ಕರ್ನಾಟಕ

karnataka

ETV Bharat / international

ಜಪಾನ್​ ಪ್ರವಾಸದಲ್ಲಿ ಪ್ರಧಾನಿ ಮೋದಿ.. ಹಿರೋಶಿಮಾದಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಅನಾವರಣ - ದ್ವಿಪಕ್ಷೀಯ ಮಾತುಕತೆ

ಪ್ರಸ್ತುತ ಭಾರತ ಜಿ 20 ಸಭೆಯ ಅಧ್ಯಕ್ಷತೆ ವಹಿಸಿಕೊಂಡಿದ್ದರೆ, ಜಪಾನ್ ಜಿ 7 ಅಧ್ಯಕ್ಷತೆ ವಹಿಸಿದೆ. ಈ ಕಾರಣ ಹಿರೋಶಿಮಾದಲ್ಲಿ ನಡೆಯುವ ಜಿ 7 ಶೃಂಗಸಭೆಯಲ್ಲಿ ನಾನು ಭಾಗಿಯಾಗುತ್ತಿರುವುದು ಅರ್ಥಪೂರ್ಣ ಎನಿಸಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

Narendra Modi and   Fumio Kishida
ಹಿರೋಶಿಮಾದಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಅನಾವರಣ

By

Published : May 20, 2023, 9:10 AM IST

Updated : May 20, 2023, 9:21 AM IST

ಹಿರೋಶಿಮಾ(ಜಪಾನ್​):ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಹಿರೋಶಿಮಾದಲ್ಲಿ ಏಳು ಮುಂದುವರಿದ ಆರ್ಥಿಕತೆಗಳ(ಜಿ 7) ಗುಂಪಿನ ಶೃಂಗಸಭೆಯಲ್ಲಿ ಜಿ-7 ಮತ್ತು ಜಿ-20 ಅಧ್ಯಕ್ಷರು ಜಾಗತಿಕ ಸವಾಲುಗಳು ಮತ್ತು ಪರಿಹಾರೋಪಾಯಗಳ ಕುರಿತು ಚರ್ಚಿಸಿದರು. ಅಲ್ಲದೇ ವ್ಯಾಪಾರ, ಆರ್ಥಿಕತೆ ಮತ್ತು ಸಂಸ್ಕೃತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಭಾರತ-ಜಪಾನ್ ಸ್ನೇಹವನ್ನು ಹೆಚ್ಚಿಸುವ ಮಾರ್ಗಗಳ ಕುರಿತು ಉಭಯ ನಾಯಕರು ಚರ್ಚಿಸಿದರು.

ಪ್ರಸ್ತುತ ಭಾರತ ಜಿ 20 ಸಭೆಯ ಅಧ್ಯಕ್ಷತೆ ವಹಿಸಿಕೊಂಡಿದ್ದರೆ, ಜಪಾನ್ ಜಿ 7 ಅಧ್ಯಕ್ಷತೆ ವಹಿಸಿದೆ. ಈ ಕಾರಣ ಹಿರೋಶಿಮಾದಲ್ಲಿ ನಡೆಯುವ ಜಿ 7 ಶೃಂಗಸಭೆಯಲ್ಲಿ ನಾನು ಭಾಗಿಯಾಗುತ್ತಿರುವುದು ಅರ್ಥಪೂರ್ಣ ಎನಿಸಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು ಮೋದಿ ಮತ್ತು ಕಿಶಿದಾ ನಡುವಿನ ಮಾತುಕತೆಯನ್ನು ಫಲಪ್ರದ ಎಂದು ಟ್ವಿಟರ್‌ನಲ್ಲಿ ಬಣ್ಣಿಸಿದ್ದಾರೆ. ಆಯಾ G-7 ಮತ್ತು G-20 ಅಧ್ಯಕ್ಷರು ಸಮಕಾಲೀನ ಪ್ರಾದೇಶಿಕ ಬೆಳವಣಿಗೆ ಮತ್ತು ಇಂಡೋ-ಪೆಸಿಫಿಕ್‌ನಲ್ಲಿ ಆಳವಾದ ಸಹಕಾರದ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು ಎಂದು ಅವರು ತಿಳಿಸಿದ್ದಾರೆ.

"ದ್ವಿಪಕ್ಷೀಯ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸುವ ಮಾರ್ಗಗಳ ಕುರಿತು ನಾಯಕರು ಚರ್ಚಿಸಿದರು. ಶಿಕ್ಷಣ, ಕೌಶಲ್ಯ ಅಭಿವೃದ್ಧಿ, ಪ್ರವಾಸೋದ್ಯಮ, ಉನ್ನತ ತಂತ್ರಜ್ಞಾನ ಮತ್ತು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯಗಳನ್ನು ಒಳಗೊಂಡಿದೆ" ಎಂದು ಅರಿಂದಮ್ ಬಾಗ್ಚಿ ಹೇಳಿದರು.

ಇದನ್ನೂ ಓದಿ:ಹಿರೋಷಿಮಾದಲ್ಲಿ ಪ್ರಧಾನಿ ಮೋದಿ - ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ನಡುವೆ ದ್ವಿಪಕ್ಷೀಯ ಸಭೆ?

"ಇಂದು ಬೆಳಗ್ಗೆ ಪಿಎಂ ಫ್ಯೂಮಿಯೊ ಕಿಶಿಡಾ ಅವರೊಂದಿಗೆ ಮಹತ್ವದ ಸಭೆ ನಡೆಸಿದ್ದೇವೆ. ನಾವು ಭಾರತ-ಜಪಾನ್ ಸಂಬಂಧಗಳ ಸಂಪೂರ್ಣ ಶ್ರೇಣಿಯನ್ನು ಪರಿಶೀಲಿಸಿದ್ದೇವೆ ಮತ್ತು ನಮ್ಮ ಗ್ರಹವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಭಾರತದ ಜಿ-20 ಪ್ರೆಸಿಡೆನ್ಸಿ ಮತ್ತು ಜಪಾನ್‌ನ ಜಿ-7 ಪ್ರೆಸಿಡೆನ್ಸಿಯ ಕೇಂದ್ರೀಕೃತ ಕ್ಷೇತ್ರಗಳ ಕುರಿತು ಚರ್ಚಿಸಿದ್ದೇವೆ" ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. ಕಿಶಿಡಾ ಅವರ ಆಹ್ವಾನದ ಮೇರೆಗೆ ಜಿ7 ಶೃಂಗಸಭೆಯಲ್ಲಿ ಮೂರು ಅಧಿವೇಶನಗಳಲ್ಲಿ ಭಾಗವಹಿಸಲು ಮೋದಿ ಶುಕ್ರವಾರ ಹಿರೋಶಿಮಾಗೆ ತೆರಳಿದ್ದಾರೆ.

ಇದನ್ನೂ ಓದಿ:ಉಕ್ರೇನ್ ವಿರುದ್ಧ ಯುದ್ಧ: ರಷ್ಯಾ ಮೇಲೆ ಅಮೆರಿಕದಿಂದ ಮತ್ತಷ್ಟು ಹೊಸ ನಿರ್ಬಂಧ

ಮಹಾತ್ಮ ಗಾಂಧಿ ಪ್ರತಿಮೆ ಅನಾವರಣ: ಜಿ 7 ಗುಂಪಿನ ವಾರ್ಷಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ನಗರಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ ಹಿರೋಶಿಮಾದಲ್ಲಿ ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ಅನಾವರಣಗೊಳಿಸಿದರು. "ಹಿರೋಶಿಮಾದಲ್ಲಿನ ಮಹಾತ್ಮ ಗಾಂಧಿಯವರ ಪ್ರತಿಮೆ ಮುಖ್ಯವಾದ ಸಂದೇಶವನ್ನು ನೀಡುತ್ತದೆ. ಶಾಂತಿ ಮತ್ತು ಸೌಹಾರ್ದತೆಯ ಗಾಂಧಿ ಆದರ್ಶಗಳು ಜಾಗತಿಕವಾಗಿ ಪ್ರತಿಧ್ವನಿಸುತ್ತವೆ ಮತ್ತು ಲಕ್ಷಾಂತರ ಜನರಿಗೆ ಶಕ್ತಿಯನ್ನು ನೀಡುತ್ತವೆ" ಎಂದು ಮೋದಿ ಟ್ವೀಟ್​ ಮಾಡಿದ್ದಾರೆ.

"ಮಹಾತ್ಮ ಗಾಂಧಿ ಅವರು ತಮ್ಮ ಜೀವನದುದ್ದಕ್ಕೂ ಅಹಿಂಸೆಯನ್ನು ಮೈಗೂಡಿಸಿಕೊಂಡ ಅತ್ಯಂತ ಗೌರವಾನ್ವಿತ ವ್ಯಕ್ತಿಯಾಗಿದ್ದರು. ಈ ನಗರಕ್ಕೆ ಅವರ ಪ್ರತಿಮೆಯ ಪ್ರಸ್ತುತಿ ಬಹಳ ಅರ್ಥಪೂರ್ಣವಾಗಿದೆ. ಏಕೆಂದರೆ ನಮ್ಮ ಆಶಯವು ಮಹಾತ್ಮ ಗಾಂಧಿಯವರ ನೀತಿಯೊಂದಿಗೆ ನಿಖರವಾಗಿ ಹೊಂದಿಕೆಯಾಗುತ್ತದೆ" ಎಂದು ಹಿರೋಶಿಮಾದ ಮೇಯರ್ ಮತ್ಸುಯಿ ಕಜುಮಿ ಟ್ವೀಟ್​ ಮಾಡಿದ್ದಾರೆ

"ಸ್ನೇಹ ಮತ್ತು ಸೌಹಾರ್ದತೆಯ ಸಂಕೇತ"... ಮಹಾತ್ಮರ ಪ್ರತಿಮೆ, ಹಿರೋಷಿಮಾ ನಗರಕ್ಕೆ ಭಾರತದ ಉಡುಗೊರೆ. ಶಾಂತಿಗಾಗಿ ಮಾನವೀಯತೆಯ ಹಂಬಲವನ್ನು ಸಂಕೇತಿಸುವ ನಗರಕ್ಕೆ ಸೂಕ್ತವಾದ ಗೌರವವಾಗಿದೆ" ಎಂದು ವಕ್ತಾರ ಬಾಗ್ಚಿ ಬಣ್ಣಿಸಿದ್ದಾರೆ.

ಜಪಾನ್, ಪಪುವಾ ನ್ಯೂಗಿನಿಯಾ ಮತ್ತು ಆಸ್ಟ್ರೇಲಿಯಾಕ್ಕೆ ಮೂರು ರಾಷ್ಟ್ರಗಳ ಪ್ರವಾಸದ ಮೊದಲ ಹಂತದಲ್ಲಿ ಮೋದಿ ಶುಕ್ರವಾರ ಹಿರೋಶಿಮಾಗೆ ಭೇಟಿ ನೀಡಿದ್ದಾರೆ. ಅವರು 40ಕ್ಕೂ ಸಭೆಗಳಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಮೋದಿ ಅವರು ಮೇ 19 ರಿಂದ 21 ರವರೆಗೆ ಮುಖ್ಯವಾಗಿ G 7 ಗುಂಪಿನ ವಾರ್ಷಿಕ ಶೃಂಗಸಭೆಗಾಗಿ ಹಿರೋಷಿಮಾಗೆ ಭೇಟಿ ನೀಡಿದ್ದಾರೆ. ಇದರಲ್ಲಿ ಅವರು ಆಹಾರ, ರಸಗೊಬ್ಬರ ಮತ್ತು ಇಂಧನ ಭದ್ರತೆ ಸೇರಿದಂತೆ ಜಾಗತಿಕವಾಗಿ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಮಾತನಾಡುವ ನಿರೀಕ್ಷೆಯಿದೆ. ಹಿರೋಷಿಮಾ ಜಿ 7 ಶೃಂಗಸಭೆಯಲ್ಲಿ ಭಾಗವಹಿಸುವ ಕೆಲವು ವಿಶ್ವ ನಾಯಕರೊಂದಿಗೆ ಅವರು ದ್ವಿಪಕ್ಷೀಯ ಸಭೆಗಳನ್ನು ನಡೆಸುವ ನಿರೀಕ್ಷೆಯಿದೆ.

ಇದನ್ನೂ ಓದಿ:ಹಿರೋಷಿಮಾದಲ್ಲಿ ಜಿ 7 ಶೃಂಗಸಭೆ: ಯಾವೆಲ್ಲಾ ದೇಶಗಳು ಭಾಗವಹಿಸಲಿವೆ?

Last Updated : May 20, 2023, 9:21 AM IST

ABOUT THE AUTHOR

...view details