗವಹಿಸಿದ್ದರು. 2019 ರಲ್ಲಿ ಅವರು ಜಪಾನ್‌ನಲ್ಲಿ ನಡೆದ ರಾಷ್ಟ್ರಗಳ ಮುಖ್ಯಸ್ಥರ ಸಭೆಯಲ್ಲಿ ಭಾವಹಿಸಿದ್ದರು
ಇದನ್ನು ಓದಿ:ಪತನಗೊಂಡ ಸಿಲಿಕಾನ್ ವ್ಯಾಲಿ ಬ್ಯಾಂಕ್​ ಇಂಗ್ಲೆಂಡ್​ ಶಾಖೆ ಖರೀದಿಸಿದ ಎಚ್‌ಎಸ್‌ಬಿಸಿ

ABOUT THE AUTHOR

...view details