ಕರ್ನಾಟಕ

karnataka

ETV Bharat / international

ಹಾರಾಟದ ವೇಳೆ ಎಂಜಿನ್​ ಆಫ್​: ಉತ್ತರ ಗ್ರೀಸ್‌ನಲ್ಲಿ ವಿಮಾನ ಪತನ

ಹಾರಾಟದ ಸಂದರ್ಭದಲ್ಲಿ ಎಂಜಿನ್‌ನಲ್ಲಿ ತಾಂತ್ರಿಕ ದೋಷ ಉಂಟಾಗಿ ವಿಮಾನ ಪತನವಾದ ಘಟನೆ ಉತ್ತರ ಗ್ರೀಸ್​ನಲ್ಲಿ ನಡೆದಿದೆ.

Plane crashes in northern Greece
ಉತ್ತರ ಗ್ರೀಸ್‌ನಲ್ಲಿ ವಿಮಾನ ಪತನ

By

Published : Jul 17, 2022, 6:41 AM IST

ಗ್ರೀಸ್:ಉತ್ತರ ಗ್ರೀಸ್‌ನ ಕವಾಲಾ ನಗರದ ಬಳಿ ಎಂಜಿನ್​ನಲ್ಲಿ ತಾಂತ್ರಿಕ ದೋಷ ಕಂಡುಬಂದು ವಿಮಾನವೊಂದು ನೆಲಕ್ಕಪ್ಪಳಿಸಿದೆ. ಇದು ಪ್ರಯಾಣಿಕರ ವಿಮಾನವೋ ಅಥವಾ ಸರಕು ವಿಮಾನವೇ ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಘಟನೆಯಲ್ಲಿ ಜೀವಹಾನಿಯ ಬಗ್ಗೆಯೂ ಮಾಹಿತಿ ಲಭ್ಯವಾಗಬೇಕಿದೆ.

ಅಪಘಾತಗೊಂಡ ಆಂಟೊನೊವ್ ವಿಮಾನವು ಸರ್ಬಿಯಾದಿಂದ ಜೋರ್ಡಾನ್‌ಗೆ ಹೊರಟಿತ್ತು. ಹಾರಾಟದ ಸಮಯದಲ್ಲಿ ವಿಮಾನದ ಎಂಜಿನ್​ ಸ್ಥಗಿತಗೊಂಡಿದೆ. ತಕ್ಷಣ ವಿಮಾನದ ಪೈಲಟ್​​ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಥೆಸಲೋನಿಕಿ ಅಥವಾ ಕವಾಲಾ ನಿಲ್ದಾಣದಲ್ಲಿ ವಿಮಾನವನ್ನು ಲ್ಯಾಂಡ್​ ಮಾಡುವ ಮೊದಲು ಸೂಚನೆ ನೀಡಲಾಗಿದೆ.

ಪೈಲಟ್​​ ಹತ್ತಿರದ ಕವಾಲಾ ನಿಲ್ದಾಣದಲ್ಲಿ ಲ್ಯಾಂಡಿಂಗ್‌ ಮಾಡಲು ಯತ್ನಿಸುತ್ತಿದ್ದಾಗ 40 ಕಿಮೀ ದೂರದಲ್ಲಿ ವಿಮಾನಕ್ಕೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದ್ದು ನೆಲಕ್ಕೆ ಅಪ್ಪಳಿಸಿತು. ಬಳಿಕ ಭಾರಿ ಸ್ಫೋಟ ಉಂಟಾಗಿದೆ. ಪೈಲಟ್​ ಸೇರಿದಂತೆ ಇತರ ಜೀವಕ್ಕೆ ಹಾನಿಯಾದ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದೆ ಎಂದು ಗ್ರೀಸ್‌ನ ನಾಗರಿಕ ವಿಮಾನಯಾನ ಪ್ರಾಧಿಕಾರ ತಿಳಿಸಿದೆ.

ಇದನ್ನೂ ಓದಿ:ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಅಗ್ನಿ ಅವಘಡ

ABOUT THE AUTHOR

...view details