ಇಸ್ಲಾಮಾಬಾದ್(ಪಾಕಿಸ್ತಾನ):ರಾಜಕೀಯ ಉದ್ವಿಗ್ನತೆ ಹೆಚ್ಚುತ್ತಿರುವಂತೆಯೇ ಪಾಕ್ ಪ್ರಧಾನಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಲಾಗುತ್ತಿದೆ ಎಂದು ಪಾಕಿಸ್ತಾನದ ಮಾಜಿ ಸಚಿವರೊಬ್ಬರು ಹೇಳಿದ್ದಾರೆ ಎಂದು ಜಿಯೋ ನ್ಯೂಸ್ (Geo News) ವರದಿ ಮಾಡಿದೆ. ಪಾಕ್ ಸರ್ಕಾರದ ಪಕ್ಷವಾಗಿದ್ದ ಎಂಕ್ಯೂಎಂ-ಪಿ ವಿರೋಧ ಪಕ್ಷಕ್ಕೆ ಬೆಂಬಲ ನೀಡಿದ ನಂತರ ಮಾಜಿ ಸಚಿವ ಫೈಸಲ್ ವಾವ್ಡಾ ಈ ಆರೋಪ ಮಾಡಿದ್ದಾರೆ.
ಖಾಸಗಿ ಟೆಲಿವಿಷನ್ ಚಾನೆಲ್‌ನೊಂದಿಗೆ ಮಾತನಾಡಿರುವ ಫೈಸಲ್ ವಾವ್ಡಾ ಪ್ರಧಾನಿಯವರ ಜೀವಕ್ಕೆ ಅಪಾಯವಿದೆ ಮತ್ತು ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಲಾಗುತ್ತಿದೆ. ಬುಲೆಟ್ ಪ್ರೂಫ್ ಗ್ಲಾಸ್ ಬಳಸುವಂತೆ ನಾವು ಅವರಿಗೆ ಪದೇ ಪದೇ ಹೇಳಿದ್ದೇವೆ. ಸಮಯ ಬಂದಾಗ ನಾವು ಸಾವನ್ನಪ್ಪುತ್ತೇವೆ ಎಂದು ಪ್ರಧಾನಿ ಹೇಳುತ್ತಿದ್ದಾರೆ ಎಂದು ಫೈಸಲ್ ವಾವ್ಡಾ ಸ್ಪಷ್ಟನೆ ನೀಡಿದ್ದಾರೆ.