ನವದೆಹಲಿ:ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸದ್ಯ ಆಸ್ಟ್ರೇಲಿಯಾದಲ್ಲಿದ್ದು, ಭಾರತೀಯ ಸಮುದಾಯದ ಜೊತೆಗೆ ಸಂವಾದ ನಡೆಸಲಿದ್ದಾರೆ. ಪ್ರಧಾನಿ ಆ್ಯಂಥೋನಿ ಅಲ್ಬನೀಸ್ ಅವರ ಆಹ್ವಾನದ ಮೇರೆಗೆ ಸಿಡ್ನಿಗೆ ತೆರಳಿರುವ ಅವರು, ಉಭಯ ರಾಷ್ಟ್ರಗಳ ನಡುವಣ ಸಂಬಂಧಗಳ ವೃದ್ಧಿಗೆ ಹೆಚ್ಚಿನ ಪ್ರಯತ್ನ ಮಾಡಲಾಗುವುದು ಎಂದು ಹೇಳಿದ್ದಾರೆ.
ಅಲ್ಲಿನ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಮೋದಿ, ಇಂಡೋ-ಪೆಸಿಫಿಕ್ ಪ್ರದೇಶವು ಹವಾಮಾನ ಬದಲಾವಣೆ, ಭಯೋತ್ಪಾದನೆ, ಸಂವಹನದ ಮಾರ್ಗಗಳ ಭದ್ರತೆ ಮತ್ತು ಕಡಲ್ಗಳ್ಳತನದಂತಹ ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ಹಂಚಿಕೆಯ ಪ್ರಯತ್ನಗಳ ಮೂಲಕ ಮಾತ್ರ ಅವುಗಳನ್ನು ಪರಿಹರಿಸಬಹುದು ಎಂದು ಪ್ರತಿಪಾದಿಸಿದರು.
ಇಂಡೋ- ಪೆಸಿಫಿಕ್ ಪ್ರದೇಶದ ಮುಕ್ತವಾಗಿರಲು ಆಸ್ಟ್ರೇಲಿಯಾದ ಜೊತೆಗಿನ ನಂಟನ್ನು ಇನ್ನಷ್ಟು ವಿಸ್ತರಿಸಬೇಕಿದೆ. ರಕ್ಷಣಾ ಮತ್ತು ಭದ್ರತಾ ಸಂಬಂಧಗಳನ್ನು ಒಳಗೊಂಡಂತೆ ಆಸೀಸ್ನೊಂದಿಗಿನ ಸಂಬಂಧವನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಬೇಕಿದೆ. ಇದು ಇಷ್ಟಕ್ಕೆ ತೃಪ್ತನಾಗುವುದಿಲ್ಲ ಎಂದು ಮೋದಿ ಇದೇ ವೇಳೆ ಹೇಳಿದರು.
ಈ ಹಿಂದೆ ನೋಡಿದ ಮತ್ತು ಈಗಿನ ಪ್ರಧಾನಿ ಅಲ್ಬನೀಸ್ ಅವರು ಒಂದೇ ಆಗಿದ್ದಾರೆ. ನಾವಿಬ್ಬರೂ ಮತ್ತೆ ಸಿಡ್ನಿಯಲ್ಲಿ ಒಟ್ಟಿಗೆ ಸೇರಿದ್ದೇವೆ. ಉಭಯ ರಾಷ್ಟ್ರಗಳ ಸಂಬಂಧಗಳನ್ನು ಮುಂದಿನ ಹಂತಕ್ಕೆ ಹೇಗೆ ಕೊಂಡೊಯ್ಯಬಹುದು, ಪೂರಕತೆಯ ಹೊಸ ಕ್ಷೇತ್ರಗಳನ್ನು ಹೇಗೆ ಗುರುತಿಸಬಹುದು ಮತ್ತು ವಿಸ್ತರಿಸಬಹುದು ಎಂಬುದರ ಬಗ್ಗೆ ಅನ್ವೇಷಿಸಲು ಇದು ಸದಾವಕಾಶವಗಿದೆ ಎಂಬುದು ನನ್ನ ವಿಶ್ವಾಸವಾಗಿದೆ. ಸಹಕಾರ ಮುಂದುವರಿಯುತ್ತದೆ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.
ಜಂಟಿ ಸಮರಾಭ್ಯಾಸ:ಎರಡು ಪ್ರಜಾಪ್ರಭುತ್ವ ರಾಷ್ಟ್ರಗಳಾದ ಭಾರತ ಮತ್ತು ಆಸ್ಟ್ರೇಲಿಯಾ ಮುಕ್ತ ಮತ್ತು ಅಂತರ್ಗತ ಇಂಡೋ-ಪೆಸಿಫಿಕ್ ಮೇಲೆ ಹೆಚ್ಚಿನ ಆಸಕ್ತಿಯನ್ನು ಹೊಂದಿವೆ. ನಮ್ಮ ಕಾರ್ಯತಂತ್ರದ ದೃಷ್ಟಿಕೋನಗಳ ಹೊಂದಾಣಿಕೆಯೂ ಒಂದೇ ಆಗಿದೆ. ನಮ್ಮ ನಡುವಿನ ಉನ್ನತ ಮಟ್ಟದ ಪರಸ್ಪರ ನಂಬಿಕೆಯು ರಕ್ಷಣೆ ಮತ್ತು ಭದ್ರತಾ ವಿಷಯಗಳಲ್ಲಿ ಹೆಚ್ಚಿನ ಸಹಕಾರವನ್ನು ತಂದಿದೆ. ನಮ್ಮ ನೌಕಾಪಡೆಗಳು ಜಂಟಿ ನೌಕಾ ಅಭ್ಯಾಸಗಳಲ್ಲಿ ಭಾಗವಹಿಸುತ್ತಿವೆ ಎಂದು ಅವರು ತಿಳಿಸಿದರು.