ಬಾಲಿ(ಇಂಡೋನೇಷ್ಯಾ):ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ವಿಶ್ವ ನಾಯಕರು ಬಾಲಿಯ ತಮನ್ ಹುತಾನ್ ರಾಯ ಮ್ಯಾಂಗ್ರೋವ್ ಕಾಡಿಗೆ ಇಂದು ಭೇಟಿ ನೀಡಿ ಸಸಿಗಳನ್ನು ನೆಟ್ಟರು. ನಂತರ ಮ್ಯಾಂಗ್ರೋವ್ ಕಾಡುಗಳ ಸುತ್ತ ಹೆಜ್ಜೆ ಹಾಕಿದರು.
ಮ್ಯಾಂಗ್ರೋವ್ ಕಾಡಿಗೆ ಭೇಟಿ ನೀಡಿದ ವಿಶ್ವ ನಾಯಕರು ಮ್ಯಾಂಗ್ರೋವ್ ಕಾಡಿಗೆ ಭೇಟಿ ನೀಡುವುದಕ್ಕೂ ಮುನ್ನ, ಮೆಟ್ಟಿಲುಗಳ ಮೇಲೆ ನಡೆಯುವಾಗ ಅಮೆರಿಕ ಅಧ್ಯಕ್ಷ ಜೋ ಬೈಡನ್ ಮುಗ್ಗರಿಸಿದರು. ಆಗ ಅವರು ಇಂಡೋನೇಷ್ಯಾ ಅಧ್ಯಕ್ಷ ಜೋಕೋ ವಿಡೋಡೋ ಅವರನ್ನು ಹಿಡಿದುಕೊಂಡರು.
ವಿಶ್ವ ನಾಯಕರೊಂದಿಗೆ ಮೋದಿ ದ್ವಿಪಕ್ಷೀಯ ಸಭೆ:"ಡಿಜಿಟಲ್ ಟ್ರಾನ್ಸ್‌ಫರ್ಮೇಷನ್" ಆಧಾರಿತ ಜಿ20ಯ ಮೂರನೇ ಕಾರ್ಯಕಾರಿ ಸಭೆಯಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಶೃಂಗದಲ್ಲಿ ಎಂಟು ದೇಶಗಳ (ಇಂಡೋನೇಷ್ಯಾ, ಸ್ಪೇನ್, ಫ್ರಾನ್ಸ್, ಸಿಂಗಾಪುರ್, ಜರ್ಮನಿ, ಇಟಲಿ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್) ನಾಯಕರೊಂದಿಗೆ ಅವರು ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ.
ಇದನ್ನೂ ಓದಿ:ಇಂಡೋನೇಷ್ಯಾದ ಬಾಲಿಯಲ್ಲಿ ಅದ್ಧೂರಿ ಸ್ವಾಗತ ಪಡೆದ ನರೇಂದ್ರ ಮೋದಿ
ಶೃಂಗಸಭೆಯ ನಡುವೆ ಪ್ರಧಾನಿ ಮೋದಿ ಬ್ರಿಟನ್ ಪ್ರಧಾನಿ ರಿಷಿ ಸುನಕ್, ಸೆನೆಗಲ್ ಗಣರಾಜ್ಯದ ಅಧ್ಯಕ್ಷ ಮ್ಯಾಕಿ ಸಾಲ್, ನೆದರ್‌ಲ್ಯಾಂಡ್‌ನ ಪಿಎಂ ಮಾರ್ಕ್ ರುಟ್ಟೆ, ಜಪಾನ್ ಪಿಎಂ ಫ್ಯೂಮಿಯೊ ಕಿಶಿಡಾ, ಯುಎಸ್ ಅಧ್ಯಕ್ಷ ಜೋ ಬೈಡನ್ ಹಾಗು ವಿಶ್ವ ಬ್ಯಾಂಕ್ ಅಧ್ಯಕ್ಷ ಡೇವಿಡ್ ಮಾಲ್ಪಾಸ್ ಅವರನ್ನು ಭೇಟಿಯಾಗಿದ್ದಾರೆ.
ಇದನ್ನೂ ಓದಿ:G20 ಶೃಂಗಸಭೆ: ಗಮನ ಸೆಳೆದ ಯುಕೆ ಪ್ರಧಾನಿ ಸುನಕ್, ಪ್ರಧಾನಿ ಮೋದಿ ಭೇಟಿ
ನಿನ್ನೆ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಹಾಗು ಮೋದಿ ಅವರ ಮೊದಲ ಭೇಟಿ ಗಮನ ಸೆಳೆದಿತ್ತು. ಇದಕ್ಕೂ ಮೊದಲು, ಅಕ್ಟೋಬರ್‌ನಲ್ಲಿ ದೂರವಾಣಿ ಕರೆ ಮಾಡಿದ್ದ ಮೋದಿ, ಬ್ರಿಟನ್ ಪ್ರಧಾನಿಯಾಗಿ ಸುನಕ್ ಗೆಲುವಿಗೆ ಅಭಿನಂದ ಸಲ್ಲಿಸಿದ್ದರು.
ಮುಂದಿನ ವರ್ಷದ ಜಿ20 ಶೃಂಗಸಭೆಯ ಅಧ್ಯಕ್ಷೀಯ ಸ್ಥಾನ ಭಾರತದ ಪಾಲಿಗೆ ಒಲಿದಿದೆ. 'ವಸುಧೈವ ಕುಟುಂಬಕಂ' ಮಂತ್ರದೊಂದಿಗೆ ಶೃಂಗಸಭೆಯನ್ನು ಯಶಸ್ವಿಗೊಳಿಸುವ ವಾಗ್ದಾನವನ್ನು ಭಾರತ ನೀಡಿದೆ.
ಇದನ್ನೂ ಓದಿ:ಬಾಲಿಯಲ್ಲಿ ಮೋದಿ - ಜೋ ಬೈಡನ್ ಮಾತುಕತೆ: ಉಭಯ ದೇಶಗಳ ಸಂಬಂಧ ಕುರಿತು ಚರ್ಚೆ