ಕೋಪನ್ ಹ್ಯಾಗನ್ :ಪ್ರಧಾನಿ ನರೇಂದ್ರ ಮೋದಿ ಅವರು ಐಸ್ಲ್ಯಾಂಡ್ನ ಕ್ಯಾಟ್ರಿನ್ ಜಾಕೋಬ್ಸ್‌ಡೊಟ್ಟಿರ್ ಅವರನ್ನು ಭೇಟಿ ಮಾಡಿದ್ದು, ವ್ಯಾಪಾರ, ಇಂಧನ ಮತ್ತು ಮೀನುಗಾರಿಕೆಯಂತಹ ಕ್ಷೇತ್ರಗಳಲ್ಲಿ ಬಾಂಧವ್ಯವನ್ನು ಹೆಚ್ಚಿಸುವ ಮಾರ್ಗಗಳ ಕುರಿತು ಚರ್ಚಿಸಿದ್ದಾರೆ. ಮೂರು ಯುರೋಪಿಯನ್ ರಾಷ್ಟ್ರಗಳ ಭೇಟಿಯ 2ನೇ ಹಂತದಲ್ಲಿ ಬರ್ಲಿನ್‌ನಿಂದ ಮಂಗಳವಾರ ಇಲ್ಲಿಗೆ ಆಗಮಿಸಿದ ಮೋದಿ, ಡ್ಯಾನಿಶ್ ರಾಜಧಾನಿಯಲ್ಲಿ ನಡೆದ ಎರಡನೇ ಭಾರತ-ನಾರ್ಡಿಕ್ ಶೃಂಗಸಭೆಯ ನೇಪಥ್ಯದಲ್ಲಿ ಜಾಕೋಬ್ಸ್‌ಡೊಟ್ಟಿರ್ ಅವರನ್ನು ಭೇಟಿಯಾದರು.
ಈ ಸಂಬಂಧ ಪ್ರಧಾನಿ ಕಾರ್ಯಾಲಯ ಟ್ವೀಟ್ ಮಾಡಿದೆ. ಇಬ್ಬರೂ ಪ್ರಧಾನಮಂತ್ರಿಗಳು 2018ರ 1ನೇ ಭಾರತ-ನಾರ್ಡಿಕ್ ಶೃಂಗಸಭೆಯಲ್ಲಿ ತಮ್ಮ ಮೊದಲ ಭೇಟಿಯನ್ನು ಆತ್ಮೀಯವಾಗಿ ಸ್ಮರಿಸಿಕೊಂಡಿದ್ದಾರೆ. ಈ ವರ್ಷ ಎರಡೂ ದೇಶಗಳು ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 50ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿವೆ ಎಂದು ಉಲ್ಲೇಖ ಮಾಡಲಾಗಿದೆ.