ಮಾಸ್ಕೋ: ಉಕ್ರೇನ್ ಜೊತಗಿನ ಸಂಘರ್ಷದಲ್ಲಿ ದೇಶದ ಪರಮಾಣು ಶಸ್ತ್ರಾಗಾರಗಳನ್ನು ರಕ್ಷಣೆ ಮಾಡುವುದೇ ತಮ್ಮ ಮೊದಲ ಗುರಿಯಾಗಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ. ಪಾಶ್ಚಿಮಾತ್ಯ ರಾಷ್ಟ್ರಗಳು ಆರೋಪಿಸುತ್ತಿರುವಂತೆ ಸೂಪರ್ ಪವರ್ ಎನಿಸಿಕೊಳ್ಳಲು ತಾವು ಪರಮಾಣು ದಾಳಿ ಅಥವಾ ಸತ್ರ ಬಳಕೆ ಮಾಡುವುದಿಲ್ಲ ಎಂದು ವ್ಲಾಡಿಮಿರ್ ಪುಟಿನ್ ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ ಅವರು, ಪಾಶ್ಚಿಮಾತ್ಯ ರಾಷ್ಟ್ರಗಳ ಆರೋಪಗಳನ್ನು ತಳ್ಳಿಹಾಕಿದ್ದು, ಪರಮಾಣು ಅಸ್ತ್ರಗಳನ್ನು ಮೊದಲು ಬಳಸುವುದಿಲ್ಲ ಎಂದು ಪ್ರತಿಜ್ಞೆ ಮಾಡುವಂತೆ ಅಮೆರಿಕ ಸೇರಿದಂತೆ ಯುರೋಪಿಯನ್ ಯೂನಿಯನ್ ರಾಷ್ಟ್ರಗಳಿಗೆ ಸವಾಲು ಹಾಕಿದ್ದಾರೆ. ಮಾನವ ಹಕ್ಕುಗಳ ಮಂಡಳಿಯ ಸದಸ್ಯರೊಬ್ಬರು ರಷ್ಯಾ ಮೊದಲು ದಾಳಿ ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡುವಂತೆ ಕೇಳಿದಾಗ, ಜಾಣ್ಮೆಯಿಂದ ನುಣಿಚಿಕೊಂಡ ಪುಟಿನ್, ಪರಮಾಣು ದಾಳಿಗೆ ಒಳಗಾದಾಗಲೂ ರಷ್ಯಾ ತನ್ನ ಪರಮಾಣು ಶಸ್ತ್ರಾಗಾರವನ್ನು ದಾಳಿಯಿಂದ ರಕ್ಷಿಸಿಕೊಳ್ಳಬಹುದು ಎಂದು ಹೇಳಿದ್ದಾರೆ.
ರಾಷ್ಟ್ರದ ಅಡಿಪಾಯಕ್ಕೆ ಅಪಾಯ ಬಂದರೆ ಪರಮಾಣು ದಾಳಿ:ಯಾವುದೇ ಸಂದರ್ಭಗಳಲ್ಲಿ ಅದು ಮೊದಲು ಬಳಸದಿದ್ದರೆ, ಎರಡನೆಯದನ್ನು ಬಳಸುವುದಿಲ್ಲ ಎಂದರ್ಥ ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ರಷ್ಯಾದ ಪರಮಾಣು ಸಿದ್ಧಾಂತ ಎಂದರೆ ಎಚ್ಚರಿಕೆಯ ಪರಿಕಲ್ಪನೆಯ ಮೇಲೆ ಉಡಾವಣೆ ಎಂದು ಅರ್ಥ. ದೇಶವು ಪರಮಾಣು ದಾಳಿಯ ಅಡಿ ಬಂದರೆ ಅಥವಾ ರಷ್ಯಾದ ಅಸ್ತಿತ್ವಕ್ಕೆ ಬೆದರಿಕೆ ಬಂದರೆ ಆಗ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸಬಹುದು ಎಂದು ಹೇಳುತ್ತದೆ ಎಂದು ಪುಟಿನ್ ಸ್ಪಷ್ಟಪಡಿಸಿದ್ದಾರೆ.
ರಷ್ಯಾದ ಜಾಗ ಉಳಿಸಿಕೊಳ್ಳಲು ಸಿದ್ಧ: ರಷ್ಯಾ ತನ್ನ ಭೂಪ್ರದೇಶವನ್ನು ರಕ್ಷಿಸಲು ಲಭ್ಯವಿರುವ ಎಲ್ಲಾ ವಿಧಾನಗಳನ್ನು ಬಳಸಲು ಸಿದ್ಧವಾಗಿದೆ ಎಂದು ಪುಟಿನ್ ಇದೇ ವೇಳೆ ಹೇಳಿದ್ದಾರೆ. ನಮಗೆ ಹುಚ್ಚು ಹಿಡಿದಿಲ್ಲ. ಪರಮಾಣು ಶಸ್ತ್ರಾಸ್ತ್ರಗಳು ಯಾವುವು ಎಂಬುದನ್ನು ನಾವು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಪುಟಿನ್ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನು ಓದಿ:ಭಾರತ ದಾಳಿಗೆ ಮುಂದಾದರೆ ಯುದ್ಧಕ್ಕೆ ಸಿದ್ಧ: ಪಾಕ್ ಸೇನಾ ಮುಖ್ಯಸ್ಥ