ಅಥೆನ್ಸ್( ಗ್ರೀಸ್):ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಅಥೆನ್ಸ್‌ಗೆ ಭೇಟಿ ನೀಡಿದ್ದಾರೆ. 40 ವರ್ಷಗಳ ಬಳಿಕ ಭಾರತೀಯ ಪ್ರಧಾನಿಯೊಬ್ಬರು ಗ್ರೀಸ್‌ಗೆ ಮೊದಲ ಭೇಟಿ ನೀಡಿದ್ದಾರೆ. ಇದಕ್ಕಾಗಿ ಅಥೆನ್ಸ್‌ನಲ್ಲಿ ಮೋದಿ ಸ್ವಾಗತಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿತ್ತು.
ಯುರೋಪಿನ ಐತಿಹಾಸಿಕ ಭೂಮಿಗೆ ಇದು ನನ್ನ ಮೊದಲ ಭೇಟಿಯಾಗಿದೆ. 40 ವರ್ಷಗಳ ನಂತರ ಗ್ರೀಸ್‌ಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿ ಎಂಬ ಗೌರವ ನನಗೆ ದೊರೆತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.
ಗ್ರೀಸ್‌ಗೆ ಬಂದಿಳಿದ ಪ್ರಧಾನಿಗೆ ಭಾರತೀಯ ಸಮುದಾಯವು ಅಥೆನ್ಸ್‌ನಲ್ಲಿ ಗ್ರೀಕ್ ಶಿರಸ್ತ್ರಾಣ ಉಡುಗೊರೆಯಾಗಿ ನೀಡುವ ಮೂಲಕ ಅವರಿಗೆ ಆತ್ಮೀಯ ಸ್ವಾಗತ ಕೋರಿದೆ. ಅಥೆನ್ಸ್‌ನ ಹೋಟೆಲ್ ಗ್ರಾಂಡೆ ಬ್ರೆಟಾಗ್ನೆ ಹೊರಗೆ ಜಮಾಯಿಸಿದ ಅನಿವಾಸಿ ಭಾರತೀಯರು ಗ್ರೀಸ್‌ಗೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಗ್ರೀಸ್‌ಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿ ಅಲ್ಲಿನ ಪ್ರಧಾನಿ ಮಿತ್ಸೋಟಾಕಿಸ್ ಅವರನ್ನು ಭೇಟಿ ಮಾಡಲಿದ್ದು, ಉಭಯ ದೇಶಗಳ ನಡುವಿನ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ಸಂಬಂಧ ಮಹತ್ವದ ಮಾತುಕತೆ ನಡೆಸಲಿದ್ದಾರೆ. ಪ್ರಧಾನಮಂತ್ರಿ ಮೋದಿಯವರು ಎರಡೂ ದೇಶಗಳ ನಡುವಣ ವ್ಯಾಪಾರ ವಹಿವಾಟುಗಳ ಬಗ್ಗೆ ಚರ್ಚಿಸಲಿದ್ದಾರೆ. ಅಷ್ಟೇ ಅಲ್ಲ ಗ್ರೀಸ್‌ನಲ್ಲಿರುವ ಭಾರತೀಯ ಸಮುದಾಯದೊಂದಿಗೆ ಪ್ರಧಾನಿ ಸಂವಾದ ನಡೆಸಲಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ಬ್ರಿಕ್ಸ್ ಶೃಂಗಸಭೆ ಮುಕ್ತಾಯದ ನಂತರ ಪ್ರಧಾನಿ ಇಂದು ಅಥೆನ್ಸ್‌ಗೆ ತೆರಳಲಿದ್ದಾರೆ. 1983 ರಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿ ಗ್ರೀಸ್‌ಗೆ ಭೇಟಿ ನೀಡಿದ್ದರು. ಇದು ಭಾರತದ ಪ್ರಧಾನಿಯೊಬ್ಬರು ಗ್ರೀಸ್‌ಗೆ ಭೇಟಿ ನೀಡಿದ ಕೊನೆಯ ಪ್ರಧಾನಿ ಆಗಿದ್ದರು. 83 ರ ಬಳಿಕ ಈಗ ಪ್ರಧಾನಿ ಗ್ರೀಸ್ ಪ್ರವಾಸ ಕೈಗೊಂಡಿದ್ದಾರೆ.
ಪ್ರಧಾನಿ ಸ್ವಾಗತಕ್ಕೆ ಭರ್ಜರಿ ಸಿದ್ಧತೆ:ಪ್ರಧಾನಿ ಗ್ರೀಸ್‌ಗೆ ಆಗಮಿಸುವ ಮುನ್ನಭಾರತೀಯ ಸಮುದಾಯ ಪ್ರಧಾನಿ ಸ್ವಾಗತಿಸಲು ಪೂರ್ವ ತಯಾರಿ ಮಾಡಿಕೊಂಡಿತ್ತು. ಗ್ರೀಕ್ ವಿದ್ಯಾರ್ಥಿಗಳು, ಬಾಲಿವುಡ್ ನೃತ್ಯ ಅಕಾಡೆಮಿಯಲ್ಲಿ ನೃತ್ಯಾಭ್ಯಾಸ ಮಾಡಿದ್ದರು. ಭಾರತೀಯ ಡಯಾಸ್ಪೊರಾ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲು ಅವರು ತರಬೇತಿ ಪಡೆದು ಸಿದ್ಧರಾಗಿದ್ದರು. ಗ್ರೀಕ್ ಪ್ರಧಾನಿ ಕಿರಿಯಾಕೋಸ್ ಮಿತ್ಸೋಟಾಕಿಸ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಗ್ರೀಸ್‌ಗೆ ಭೇಟಿ ನೀಡಿದ್ದಾರೆ.
ನೃತ್ಯ ಸಂಯೋಜಕಿ ಸುಮನ್ ರುದ್ರ ಪ್ರಧಾನಿ ಗ್ರೀಸ್ ಭೇಟಿ ಬಗ್ಗೆ ಮಾತನಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ದೇಶಕ್ಕೆ ಆಗಮಿಸುತ್ತಿದ್ದಾರೆ. ಈ ವಿಷಯ ಕೇಳಿ ನಾವು ತುಂಬಾ ಉತ್ಸುಕರಾಗಿದ್ದೇವೆ. ನಾವು ಅವರಿಗಾಗಿ ವಿಶೇಷವಾದದ್ದನ್ನು ಸಿದ್ಧಪಡಿಸಿದ್ದೇವೆ. ಇದೇ ಮೊದಲ ಬಾರಿಗೆ ನಮ್ಮ ಪ್ರಧಾನಮಂತ್ರಿಗಳನ್ನು ಸ್ವಾಗತಿಸಲು ಗ್ರೀಕ್ ಮಹಿಳೆಯರು ಭಾರತೀಯ ಡಯಾಸ್ಪೊರಾದಲ್ಲಿ ಭಾಗವಹಿಸುತ್ತಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಬಾಲಿವುಡ್ ಡ್ಯಾನ್ಸ್ ಅಕಾಡೆಮಿಯ ಗ್ರೀಕ್ ವಿದ್ಯಾರ್ಥಿಗಳು ಆಸ್ಕರ್ ಪ್ರಶಸ್ತಿ ವಿಜೇತ 'ನಾಟು ನಾಟು' ಹಾಡಿನ ಟ್ಯೂನ್‌ಗೆ ನೃತ್ಯ ಮಾಡುವ ಮೂಲಕ ಪ್ರಧಾನಿ ಅವರನ್ನು ಸ್ವಾಗತಿಸಲಿದ್ದಾರೆ. ಡ್ಯಾನ್ಸ್ ಅಕಾಡೆಮಿಯ ವಿದ್ಯಾರ್ಥಿಯೊಬ್ಬರು ಮಾತನಾಡಿ, ನಾವು ನಿಜವಾಗಿಯೂ ಪ್ರಧಾನಿ ನೋಡಲು ಉತ್ಸುಕರಾಗಿದ್ದೇವೆ ಎಂದು ಖುಷಿ ಹೊರ ಹಾಕಿದ್ದಾರೆ.(ANI)
ಇದನ್ನು ಓದಿ:ಬ್ರಿಕ್ಸ್ ಶೃಂಗಸಭೆ: ಪ್ರಧಾನಿ ಮೋದಿ-ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮಧ್ಯೆ ಚುಟುಕು ಮಾತುಕತೆ