ಫಿಲಡೆಲ್ಫಿಯಾ(ಯು ಎಸ್): ಫಿಲಡೆಲ್ಫಿಯಾದಲ್ಲಿ ಶನಿವಾರ ತಡರಾತ್ರಿ ನಡೆದ ಗುಂಡಿನ ದಾಳಿಯಲ್ಲಿ ಮೂವರು ಸಾವಿಗೀಡಾಗಿದ್ದಾರೆ ಮತ್ತು 11ಕ್ಕೂ ಹೆಚ್ಚು ಜನ ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸ್ ಅಧಿಕಾರಿಗಳು ಫಿಲಡೆಲ್ಫಿಯಾ ಡೌನ್‌ಟೌನ್‌ನ ಸೌತ್ ಸ್ಟ್ರೀಟ್‌ನಲ್ಲಿ ಗಸ್ತು ತಿರುಗುತ್ತಿದ್ದಾಗ ಗುಂಡಿನ ಶಬ್ದ ಕೇಳಿದ್ದಾರೆ. ಆ ವೇಳೆ ಮೊದಲು ಶಂಕಿತನೋ ದೊಡ್ಡ ಗುಂಪೊಂದರ ಮೇಲೆ ಗುಂಡು ಹಾರಿಸುವುದು ಕಂಡುಬಂದಿದೆ. ಈ ವೇಳೆ ಅಧಿಕಾರಿಯು ಶಂಕಿತರಲ್ಲಿ ಒಬ್ಬನ ಮೇಲೆ ಸುಮಾರು 30 ಅಡಿ (9 ಮೀಟರ್) ದೂರದಿಂದ ಗುಂಡು ಹಾರಿಸಿದ್ದಾರೆ. ಆದರೆ ಶಂಕಿತನಿಗೆ ಗುಂಡು ಹೊಡೆದಿದೆಯೇ ಎಂಬುದು ಸ್ಪಷ್ಟವಾಗಿಲ್ಲ.