ಲಂಡನ್:ಬ್ರಿಟನ್ ರಾಜಮನೆತನದ ರಾಜಕುಮಾರ ಹ್ಯಾರಿ ಮತ್ತು ಮೇಘನ್ ಮಾರ್ಕಲ್ ದಂಪತಿಯ ಪುತ್ರಿ ಲಿಲಿಬೆಟ್ ಡಯಾನಾ ಛಾಯಾಚಿತ್ರ ಈಗ ಬಿಡುಗಡೆಯಾಗಿದೆ. ಲಿಲಿಬೆಟ್ ಮೊದಲ ವರ್ಷದ ಹುಟ್ಟಹಬ್ಬ ಹಿನ್ನೆಲೆಯಲ್ಲಿ ಈ ಫೋಟೋಗಳು ಬಿಡುಗಡೆಯಾಗಿದೆ.
ಮೇಘನ್ ಹಾಗೂ ಪ್ರಿನ್ಸ್ ಹ್ಯಾರಿ ಪುತ್ರಿ ಲಿಲಿಬೆಟ್ ಹೊಸ ಫೋಟೋಗಳನ್ನು ಖ್ಯಾತ ಛಾಯಾಗ್ರಾಹಕ ಮಿಸಾನ್ ಹ್ಯಾರಿಮನ್ ಹಂಚಿಕೊಂಡಿದ್ದಾರೆ. ನೀಲಿ ಉಡುಪು ಧರಿಸಿರುವ ಲಿಲಿಬೆಟ್ ತಂದೆ ಹ್ಯಾರಿ ಅವರಂತೆಯೇ ಕೊದಲು ಹೊಂದಿದ್ದಾರೆ. 'ಲಿಲಿಬೆಟ್ ಪ್ರಥಮ ಹುಟ್ಟುಹಬ್ಬವನ್ನು ಕುಟುಂಬದೊಂದಿಗೆ ಆಚರಿಸುವ ಅವಕಾಶ ದೊರೆಯಿತು' ಎಂದು ಹ್ಯಾರಿಮನ್ ಚಿತ್ರ ಶೀರ್ಷಿಕೆ ನೀಡಿದ್ದಾರೆ.