ಕರ್ನಾಟಕ

karnataka

ETV Bharat / international

911 ಕ್ಕೆ ಕರೆ ಮಾಡಿದ ಕೋತಿ, ಮೃಗಾಲಯಕ್ಕೆ ಧಾವಿಸಿ ಬಂದ ಅಧಿಕಾರಿಗಳು: ಅಲ್ಲಿ ನಡೆದಿದ್ದೇನು? - ಕೋತಿ

911 ಸಂಖ್ಯೆಗೆ ಕರೆ ಮಾಡಿದ ಕೋತಿಯೊಂದು ಅಧಿಕಾರಿಗಳನ್ನು ತಬ್ಬಿಬ್ಬು ಮಾಡಿದ ಘಟನೆ ಅಮೆರಿಕದ ಕ್ಯಾಲಿಫೋರ್ನಿಯಾದ ಮೃಗಾಲಯದಲ್ಲಿ ನಡೆದಿದೆ.

911 ಕರೆ ಮಾಡಿದ ಕೋತಿ
911 ಕರೆ ಮಾಡಿದ ಕೋತಿ

By

Published : Aug 19, 2022, 5:36 PM IST

ಲಾಸ್ ಏಂಜಲೀಸ್ (ಯುನೈಟೆಡ್ ಸ್ಟೇಟ್ಸ್): ಕೋತಿಗೆ ಮತ್ತೊಂದು ಹೆಸರೇ ಚೇಷ್ಟೆ. ಮನೆಯಲ್ಲಿ ದೊಡ್ಡವರು ಬೈಯ್ಯುವಾಗಲೂ ಕೋತಿ ಚೇಷ್ಟೆ ಮಾಡಬೇಡ ಅಂತಾರೆ. ಇದಕ್ಕೊಂದು ಹೊಸ ನಿದರ್ಶನ ಸಿಕ್ಕಿದೆ.

ಅಮೆರಿಕದ ಕ್ಯಾಲಿಫೋರ್ನಿಯಾದ ಮೃಗಾಲಯದಲ್ಲಿ 911 ಸಂಖ್ಯೆಗೆ ಕೋತಿಯೊಂದು ಕರೆ ಮಾಡಿದ್ದು ಮೃಗಾಲಯದಲ್ಲಿ ಏನಾಗಿರಬಹುದೋ ಎಂದು ಅಧಿಕಾರಿಗಳು ಎದ್ದುಬಿದ್ದು ಬಂದು ಪರಿಶೀಲಿಸಿದಾಗ ಕೋತಿ ಚೇಷ್ಟೆ ಗೊತ್ತಾಗಿದೆ. ಶನಿವಾರ ರಾತ್ರಿ ಇಂಥದ್ದೊಂದು ಘಟನೆ ನಡೆದಿದೆ.

ರೂಟ್ ಎಂಬ ಹೆಸರಿನ ಕ್ಯಾಪುಚಿನ್ ಹೆಣ್ಣು ಕೋತಿಯು ಮೃಗಾಲಯದ ಸೆಲ್‌ಫೋನ್‌ನಲ್ಲಿ 911 ಡಯಲ್ ಮಾಡಿದೆ. "ಆಕೆ ನಾನು ಫೋನ್​ ಬಳಸುವಾಗ ನನ್ನನ್ನು ಗಮನಿಸುತ್ತಿದ್ದಳು. ಫೋನ್‌ನೊಂದಿಗೆ ಆಟವಾಡುವುದನ್ನು ನೋಡುತ್ತಿದ್ದಳು. ಹಾಗಾಗಿ ಆಕೆಯೇ ಇದನ್ನು ಮಾಡಿದ್ದಾಳೆ" ಎಂದು ಮೃಗಾಲಯದ ಮುಖ್ಯಸ್ಥ ಲಿಸಾ ಜಾಕ್ಸನ್ ಹೇಳುತ್ತಾರೆ.

ಸ್ಯಾನ್ ಲೂಯಿಸ್ ಒಬಿಸ್ಪೋ ಕೌಂಟಿಯಲ್ಲಿದ್ದ ಅಧಿಕಾರಿಗಳು ಈ ಕರೆಯಿಂದ ಲಾಸ್ ಏಂಜಲೀಸ್‌ನ ಉತ್ತರಕ್ಕೆ ಇರುವ 200 ಮೈಲಿ ದೂರದ (320 ಕಿಲೋಮೀಟರ್) ಈ ಮೃಗಾಲಯಕ್ಕೆ ಬಂದಿದ್ದಾರೆ. ಆದರೆ, ಪಾಪ ಅಷ್ಟೊಂದು ದೂರದಿಂದ ದಣಿದು ಬಂದ ಅಧಿಕಾರಿಗಳಿಗೆ ಅಲ್ಲಿ ಯಾವುದೇ ತೊಂದರೆ ಆಗಿಲ್ಲವೆಂದು ಖಾತ್ರಿಯಾಗಿ ಹಿಂತಿರುಗಿದ್ದಾರೆ.

ಅಧಿಕಾರಿಗಳು ಇಲ್ಲಿಗೆ ಬಂದ ನಂತರ, ಕರೆ ಮಾಡಿದ್ದು ಯಾರು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಮುಂದಾದರು. ಅದರಂತೆ ಅವರು ತನಿಖೆ ಮಾಡಲು ಪ್ರಾರಂಭಿಸಿದರು. ನಂತರ ಅವರಿಗೆ ಇದು ಕಪುಚಿನ್ ಕೋತಿ ಕೆಲಸ ಎಂದು ಗೊತ್ತಾಗಿದೆ. ಈ ಸಂಗತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

911 ದೂರವಾಣಿ ಸಂಖ್ಯೆ ಸಾರ್ವಜನಿಕ ಸುರಕ್ಷತೆಯನ್ನು ಕಾಪಾಡಲು ಸ್ಥಾಪಿಸಲಾಗಿದೆ. ಇದು ನೇರ ಪ್ರವೇಶವನ್ನು ಅಮೆರಿಕದ ಸಾರ್ವಜನಿಕರಿಗೆ ಒದಗಿಸುತ್ತದೆ. ಸಾಮಾನ್ಯವಾಗಿ, 911 ಯಾವುದೇ ಪೊಲೀಸ್, ಅಗ್ನಿಶಾಮಕ ಅಥವಾ ವೈದ್ಯರಿಗೆ ಇಲ್ಲಿ ತುರ್ತು ಸಂಖ್ಯೆಯಾಗಿರುತ್ತದೆ.

ಇದನ್ನೂ ಓದಿ: ನ್ಯಜೀವಿ ಕಳ್ಳಸಾಗಣೆಗೆ ಪ್ರಯತ್ನ... ಏರ್​ಪೋರ್ಟ್​ನಲ್ಲಿ ಭಾರತೀಯ ವ್ಯಕ್ತಿಯ ಬಂಧನ, ಮುದ್ದಾದ ಪ್ರಾಣಿಗಳು ವಶ

ABOUT THE AUTHOR

...view details