ವಾಷಿಂಗ್ಟನ್:ಟಾಟಾ ಗ್ರೂಫ್ನ ಏರ್ ಇಂಡಿಯಾ ಮತ್ತು ಬೋಯಿಂಗ್ ಮಧ್ಯೆ ನಡೆದ ವಿಮಾನ ಖರೀದಿ ಒಪ್ಪಂದದಿಂದ ಅಮೆರಿಕದ 10 ಲಕ್ಷ ಮಂದಿಗೆ ಉದ್ಯೋಗ ದೊರಕಲಿದೆ. ಇದೊಂದು ಉಭಯ ದೇಶಗಳ ಹೆಗ್ಗುರುತಿನ ಒಪ್ಪಂದವಾಗಿದೆ ಎಂದು ಅಧ್ಯಕ್ಷ ಜೋ ಬೈಡನ್ ಸಂತಸ ವ್ಯಕ್ತಪಡಿಸಿದ್ದಾರೆ. ಟಾಟಾ ಗ್ರೂಫ್ನ ಏರ್ ಇಂಡಿಯಾ ಮತ್ತು ಬೋಯಿಂಗ್ ಮಧ್ಯೆ 34 ಬಿಲಿಯನ್ ಡಾಲರ್ಗಳ 220 ವಿಮಾನ ಖರೀದಿ ಒಪ್ಪಂದದ ಬಳಿಕ ಅಮೆರಿಕದ ಅಧ್ಯಕ್ಷರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆ ಮಾಡಿ ಸಂತಸ ಹಂಚಿಕೊಂಡಿದ್ದಾರೆ.
ಈ ಐತಿಹಾಸಿಕ ಒಪ್ಪಂದದಿಂದ ಅಮೆರಿಕದಲ್ಲಿ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. 44 ರಾಜ್ಯಗಳ ಜನರು ಕೆಲಸ ಪಡೆಯಲಿದ್ದಾರೆ. ಈ ಒಪ್ಪಂದ ಭಾರತ ಮತ್ತು ಅಮೆರಿಕದ ನಡುವಿನ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲಿದೆ ಎಂದು ಎಂದು ಬೈಡನ್ ಇದೇ ವೇಳೆ ಹೇಳಿದ್ದಾರೆ.
ಬೋಯಿಂಗ್ ಮತ್ತು ಏರ್ ಇಂಡಿಯಾ ನಡುವೆ ಒಪ್ಪಂದದಂತೆ 190 B737 MAX, 20 B787, ಮತ್ತು 10 B777X ಪ್ರಕಾರದ 220 ವಿಮಾನಗಳಿಗೆ ಭಾರತ ಆರ್ಡರ್ ನೀಡಿದೆ. ಇದರ ಬೆಲೆ 34 ಅಮೆರಿಕನ್ ಡಾಲರ್ ಆಗಿರಲಿದೆ. ಇದರೊಂದಿಗೆ ಹೆಚ್ಚುವರಿವಾಗಿ 50 ಬೋಯಿಂಗ್ 737 MAX ಮತ್ತು 20 ಬೋಯಿಂಗ್ 787 ವಿಮಾನಗಳಿಗೂ ಆರ್ಡರ್ ನೀಡಲಾಗಿದೆ. ಇದರ 45.9 ಬಿಲಿಯನ್ ಡಾಲರ್ ಒಪ್ಪಂದವಾಗಿದೆ. ಒಟ್ಟು 290 ವಿಮಾನಗಳನ್ನು ಭಾರತ ಖರೀದಿ ಮಾಡಲಿದೆ.