ಕರ್ನಾಟಕ

karnataka

ETV Bharat / international

Indonesia earthquake: ಇಂಡೋನೇಷ್ಯಾದಲ್ಲಿ 6.4 ತೀವ್ರತೆಯ ಪ್ರಬಲ ಭೂಕಂಪ.. ಮನೆ, ಆಸ್ಪತ್ರೆಗಳಿಗೆ ಹಾನಿ - Indonesia

ಇಂಡೋನೇಷ್ಯಾದಲ್ಲಿ 6.4 ತೀವ್ರತೆಯ ಭೂಕಂಪ ಉಂಟಾಗಿದೆ. ಮನೆಗಳು, ಆಸ್ಪತ್ರೆಗಳು ಹಾನಿಗೀಡಾಗಿವೆ.

ಇಂಡೋನೇಷ್ಯಾದಲ್ಲಿ ಭೂಕಂಪ
ಇಂಡೋನೇಷ್ಯಾದಲ್ಲಿ ಭೂಕಂಪ

By

Published : Jul 1, 2023, 10:51 AM IST

ಜಕಾರ್ತ:ಭೂಕಂಪಗಳಿಗೆ ಹೆಸರುವಾಸಿಯಾದ ಇಂಡೋನೇಷ್ಯಾದಲ್ಲಿ ನಿನ್ನೆ ಸಂಜೆ 8 ಗಂಟೆ ಆಸುಪಾಸಿನಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಇದರಿಂದ ಮನೆಗಳು, ಕಟ್ಟಡಗಳಿಗೆ ತೀವ್ರ ಹಾನಿ ಉಂಟಾಗಿದೆ. ರಿಕ್ಟರ್​ ಮಾಪಕದಲ್ಲಿ 6.4 ತೀವ್ರತೆ ದಾಖಲಾಗಿದೆ. ಈವರೆಗೂ ಯಾವುದೇ ಪ್ರಾಣ ಹಾನಿಯಾದ ಬಗ್ಗೆ ವರದಿಯಾಗಿಲ್ಲ.

ಪಶ್ಚಿಮ ಪ್ರಾಂತ್ಯದ ಯೋಗಕರ್ತಾದಲ್ಲಿ ಈ ಕಂಪನ ಉಂಟಾಗಿದೆ. ರಾತ್ರಿ 7.57 ನಿಮಿಷದಲ್ಲಿ ಭೂಮಿ ಗಢಗಢ ನಡುಗಿದೆ. ಭೂಮಿ ಕಂಪಿಸಿದ ಏಟಿಗೆ ಕೆಲ ಮನೆಗಳು ಬಿರುಕು ಬಿಟ್ಟಿದ್ದರೆ, ಅಶಕ್ತ ಮನೆಗಳು ಉರುಳಿವೆ ಎಂದು ತಿಳಿದುಬಂದಿದೆ. 6.4 ತೀವ್ರತೆಯ ಭೂಕಂಪ ಇದಾಗಿದೆ ಹವಾಮಾನ ಮತ್ತು ಜಿಯೋಫಿಸಿಕ್ಸ್ ಏಜೆನ್ಸಿಯ ಮುಖ್ಯಸ್ಥರು ತಿಳಿಸಿದ್ದಾರೆ.

ಭೂಕಂಪನದ ಕೇಂದ್ರಬಿಂದು ಬಂತುಲ್ ಜಿಲ್ಲೆಯ ವಾಯುವ್ಯದ 86 ಕಿಮೀ ದೂರ ಮತ್ತು ಸಮುದ್ರತಳದ 25 ಕಿಮೀ ಆಳದಲ್ಲಿ ಎದ್ದಿದೆ ಎಂದು ಸಂಸ್ಥೆ ತಿಳಿಸಿದೆ. ಸಮೀಪದ ಮಧ್ಯ ಜಾವಾ ಮತ್ತು ಪೂರ್ವ ಜಾವಾ ಪ್ರಾಂತ್ಯಗಳಲ್ಲಿಯೂ ಭೂಕಂಪನದ ಅನುಭವ ಉಂಟಾಗಿದೆ.

ತೀವ್ರ ಭೂಕಂಪನದ ಬಳಿಕ ಐದಕ್ಕೂ ಹೆಚ್ಚು ಲಘು ಕಂಪನಗಳು ಉಂಟಾಗಿವೆ. ಮನೆಯ ಗೋಡೆಗಳು ಬಿರುಕು ಬಿಟ್ಟಿದ್ದಲ್ಲಿ ಜನರು ಅಂಥವುಗಳನ್ನು ತೊರೆಯಲು ಅಲ್ಲಿನ ಅಧಿಕಾರಿಗಳು ಸೂಚಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ:Earthquake: ಹರಿಯಾಣ ಸೇರಿದಂತೆ ಉತ್ತರ ಭಾರತದ ಕೆಲ ಭಾಗಗಳಲ್ಲಿ ಕಂಪಿಸಿದ ಭೂಮಿ

ಭೂಕಂಪನವು ಯೋಗ್ಯಕರ್ತಾ ಪ್ರಾಂತ್ಯದಲ್ಲಿನ ಮನೆಗಳು ಮತ್ತು ಆಸ್ಪತ್ರೆಯನ್ನೂ ಹಾನಿಗೊಳಿಸಿದೆ. ಬಂತುಲ್ ಜಿಲ್ಲೆಯಲ್ಲೂ ಇದು ಹಾನಿ ಸೃಷ್ಟಿಸಿದೆ. ಮನೆಗಳ ಛಾವಣಿಗಳು ಕೆಳಗೆ ಬಿದ್ದಿವೆ. ಆಸ್ಪತ್ರೆಯ ಗೋಡೆಗಳ ಭಾಗಗಳಿಗೆ ಹಾನಿಯಾಗಿದೆ ಎಂದು ಎಂದು ಪ್ರಾಂತೀಯ ವಿಪತ್ತು ನಿರ್ವಹಣಾ ತಂಡದ ಅಧಿಕಾರಿ ಇಂದ್ರೋ ಸಂಬೋಡೊ ಮಾಹಿತಿ ನೀಡಿದ್ದಾರೆ.

ಮೂರು ತಿಂಗಳ ಹಿಂದೆ ಕಂಪಿಸಿದ್ದ ಭೂಮಿ:ಇದಕ್ಕೂ ಮೊದಲು 3 ತಿಂಗಳ ಹಿಂದೆ ಇಂಡೋನೇಷ್ಯಾದ ಜಾವಾ ದ್ವೀಪದ ಉತ್ತರದ ಸಮುದ್ರದಲ್ಲಿ 7.0 ತೀವ್ರತೆಯ ಭೂಕಂಪ ಸಂಭವಿಸಿತ್ತು. ಇಂಡೋನೇಷ್ಯಾದ ಭೂವೈಜ್ಞಾನಿಕ ಸಂಸ್ಥೆಯು 594 ಕಿಲೋಮೀಟರ್ (370 ಮೈಲುಗಳು) ಆಳದಲ್ಲಿ ಭೂಕಂಪನದ ಕೇಂದ್ರಬಿಂದುವನ್ನು ಪತ್ತೆಹಚ್ಚಿತ್ತು. ಕಂಪಿಸಿದ ವೇಳೆ ಸಮುದ್ರದ ಅಲೆಗಳು ಎದ್ದಿರಲಿಲ್ಲ. ಇದರಿಂದ ಯಾವುದೇ ಹಾನಿ ಉಂಟಾಗಿರಲಿಲ್ಲ.

ಜನವರಿಯಲ್ಲೂ ಪಶ್ಚಿಮ ಇಂಡೋನೇಷ್ಯಾದಲ್ಲಿ ಪ್ರಬಲವಾದ ಭೂಕಂಪ ಸಂಭವಿಸಿತ್ತು. ಸುಮಾರು 6.0 ತೀವ್ರತೆಯ ಭೂಕಂಪ ಕರಾವಳಿ ಪ್ರದೇಶದಲ್ಲಿ ಕೇಂದ್ರೀಕೃತವಾಗಿತ್ತು. ಭೂಮಿಯ 48 ಕಿಲೋಮೀಟರ್ ಆಳದಲ್ಲಿ ಕಂಪನವಾಗಿದೆ ಎಂದು ಅಮೆರಿಕದ ಜಿಯೋಲಾಜಿಕಲ್ ಸರ್ವೆ ಹೇಳಿತ್ತು. ಕಂಪನದಲ್ಲಿ ಗಂಭೀರ ಹಾನಿ ಅಥವಾ ಸಾವು ನೋವು ಸಂಭವಿಸಿದ ಬಗ್ಗೆ ವರದಿಗಳಿರಲಿಲ್ಲ.

ಇಂಡೋನೇಷ್ಯಾ ವಿಶಾಲವಾದ ದ್ವೀಪಸಮೂಹವಾಗಿದ್ದು, 270 ಮಿಲಿಯನ್‌ಗಿಂತಲೂ ಹೆಚ್ಚು ಜನಸಂಖ್ಯೆ ಇಲ್ಲಿದೆ. ಇದು ರಿಂಗ್ ಆಫ್ ಫೈಯರ್‍ನ ಪದರದಲ್ಲಿದ್ದು, ಆಗಾಗ್ಗೆ ಭೂಕಂಪಗಳು ಮತ್ತು ಜ್ವಾಲಾಮುಖಿ ಸ್ಪೋಟಗಳಂತಹ ವಿಪತ್ತುಗಳು ನಡೆಯುತ್ತಿರುತ್ತವೆ.

ಇದನ್ನೂ ಓದಿ:Bus burnt: ರಸ್ತೆ ಅಪಘಾತದಿಂದ ಬಸ್​ಗೆ ಬೆಂಕಿ ಹೊತ್ತಿಕೊಂಡು 25 ಪ್ರಯಾಣಿಕರು ಸಜೀವ ದಹನ.. 8 ಮಂದಿ ಪಾರಾಗಿದ್ದು ಹೇಗೆ?

ABOUT THE AUTHOR

...view details