ಕರ್ನಾಟಕ

karnataka

ETV Bharat / international

ಶ್ರೀಲಂಕಾ ಆರ್ಥಿಕ ಬಿಕ್ಕಟು : ಅಧ್ಯಕ್ಷ ಗೋತಬಯ ರಾಜಪಕ್ಸೆ ಅವರಿಂದ ಸಚಿವ ಸಂಪುಟ ವಿಸ್ತರಣೆ - ಶ್ರೀಲಂಕಾ ಆರ್ಥಿಕ ಬಿಕ್ಕಟು

ಶ್ರೀಲಂಕಾದಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಸಚಿವ ಸಂಪುಟದ ವಿಸ್ತರಣೆ ಮಾಡಲಾಗಿದೆ. ಶ್ರೀಲಂಕಾದ ನೂತನ ಅಧ್ಯಕ್ಷ ಗೋತಬಯ ರಾಜಪಕ್ಸೆಯವರು ಎಂಟು ನೂತನ ಸಚಿವರನ್ನು ಸೇರ್ಪಡೆಗೊಳಿಸುವುದರೊಂದಿಗೆ ಸಚಿವ ಸಂಪುಟವನ್ನು ವಿಸ್ತರಿಸಿದ್ದಾರೆ..

president-rajapaksa-swears-in-8-more-ministers-amid-sri-lanka-crisis
ಶ್ರೀಲಂಕಾ ಆರ್ಥಿಕ ಬಿಕ್ಕಟು : ಅಧ್ಯಕ್ಷ ಗೋತಬಯ ರಾಜಪಕ್ಸೆ ಸೇರಿ, 8 ಸಚಿವರಿಂದ ಪ್ರಮಾಣ ವಚನ ಸ್ವೀಕಾರ

By

Published : May 23, 2022, 1:35 PM IST

Updated : May 23, 2022, 3:38 PM IST

ಕೊಲಂಬೊ (ಶ್ರೀಲಂಕಾ) :ಶ್ರೀಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಸೆಯವರು ಇಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನ ನಡುವೆಯೂ ತಮ್ಮ ಸಚಿವ ಸಂಪುಟವನ್ನು ವಿಸ್ತರಿಸಿದ್ದಾರೆ.

ತಮ್ಮ ಸಚಿವ ಸಂಪುಟಕ್ಕೆ ಎಂಟು ನೂತನ ಸಚಿವರನ್ನು ಸೇರ್ಪಡೆಗೊಳಿಸುವುದರೊಂದಿಗೆ ಸಚಿವ ಸಂಪುಟವನ್ನು ವಿಸ್ತರಿಸಿದ್ದಾರೆ. ಆದರೆ, ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿರುವ ರಾಷ್ಟ್ರದ ಆರ್ಥಿಕ ವ್ಯವಹಾರಗಳನ್ನು ನಿರ್ವಹಿಸಲು ಹಣಕಾಸು ಸಚಿವರನ್ನೇ ನೇಮಿಸಿಲ್ಲ.

ಶ್ರೀಲಂಕಾದ ನೂತನ ಪ್ರಧಾನಿಯಾಗಿ ರನಿಲ್ ವಿಕ್ರಮಸಿಂಘೆ ಅವರನ್ನು ನೇಮಕ ಮಾಡಿದ ಒಂದು ವಾರದ ಬಳಿಕ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಶ್ರೀಲಂಕಾದ ಸಚಿವ ಸಂಪುಟದಲ್ಲಿ ನೇಮಕಗೊಂಡ ನೂತನ ಸಚಿವರು:

ಸಚಿವರ ಹೆಸರು ಖಾತೆಗಳು
ಡಗ್ಲಾಸ್ ದೇವಾನಂದ ಮೀನುಗಾರಿಕೆ
ಬಂಡುಲ ಗುಣವರ್ಧನ ಸಾರಿಗೆ ಮತ್ತು ಹೆದ್ದಾರಿ ಮತ್ತು ಸಮೂಹ ಮಾಧ್ಯಮ
ಕೆಹೆಲಿಯ ರಂಬುಕವೆಲ್ಲಾ ಆರೋಗ್ಯ, ನೀರು ಸರಬರಾಜು
ರಮೇಶ ಪತಿರಣ ಕೈಗಾರಿಕೆ
ಮಹಿಂದಾ ಅಮರವೀರ ಕೃಷಿ ಮತ್ತು ವನ್ಯಜೀವಿ ಸಂರಕ್ಷಣಾ
ವಿದುರ ವಿಕ್ರಮನಾಯಕ ಬುದ್ಧಶಾಸನ, ಧರ್ಮ ಮತ್ತು ಸಂಸ್ಕೃತಿ
ನಾಸೀರ್ ಅಹಮದ್ ಪರಿಸರ
ರೋಶನ್ ರಣಸಿಂಗ್ ನೀರಾವರಿ, ಕ್ರೀಡೆ ಮತ್ತು ಯುವಜನ

ಸದ್ಯ ಪೂರ್ಣಪ್ರಮಾಣದ ಸಚಿವ ಸಂಪುಟದ ವಿಸ್ತರಣೆವರೆಗೆ ಸ್ಥಿರತೆಯನ್ನು ಕಾಯಲು ಶ್ರೀಲಂಕಾದ ಅಧ್ಯಕ್ಷ ರಾಜಪಕ್ಸೆ ನಿರ್ಧರಿಸಿದ್ದಾರೆ. ಮಹೀಂದಾ ರಾಜಪಕ್ಸೆಯ ರಾಜೀನಾಮೆ ಬಳಿಕ ಸಹೋದರ ಗೋತಬಯ ರಾಜಪಕ್ಸೆ ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಓದಿ :'ವಾಹ್..! ನೀನು ಇದನ್ನು ಹೇಗೆ ಕಲಿತೆ?': ಜಪಾನಿ ಬಾಲಕನ ಮಾತಿನಿಂದ ಸಂತಸಗೊಂಡ ಮೋದಿ

Last Updated : May 23, 2022, 3:38 PM IST

ABOUT THE AUTHOR

...view details