ಜರ್ಮನಿ: ಜರ್ಮನಿಯಲ್ಲಿ ನಡೆದ ಜಿ -7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದರು. ಅಮೆರಿಕ ಅಧ್ಯಕ್ಷ ಜೋ ಬೈಡನ್, ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಮತ್ತು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಸೇರಿದಂತೆ ವಿವಿಧ ರಾಷ್ಟ್ರಗಳ ನಾಯಕರನ್ನು ಭೇಟಿ ಮಾಡಿರುವ ಮೋದಿ ಮಾತುಕತೆ ನಡೆಸಿದರು.
ಜರ್ಮನಿಯಲ್ಲಿ ನಡೆದ ಜಿ-7 ಶೃಂಗಸಭೆಯಲ್ಲಿ ಭಾಗವಹಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಯುಎಇಗೆ(ಅರಬ್ ರಾಷ್ಟ್ರ) ಒಂದು ಕಿರು ಭೇಟಿಯ ಸಲುವಾಗಿ ತೆರಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಅವರು ಜಿ -7 ಶೃಂಗಸಭೆಯ ತಮ್ಮ ಭೇಟಿಯನ್ನು ಮುಕ್ತಾಯಗೊಳಿಸಿದರು. ಜಾಗತಿಕ ಸವಾಲುಗಳಿಗೆ ಸುಸ್ಥಿರ ಪರಿಹಾರಗಳ ಕುರಿತು ಎರಡು ದಿನಗಳ ಚರ್ಚೆಗಳನ್ನು ಮುಗಿಸಿದರು. ದೆಹಲಿಯನ್ನು ತಲುಪುವ ಮೊದಲು ಅಬುಧಾಬಿಗೆ ಪ್ರಯಾಣಿಸುತ್ತಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಟ್ವೀಟ್ ಮೂಲಕ ಮಾಹಿತಿ ನೀಡಿದೆ.
ಯುಎಇಯಲ್ಲಿ, ಯುಎಇ ಮಾಜಿ ಅಧ್ಯಕ್ಷ ಮತ್ತು ಅಬುಧಾಬಿ ಆಡಳಿತಗಾರ ಶೇಖ್ ಖಲೀಫಾ ಬಿನ್ ಝೈದ್ ಅಲ್ ನಹ್ಯಾನ್ ಅವರ ನಿಧನದ ಕುರಿತು ಅವರು ತಮ್ಮ ವೈಯಕ್ತಿಕ ಸಂತಾಪ ತಿಳಿಸಲಿದ್ದಾರೆ.
ಇದನ್ನೂ ಓದಿ:ವಿಡಿಯೋ: ಪ್ರಧಾನಿ ಮೋದಿ ಬಳಿ ಬಂದು ಬೆನ್ನು ತಟ್ಟಿ ಕೈ ಕುಲುಕಿದ ಅಮೆರಿಕ ಅಧ್ಯಕ್ಷ!