ಪ್ಯಾರಿಸ್ (ಫ್ರಾನ್ಸ್): ಪ್ರಧಾನಿ ನರೇಂದ್ರ ಮೋದಿ ತಮ್ಮ ಎರಡು ದಿನಗಳ ಫ್ರಾನ್ಸ್ ಪ್ರವಾಸದ ಸಂದರ್ಭದಲ್ಲಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಮತ್ತು ಅವರ ಪತ್ನಿ ಬ್ರಿಗಿಟ್ಟೆ ಮ್ಯಾಕ್ರನ್ ಅವರಿಗೆ ವಿಶೇಷ ಉಡುಗೊರೆಗಳನ್ನು ನೀಡಿದ್ದಾರೆ. ಶ್ರೀಗಂಧದ ಮರದಿಂದ ಕೆತ್ತಿದ ಸಿತಾರ್ ಅವರನ್ನು ಅಧ್ಯಕ್ಷ ಮ್ಯಾಕ್ರನ್ ಅವರಿಗೆ ಉಡುಗೊರೆಯಾಗಿ ಕೊಟ್ಟಿದ್ದಾರೆ. ಫ್ರೆಂಚ್ ಅಧ್ಯಕ್ಷರ ಪತ್ನಿ ಬ್ರಿಗಿಟ್ಟೆ ಮ್ಯಾಕ್ರನ್ ಅವರಿಗೆ ಶ್ರೀಗಂಧದ ಪೆಟ್ಟಿಗೆಯಲ್ಲಿ ತೆಲಂಗಾಣದ ಪ್ರಸಿದ್ಧ ಪೋಚಂಪಲ್ಲಿ ಇಕಾತ್ ರೇಷ್ಮೆ ಸೀರೆಯ ಉಡುಗೊರೆ ನೀಡಿದ್ದಾರೆ.
ಇದನ್ನೂ ಓದಿ:ರಕ್ಷಣಾ ಸಹಕಾರವೇ ಭಾರತ - ಫ್ರಾನ್ಸ್ ಬಾಂಧವ್ಯದ ಆಧಾರಸ್ತಂಭ: ಪ್ರಧಾನಿ ಮೋದಿ
ಪ್ರಧಾನಿ ಮೋದಿ ಅವರು ಎಮ್ಯಾನುಯೆಲ್ ಮ್ಯಾಕ್ರನ್‌ಗೆ ಉಡುಗೊರೆಯಾಗಿ ನೀಡಿದ ಸಂಗೀತ ವಾದ್ಯ ಸಿತಾರ್‌ನನ್ನು ಶುದ್ಧ ಶ್ರೀಗಂಧದ ಮರದಿಂದ ಮಾಡಲ್ಪಟ್ಟಿದೆ. ಸಿತಾರ್‌ನ ಅಲಂಕಾರಿಕ ಪ್ರತಿಕೃತಿಯು ಸರಸ್ವತಿ ದೇವಿಯ ಚಿತ್ರ ಹೊಂದಿದೆ. ವೀಣೆಯನ್ನು ಸರಸ್ವತಿ ದೇವಿ ಹಿಡಿದುಕೊಂಡಿದ್ದಾರೆ. ಜೊತೆಗೆ ವಿಘ್ನ ನಿವಾರಕ ಗಣೇಶ ಹಾಗೂ ನವಿಲುಗಳು ಕೆತ್ತನೆಯು ಸಿತಾರ್ ಹೊಂದಿದೆ. ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಸೂಕ್ಷ್ಮ ಕೆತ್ತನೆಗಳು ಸಹ ಈ ವಾದ್ಯ ಹೊಂದಿದೆ.
ಫ್ರಾನ್ಸ್‌ನ ಪ್ರಥಮ ಮಹಿಳೆ ಬ್ರಿಗಿಟ್ಟೆ ಮ್ಯಾಕ್ರನ್ ಅವರಿಗೆ ನೀಡಿರುವ ಪೋಚಂಪಲ್ಲಿ ಇಕಾತ್ ಸೀರೆಯು ದೇಶದ ಶ್ರೀಮಂತ ಜವಳಿ ಪರಂಪರೆ, ಕರಕುಶಲತೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುತ್ತದೆ. ತೆಲಂಗಾಣದ ಪೋಚಂಪಲ್ಲಿ ಪಟ್ಟಣದ ಈ ಸೀರೆಯನ್ನು ಸಾಂಪ್ರದಾಯಿಕ ರೂಪಕಗಳು ಮತ್ತು ಹೂವಿನ ಮಾದರಿಗಳನ್ನು ಬಿಂಬಿಸುವ ಕೆತ್ತನೆಗಳನ್ನು ಹೊಂದಿರುವ ಶ್ರೀಗಂಧದ ಪೆಟ್ಟಿಗೆಯಲ್ಲಿ ಇರಿಸಿ ಉಡುಗೊರೆಯಾಗಿ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಗಳು ತಿಳಿಸಿವೆ.