ಕರ್ನಾಟಕ

karnataka

ETV Bharat / international

ಕರ್ನಾಟಕದ ಗಂಧದ ಪೆಟ್ಟಿಗೆ, ವಜ್ರ, ಬೆಳ್ಳಿ ಗಣೇಶ.. ಬೈಡನ್​ ದಂಪತಿಗೆ ನಮ್ಮ ಸಂಸ್ಕೃತಿ ಪ್ರತಿಬಿಂಬಿಸುವ ವಸ್ತುಗಳ ಉಡುಗೊರೆ ಕೊಟ್ಟ ಮೋದಿ!

ಕರ್ನಾಟಕದ ಗಂಧದ ಮರ ಸೇರಿದಂತೆ ವಿವಿಧ ರಾಜ್ಯಗಳಿಂದ ಭಾರತೀಯ ಸಂಸ್ಕೃತಿಯನ್ನು ಪ್ರತಿ ಬಿಂಬಿಸುವ ವಿಶೇಷ ಉಡುಗೊರೆಯನ್ನು ಪ್ರಧಾನಿ ಮೋದಿ ಬೈಡನ್​ ದಂಪತಿಗೆ ನೀಡಿದ್ದಾರೆ.

PM Modi exchanges special gifts  gifts with America President Joe Biden family  America President Joe Biden family at White House  ಕರ್ನಾಟಕ ಗಂಧದ ಮರ  ನಮ್ಮ ಸಂಸ್ಕೃತಿಯ ಪ್ರತಿಬಿಂಬಿಸುವ ವಸ್ತುಗಳ ಉಡುಗೊರೆ  ಸಂಸ್ಕೃತಿಯ ಪ್ರತಿಬಿಂಬಿಸುವ ವಸ್ತುಗಳ ಉಡುಗೊರೆ ಕೊಟ್ಟ ಮೋದಿ  ಭಾರತೀಯ ಸಂಸ್ಕೃತಿಯನ್ನು ಪ್ರತಿ ಬಿಂಬಿಸುವ ವಿಶೇಷ ಉಡುಗೊರೆ  ಉಡುಗೊರೆಯನ್ನು ಪ್ರಧಾನಿ ಮೋದಿ ಬೈಡನ್​ ದಂಪತಿ  ಕರ್ನಾಟಕದ ಶ್ರೀಗಂಧ ಮರದ ಪೆಟ್ಟಿಗೆ ಉಡುಗೊರೆ  ಜಿಲ್​ ಬೈಡನ್​ಗೆ ಡೈಮೆಂಡ್​ ಗಿಫ್ಟ್  ಗಂಧದ ಪೆಟ್ಟಿಗೆಯಲ್ಲಿ ಬೆಳ್ಳಿ ಗಣೇಶನ ವಿಗ್ರಹ  ಹತ್ತು ವಸ್ತುಗಳ ಉಡುಗೊರೆ
ಕರ್ನಾಟಕ ಗಂಧದ ಮರ, ವಜ್ರ, ಬೆಳ್ಳೀ ಗಣೇಶ

By

Published : Jun 22, 2023, 8:24 AM IST

ವಾಷಿಂಗ್ಟನ್​, ಅಮೆರಿಕ:ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಮತ್ತು ಪ್ರಥಮ ಮಹಿಳೆ ಜಿಲ್ ಬೈಡನ್​ ಅವರೊಂದಿಗೆ ವಾಷಿಂಗ್ಟನ್ ಡಿಸಿಯ ವೈಟ್ ಹೌಸ್‌ನಲ್ಲಿ ವಿಶೇಷ ಉಡುಗೊರೆಗಳನ್ನು ವಿನಿಮಯ ಮಾಡಿಕೊಂಡರು.

ಕರ್ನಾಟಕದ ಶ್ರೀಗಂಧ ಮರದ ಪೆಟ್ಟಿಗೆ ಉಡುಗೊರೆ: ರಾಜಸ್ಥಾನದ ಜೈಪುರದ ಕುಶಲಕರ್ಮಿಯೊಬ್ಬರು ಮೈಸೂರಿನಿಂದ ತಂದ ಶ್ರೀಗಂಧ ಮರದ ಕಟ್ಟಿಗೆಯಿಂದ ತಯಾರಿಸಿದ ವಿಶೇಷ ಶ್ರೀಗಂಧದ ಪೆಟ್ಟಿಗೆಯನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್​​ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಉಡುಗೊರೆಯಾಗಿ ನೀಡಿದರು. ಕರ್ನಾಟಕದ ಮೈಸೂರಿನಿಂದ ಬಂದ ಶ್ರೀಗಂಧದ ಮರದಿಂದ ಕೆತ್ತಲಾದ ಈ ಪೆಟ್ಟಿಗೆ ಸುತ್ತ ಸಸ್ಯ ಮತ್ತು ಪ್ರಾಣಿಗಳ ಮಾದರಿಗಳನ್ನು ನೋಡಬಹುದಾಗಿದೆ.

ಜಿಲ್​ ಬೈಡನ್​ಗೆ ಡೈಮೆಂಡ್​ ಗಿಫ್ಟ್​: ಅಮೆರಿಕದ ಪ್ರಥಮ ಮಹಿಳೆ ಜಿಲ್ ಬೈಡನ್ ಅವರಿಗೆ ಪ್ರಧಾನಿ ಮೋದಿ ಅವರು 7.5 ಕ್ಯಾರೆಟ್ ಹಸಿರು ವಜ್ರವನ್ನು ಉಡುಗೊರೆಯಾಗಿ ನೀಡಿದರು. ಈ ವಜ್ರವು ರಾಸಾಯನಿಕ ಮತ್ತು ಆಪ್ಟಿಕಲ್ ಗುಣಲಕ್ಷಣಗಳನ್ನು ಪ್ರತಿಬಿಂಬಿಸುತ್ತದೆ. ಸೌರ ಮತ್ತು ಪವನ ಶಕ್ತಿಯಂತಹ ಪರಿಸರ - ವೈವಿಧ್ಯ ಸಂಪನ್ಮೂಲಗಳನ್ನು ಅದರ ತಯಾರಿಕೆಯಲ್ಲಿ ಬಳಸಲಾಗಿರುವುದರಿಂದ ಇದು ಪರಿಸರ ಸ್ನೇಹಿಯಾಗಿದೆ.

ಪೇಪಿಯರ್ ಮಾಚೆ: ಇದು ಹಸಿರು ಡೈಮಂಡ್ ಅನ್ನು ಇರಿಸಲಾಗಿರುವ ಪೆಟ್ಟಿಗೆಯಾಗಿದೆ. ಕಾರ್-ಎ-ಕಲಮ್ದಾನಿ ಎಂದು ಕರೆಯಲ್ಪಡುವ ಕಾಶ್ಮೀರದ ಸೊಗಸಾದ ಪೇಪಿಯರ್ ಮಾಚೆ ಕಾಗದದ ತಿರುಳು ಮತ್ತು ನಕ್ಖಾಶಿಯ ಸಕ್ತ್ಸಾಜಿಯರ್ ನಿಖರವಾದ ತಯಾರಿಕೆಯನ್ನು ಒಳಗೊಂಡಿದೆ. ಅಲ್ಲಿ ನುರಿತ ಕುಶಲಕರ್ಮಿಗಳು ಇದನ್ನು ತಯಾರಿಸಿದ್ಧಾರೆ.

ಗಂಧದ ಪೆಟ್ಟಿಗೆಯಲ್ಲಿ ಬೆಳ್ಳಿ ಗಣೇಶನ ವಿಗ್ರಹ:ಇನ್ನು ಬೈಡನ್​ ದಂಪತಿಗೆ ನೀಡಲಾಗಿರುವ ಗಂಧದ ಪೆಟ್ಟಿಗೆಯಲ್ಲಿ ಬೆಳ್ಳಿಯಿಂದ ತಯಾರಿಸಲ್ಪಟ್ಟ ಗಣೇಶನ ವಿಗ್ರಹವಿದೆ. ಅಷ್ಟೇ ಅಲ್ಲ ಈ ಗಂಧದ ಪೆಟ್ಟಿಗೆಯಲ್ಲಿ ಪ್ರತಿ ಹಿಂದೂ ಮನೆಯಲ್ಲಿ ಪವಿತ್ರ ಸ್ಥಳವನ್ನು ಆಕ್ರಮಿಸುವ ದೀಪವನ್ನು ಸಹ ಒಳಗೊಂಡಿದೆ. ಕೋಲ್ಕತ್ತಾದ ಐದನೇ ತಲೆಮಾರಿನ ಅಕ್ಕಸಾಲಿಗರ ಕುಟುಂಬವು ಈ ಬೆಳ್ಳಿ ವಿಗ್ರಹವನ್ನು ಕರಕುಶಲತೆಯಿಂದ ತಯಾರಿಸಿದೆ.

ಹತ್ತು ವಸ್ತುಗಳ ಉಡುಗೊರೆ: ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರಿಗೆ ಪ್ರಧಾನಿ ಮೋದಿ ಅವರು ಉಡುಗೊರೆಯಾಗಿ ನೀಡಿದ ಪೆಟ್ಟಿಗೆಯಲ್ಲಿ ಹತ್ತು ವಸ್ತುಗಳನ್ನು ಒಳಗೊಂಡಿದೆ. ಪಶ್ಚಿಮ ಬಂಗಾಳದ ನುರಿತ ಕುಶಲಕರ್ಮಿಗಳು ನಾಜೂಕಾಗಿ ಕರಕುಶಲತೆಯಿಂದ ತಯಾರಿಸಿದ ಬೆಳ್ಳಿ ತೆಂಗಿನಕಾಯಿಯನ್ನು ನೀಡಲಾಗಿದೆ.

ಭೂದಾನಕ್ಕಾಗಿ (ಭೂಮಿಯ ದಾನ) ಭೂಮಿಯ ಬದಲಿಗೆ ಕರ್ನಾಟಕದ ಮೈಸೂರಿನಿಂದ ಬಂದ ಪರಿಮಳಯುಕ್ತ ಶ್ರೀಗಂಧದ ತುಂಡನ್ನು ಕೊಟ್ಟಿದ್ದಾರೆ. ತಮಿಳುನಾಡಿನಿಂದ ಪಡೆದಿರುವ ಟಿಲ್ ಅಥವಾ ಬಿಳಿ ಎಳ್ಳನ್ನು ಈ ಪೆಟ್ಟಿಗೆ ಒಳಗೊಂಡಿದೆ. ರಾಜಸ್ಥಾನದಲ್ಲಿ ಕರಕುಶಲತೆಯಿಂದ ತಯಾರಿಸಲಾದ 24K ಶುದ್ಧ ಮತ್ತು ಹಾಲ್ಮಾರ್ಕ್ ಚಿನ್ನದ ನಾಣ್ಯವನ್ನು ಹಿರಣ್ಯದಾನ (ಚಿನ್ನದ ದಾನ) ರೂಪದಲ್ಲಿ ನೀಡಲಾಗಿದೆ.

ಪೆಟ್ಟಿಗೆಯು ಶೇ 99.5 ರಷ್ಟು ಶುದ್ಧ ಮತ್ತು ಹಾಲ್​​ಮಾರ್ಕ್​​ ಬೆಳ್ಳಿಯ ನಾಣ್ಯವನ್ನು ಹೊಂದಿದೆ, ಇದನ್ನು ರಾಜಸ್ಥಾನದ ಕುಶಲಕರ್ಮಿಗಳು ಕಲಾತ್ಮಕವಾಗಿ ರಚಿಸಿದ್ದಾರೆ ಮತ್ತು ಇದನ್ನು ರೌಪ್ಯಾದಾನ್ (ಬೆಳ್ಳಿಯ ದಾನ) ಎಂದು ನೀಡಲಾಗಿದೆ. ಗುಜರಾತಿನ ಉಪ್ಪನ್ನು ಲವಂದದಾನ (ಉಪ್ಪಿನ ದಾನ) ಎಂದು ಅರ್ಪಿಸಲಾಯಿತು.

1937 ರಲ್ಲಿWB ಯೀಟ್ಸ್ ಅವರು ಭಾರತೀಯ ಉಪನಿಷದ್‌ಗಳ ಇಂಗ್ಲಿಷ್ ಅನುವಾದವನ್ನು ಪ್ರಕಟಿಸಿದರು. ಈ ಅನುವಾದದಲ್ಲಿ ಶ್ರೀ ಪುರೋಹಿತ್ ಸ್ವಾಮಿ ಅವರು ಸಹ-ಲೇಖಕರಾಗಿದ್ದರು. ಇದು ಯೀಟ್ಸ್ ಅವರ ಅಂತಿಮ ಕೃತಿಗಳಲ್ಲಿ ಒಂದಾಗಿದೆ. ಲಂಡನ್‌ನ M/s ಫೇಬರ್ ಮತ್ತು ಫೇಬರ್ ಲಿಮಿಟೆಡ್ ಪ್ರಕಟಿಸಿದ ಮತ್ತು ಯೂನಿವರ್ಸಿಟಿ ಪ್ರೆಸ್ ಗ್ಲಾಸ್ಗೋದಲ್ಲಿ ಮುದ್ರಿಸಲಾದ ಈ ಪುಸ್ತಕದ ಮೊದಲ ಆವೃತ್ತಿಯ 'ದಿ ಟೆನ್ ಪ್ರಿನ್ಸಿಪಾಲ್ ಉಪನಿಷದ್' ನ ಪ್ರತಿಯನ್ನು ಪ್ರಧಾನಿ ಮೋದಿ ಅವರು ಅಧ್ಯಕ್ಷ ಬೈಡನ್‌ಗೆ ಉಡುಗೊರೆಯಾಗಿ ನೀಡಿದರು.

"ಇಂದು ಶ್ವೇತಭವನದಲ್ಲಿ ನನಗೆ ಆತಿಥ್ಯ ವಹಿಸಿದ್ದಕ್ಕಾಗಿ ನಾನು ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ ಜೋ ಬೈಡನ್ ಮತ್ತು ಪ್ರಥಮ ಮಹಿಳೆ ಜಿಲ್ ಬೈಡನ್ ಅವರಿಗೆ ಧನ್ಯವಾದ ಹೇಳುತ್ತೇನೆ. ನಾವು ಹಲವಾರು ವಿಷಯಗಳ ಬಗ್ಗೆ ಉತ್ತಮ ಸಂಭಾಷಣೆ ನಡೆಸಿದ್ದೇವೆ" ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ಓದಿ:ಮೋದಿಯನ್ನು ಆತ್ಮೀಯವಾಗಿ ಬರಮಾಡಿಕೊಂಡ ಅಮೆರಿಕ ಅಧ್ಯಕ್ಷ.. ಬೈಡನ್​ ದಂಪತಿಯಿಂದ ಉಡುಗೊರೆ ಪಡೆಯಲಿರುವ ಪ್ರಧಾನಿ

ABOUT THE AUTHOR

...view details