ಕರ್ನಾಟಕ

karnataka

ETV Bharat / international

ಔತಣಕೂಟದಲ್ಲಿ ಭಾಗವಹಿಸಿ ಡೆನ್ಮಾರ್ಕ್​ ಪ್ರವಾಸ ಮುಗಿಸಿದ ಮೋದಿ, ಇಂದು ಫ್ರಾನ್ಸ್​ ಭೇಟಿ - ಭಾರತ-ಡೆನ್ಮಾರ್ಕ್ ಪಾಲುದಾರಿಕೆ

ಯೂರೋಪ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಎರಡು ದಿನದ ಡೆನ್ಮಾರ್ಕ್ ಪ್ರವಾಸವನ್ನು ಮುಗಿಸಿದ್ದು, ಇಂದು ಭಾರತ-ನಾರ್ಡಿಕ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಫ್ರಾನ್ಸ್​ಗೆ ತೆರಳಲಿದ್ದಾರೆ.

PM Modi attends dinner at Danish monarch's palace
ಔತಣಕೂಟದಲ್ಲಿ ಭಾಗವಹಿಸಿ ಡೆನ್ಮಾರ್ಕ್​ ಪ್ರವಾಸ ಮುಗಿಸಿದ ಪ್ರಧಾನಿ ಮೋದಿ, ಇಂದು ಫ್ರಾನ್ಸ್​ ಭೇಟಿ

By

Published : May 4, 2022, 8:05 AM IST

ಕೋಪನ್ ಹೇಗನ್(ಡೆನ್ಮಾರ್ಕ್): ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಕೋಪನ್‌ಹೇಗನ್​​ನ ಅಮಾಲಿಯನ್ ಬರ್ಗ್ ಅರಮನೆಯಲ್ಲಿ ಡೆನ್ಮಾರ್ಕ್ ಕಿಂಗ್​ಡಮ್​ನ ರಾಣಿ 2ನೇ ಮಾರ್ಗರೆಥ್ (Margrethe II) ಅವರು ಆಯೋಜಿಸಿದ್ದ ಔತಣಕೂಟದಲ್ಲಿ ಪಾಲ್ಗೊಂಡರು. ಪ್ರಧಾನಿಯ ಯೂರೋಪ್ ಪ್ರವಾಸದ ಎರಡನೇ ದಿನದ ಕಾರ್ಯಸೂಚಿಯಲ್ಲಿ ಈ ಔತಣಕೂಟ ಕೊನೆಯ ಕಾರ್ಯಕ್ರಮವಾಗಿತ್ತು. ಅಂದರೆ ಈ ಔತಣಕೂಟದಲ್ಲಿ ಭಾಗವಹಿಸುವ ಮೂಲಕ ಅಧಿಕೃತವಾಗಿ ಡೆನ್ಮಾರ್ಕ್​ ಪ್ರವಾಸವನ್ನು ಮುಗಿಸಿದರು.

ಇದಕ್ಕೂ ಮೊದಲು ಕೋಪನ್‌ಹೇಗನ್​ಗೆ ಆಗಮಿಸಿದ ಪ್ರಧಾನಮಂತ್ರಿ ಮೋದಿ ತಮ್ಮ ಡ್ಯಾನಿಶ್ ಪ್ರಧಾನಿ ಮೆಟ್ಟೆ ಫ್ರೆಡರಿಕ್ಸೆನ್ ಅವರೊಂದಿಗೆ ದ್ವಿಪಕ್ಷೀಯ ಸಭೆಯನ್ನು ನಡೆಸಿದರು. ಅಲ್ಲಿ ಇಬ್ಬರೂ ನಾಯಕರು ಉಭಯ ದೇಶಗಳ ನಡುವಿನ ವ್ಯಾಪಾರ ಮತ್ತು ಸಹಕಾರ ಸಂಬಂಧ ವಿಚಾರವಾಗಿ ಚರ್ಚೆ ನಡೆಸಿದರು.

ಡೆನ್ಮಾರ್ಕ್ ಪ್ರಧಾನಿ ಜೊತೆ ಪ್ರಧಾನಿ ಮೋದಿ

ಪಿಎಂ ಮೋದಿ ಮತ್ತು ಮೆಟ್ಟೆ ಫ್ರೆಡರಿಕ್ಸೆನ್ ಉಕ್ರೇನ್ ಬಗ್ಗೆ ಚರ್ಚಿಸಿದರು. ಈ ವೇಳೆ ಪ್ರಧಾನಿ ಮೋದಿ ಉಕ್ರೇನ್ ಮತ್ತು ರಷ್ಯಾ ವಿಚಾರವಾಗಿ ತೆಗೆದುಕೊಂಡ ಕ್ರಮಗಳನ್ನು ಸಮರ್ಥನೆ ಮಾಡಿಕೊಂಡರು. ಇದರ ಜೊತೆಗೆ ಯುದ್ಧ ನಿಲ್ಲಿಸಲು ರಾಜತಾಂತ್ರಿಕ ಮಾತುಕತೆಯೊಂದೇ ಪರಿಹಾರ ಎಂದು ಪುನರುಚ್ಚರಿಸಿದರು.

ಮೆಟ್ಟೆ ಫ್ರೆಡರಿಕ್ಸೆನ್ ಜೊತೆ ಪ್ರಧಾನಿ ಮೋದಿ ಚರ್ಚೆ

ನಂತರ ಜಂಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ನಂತರದಲ್ಲಿ ವಲಸೆ ವಿಚಾರವಾಗಿ ಉದ್ದೇಶದ ಘೋಷಣೆಗೆ (Declaration of Intent -DoI) ಸಹಿ ಮಾಡಿದರು. ಅದರ ಜೊತೆಗೆ ಕೌಶಲ್ಯ ಅಭಿವೃದ್ಧಿ, ವೃತ್ತಿಪರ ಶಿಕ್ಷಣ ಮತ್ತು ಉದ್ಯಮಶೀಲತೆ ವಿಚಾರವಾಗಿ ತಿಳುವಳಿಕೆ ಪತ್ರ ಸಹಿ ಹಾಕಲಾಯಿತು. ಉಭಯ ದೇಶಗಳ ನಡುವೆ ಒಟ್ಟು ಒಂಬತ್ತು ಒಪ್ಪಂದಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು.

ಡೆನ್ಮಾರ್ಕ್ ಪ್ರಧಾನಿ ಮತ್ತು ಅಧಿಕಾರಿಗಳೊಂದಿಗೆ ಪ್ರಧಾನಿ ಮೋದಿ ಸಭೆ

ಸಂಜೆ, ಪ್ರಧಾನಿ ಮೋದಿ ಕೋಪನ್‌ಹೇಗನ್‌ನಲ್ಲಿರುವ ಭಾರತೀಯ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ್ದು, ಈ ವೇಳೆ ಡ್ಯಾನಿಶ್ ಪ್ರಧಾನಿ ಕೂಡಾ ಹಾಜರಿದ್ದರು. ವಿದೇಶಾಂಗ ಇಲಾಖೆಯ ಹೇಳಿಕೆ ಪ್ರಕಾರ ವಿದ್ಯಾರ್ಥಿಗಳು, ಸಂಶೋಧಕರು, ವೃತ್ತಿಪರರು ಮತ್ತು ವ್ಯಾಪಾರಸ್ಥರನ್ನು ಒಳಗೊಂಡ ಡೆನ್ಮಾರ್ಕ್‌ನಲ್ಲಿರುವ ಭಾರತೀಯ ಸಮುದಾಯದ ಒಂದು ಸಾವಿರಕ್ಕೂ ಹೆಚ್ಚು ಸದಸ್ಯರು ಕಾರ್ಯಕ್ರಮದಲ್ಲ ಭಾಗಿಯಾಗಿದ್ದರು.

ಡೆನ್ಮಾರ್ಕ್​​ನಲ್ಲಿರುವ ಭಾರತೀಯ ಸದಸ್ಯರು

ಪ್ರಧಾನಿ ಮೋದಿ ಅವರು ಬುಧವಾರದಂದು ಎರಡನೇ ಭಾರತ-ನಾರ್ಡಿಕ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಇದಕ್ಕಾಗಿ ಫ್ರಾನ್ಸ್​ನ ಪ್ಯಾರಿಸ್‌ಗೆ ತೆರಳುತ್ತಿದ್ದಾರೆ. ಈ ವೇಳೆ ಮರು ಆಯ್ಕೆಯಾದ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರನ್ನು ಭೇಟಿಯಾಗಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ಇದನ್ನೂ ಓದಿ:ಉಕ್ರೇನ್​ ಸಂಘರ್ಷ ನಿಲುಗಡೆ ಬಗ್ಗೆ ಡೆನ್ಮಾರ್ಕ್​ ಪ್ರಧಾನಿ ಜೊತೆ ನರೇಂದ್ರ ಮೋದಿ ಚರ್ಚೆ

ABOUT THE AUTHOR

...view details