ಕರ್ನಾಟಕ

karnataka

ETV Bharat / international

ಪ್ರಧಾನಿ ನರೇಂದ್ರ ಮೋದಿಗೆ ಬರ್ಲಿನ್​​ನಲ್ಲಿ ಅದ್ದೂರಿ ಸ್ವಾಗತ - ಪ್ರಧಾನಿ ನರೇಂದ್ರ ಮೋದಿಗೆ ಬರ್ಲಿನ್​​ನಲ್ಲಿ ಅದ್ದೂರಿ ಸ್ವಾಗತ

ಜರ್ಮನ್​ಗೆ ಭೇಟಿ ನೀಡಿರುವ ಪ್ರಧಾನಿ ಮೋದಿ ಅವರು ಜರ್ಮನ್​ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರೊಂದಿಗೆ ಮೊದಲ ಸಭೆ ನಡೆಸಿದ್ದಾರೆ. ಬಳಿಕ ಭಾರತೀಯರನ್ನುದ್ದೇಶಿ ಮೋದಿ ಭಾಷಣ ಮಾಡಲಿದ್ದಾರೆ..

pm-modi-receives
ಪ್ರಧಾನಿ ನರೇಂದ್ರ ಮೋದಿಗೆ

By

Published : May 2, 2022, 6:12 PM IST

ಬರ್ಲಿನ್ (ಜರ್ಮನಿ) :ಮೂರು ದಿನಗಳ ಯುರೋಪ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು ಇಂದು ಜರ್ಮನ್​ ರಾಜಧಾನಿ ಬರ್ಲಿನ್​ಗೆ ಭೇಟಿ ನೀಡಿದರು. ಈ ವೇಳೆ ಬರ್ಲಿನ್‌ನಲ್ಲಿರುವ ಫೆಡರಲ್ ಚಾನ್ಸೆಲರಿಯಿಂದ ಮೋದಿ ಅವರನ್ನು ರೆಡ್​ ಕಾರ್ಪೆಟ್​ ಹಾಕಿ​ ಅದ್ದೂರಿಯಾಗಿ ಸ್ವಾಗತಿಸಲಾಯಿತು.

ಬರ್ಲಿನ್‌ನ ಹೋಟೆಲ್ ಅಡ್ಲಾನ್ ಕೆಂಪಿನ್​ಸ್ಕಿಯಲ್ಲಿ ಮೋದಿ ಆಗಮನಕ್ಕಾಗಿ ಸಾವಿರಾರು ಭಾರತೀಯರು ಕಾದು ಕುಳಿತಿದ್ದರು. ವಿಮಾನದಿಂದ ಇಳಿದು ಮೋದಿ ಅವರು ನಡೆದು ಬರುತ್ತಿದ್ದಾಗ ಪ್ರಧಾನಿಯನ್ನು ಕಂಡ ಜನರು 'ವಂದೇ ಮಾತರಂ' ಮತ್ತು 'ಭಾರತ್ ಮಾತಾ ಕಿ ಜೈ' ಎಂದು ಘೋಷಣೆ ಕೂಗಿದರು. ಫೆಡರಲ್ ಚಾನ್ಸೆಲರಿಗೆ ಹೊರಡುವ ಮೊದಲು ಪ್ರಧಾನಿಯನ್ನು ಜರ್ಮನ್​ನಲ್ಲಿರುವ ಭಾರತೀಯರು ಅದ್ದೂರಿಯಾಗಿ ಸ್ವಾಗತಿಸಿದರು.

ಪ್ರಧಾನಿ ಮೋದಿ ಅವರು ಜರ್ಮನ್​ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರೊಂದಿಗೆ ಮೊದಲ ಸಭೆ ನಡೆಸಿದ್ದಾರೆ. ಬಳಿಕ ಭಾರತೀಯರನ್ನುದ್ದೇಶಿ ಮೋದಿ ಭಾಷಣ ಮಾಡಲಿದ್ದಾರೆ. ಬಳಿಕ ಪ್ರಧಾನಿ ಅವರು ಮಂಗಳವಾರ ಡೆನ್ಮಾರ್ಕ್‌ಗೆ ಭೇಟಿ ನೀಡಲಿದ್ದು, ನಾರ್ಡಿಕ್ ದೇಶಗಳ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಉನ್ನತ ಮಟ್ಟದ ಸಭೆಯ ಬಳಿಕ ಬುಧವಾರ ಪ್ಯಾರಿಸ್‌ಗೆ ತೆರಳಿ ಅಲ್ಲಿಂದ ಭಾರತಕ್ಕೆ ವಾಪಸ್​ ಆಗಲಿದ್ದಾರೆ.

ಓದಿ:ಭಾರತವನ್ನ ಹಿಂದೂ ರಾಷ್ಟ್ರವನ್ನಾಗಿ ಮಾಡುವ ಪ್ರತಿಜ್ಞೆ ಸ್ವೀಕರಿಸಿದ ಬಿಜೆಪಿ ಶಾಸಕ!

For All Latest Updates

TAGGED:

ABOUT THE AUTHOR

...view details