ವಾರ್ಸಾ:ರಷ್ಯಾ ತನ್ನ ಅನಿಲ ಸರಬರಾಜಿಗೆ ರಷ್ಯಾದ ರೂಬಲ್‌ಗಳಲ್ಲಿ ಪೋಲೆಂಡ್ ಪಾವತಿಸಬೇಕೆಂಬ ಬೇಡಿಕೆಯನ್ನು ನಿರಾಕರಿಸಿದ ನಂತರ ಬುಧವಾರ ಬೆಳಗ್ಗೆಯಿಂದ ಪೋಲೆಂಡ್‌ಗೆ ರಷ್ಯಾ ನೈಸರ್ಗಿಕ ಅನಿಲ ವಿತರಣೆಯನ್ನು ಸ್ಥಗಿತಗೊಳಿಸಲು ಸೂಚಿಸಿದೆ ಎಂದು ಪೋಲಿಷ್ ಅಧಿಕಾರಿಗಳು ತಿಳಿಸಿದ್ದಾರೆ.
ರಷ್ಯಾದ ಅನಿಲ ದೈತ್ಯ ಗಾಜ್‌ಪ್ರೊಮ್‌ನಿಂದ ಯಮಲ್-ಯುರೋಪ್ ಪೈಪ್‌ಲೈನ್ ಮೂಲಕ ವಿತರಣೆ ನಿಲ್ಲಲಿವೆ ಎಂದು ಸೂಚಿಸಲಾಗಿದೆ ಎಂದು ಪೋಲೆಂಡ್‌ನ ರಾಜ್ಯ ಅನಿಲ ಕಂಪನಿ PGNiG ಹೇಳಿದೆ.
ರಷ್ಯಾದ ಇಂಧನ ಮೂಲಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ವರ್ಷಗಳ ಕಾಲ ಕೆಲಸ ಮಾಡಿದ್ದೇವೆ. ಈ ಪರಿಸ್ಥಿತಿಯನ್ನು ಪೋಲೆಂಡ್ ಎದುರಿಸಲು ಸಿದ್ಧವಾಗಿದೆ. ಸದ್ಯ ಪೋಲಿಷ್ ಮನೆಗಳಲ್ಲಿ ಗ್ಯಾಸ್ ಕೊರತೆ ಇಲ್ಲ ಎಂದು ಹವಾಮಾನ ಸಚಿವೆ ಅನ್ನಾ ಮೊಸ್ಕ್ವಾ ಒತ್ತಿ ಹೇಳಿದರು.
ಓದಿ:ತೈಲ ಬೆಲೆಗಳ ಏರಿಕೆಯಿಂದಾಗಿ ಭಾರತದಲ್ಲಿ ಹಣದುಬ್ಬರ ಹೆಚ್ಚಳ, ಕಡಿವಾಣಕ್ಕೆ ಕ್ರಮ ಅಗತ್ಯ : ಐಎಂಎಫ್
ರಷ್ಯಾ ಯಮಲ್ ಪೈಪ್‌ಲೈನ್ ಮೂಲಕ ಪೋಲೆಂಡ್ ಮತ್ತು ಬೆಲಾರಸ್ ಪೈಪ್‌ಲೈನ್ ಮೂಲಕ ಜರ್ಮನಿಗೆ ನೈಸರ್ಗಿಕ ಅನಿಲ ಸಾಗಿಸುತ್ತದೆ. ಪೋಲೆಂಡ್ ಪ್ರತಿವರ್ಷ ಸುಮಾರು 9 ಬಿಲಿಯನ್ ಕ್ಯೂಬಿಕ್ ಮೀಟರ್ ರಷ್ಯಾದ ಅನಿಲವನ್ನು ಪಡೆಯುತ್ತಿದೆ.
ಹೊಸ ಕಾರ್ಯವಿಧಾನದ ಅಡಿ ಅನಿಲ ಸರಬರಾಜಿಗೆ ರಷ್ಯಾದ ರೂಬಲ್‌ಗಳಲ್ಲಿ ಪೋಲೆಂಡ್ ಪಾವತಿಸಬೇಕು ಎಂದು ರಷ್ಯಾದ ಸುದ್ದಿ ಸಂಸ್ಥೆ ಟಾಸ್ ಗಾಜ್‌ಪ್ರೊಮ್ ಉಲ್ಲೇಖಿಸಿದೆ. ಆದರೆ, ರಷ್ಯಾದ ಕಂಪನಿಯು ಅನಿಲ ಸರಬರಾಜನ್ನು ನಿಲ್ಲಿಸಿರುವುದರ ಬಗ್ಗೆ ದೃಢೀಕರಿಸಲಿಲ್ಲ. ಪೋಲೆಂಡ್ 1990 ರ ದಶಕದಿಂದಲೂ ರಷ್ಯಾದ ಶಕ್ತಿಯಿಂದ ದೂರವಿರಲು ಕೆಲಸ ಮಾಡುತ್ತಿದೆ ಮತ್ತು ಈ ವರ್ಷ ರಷ್ಯಾದ ಅನಿಲದ ಮೇಲಿನ ತನ್ನ ಅವಲಂಬನೆಯನ್ನು ಕೊನೆಗೊಳಿಸುವ ನಿರೀಕ್ಷೆಯಿದೆ.