ಕರ್ನಾಟಕ

karnataka

ETV Bharat / international

ವಿಮಾನ ಪತನಕ್ಕೆ ಪೈಲಟ್​ಗಳು ಕಾರಣರಲ್ಲ : ವದಂತಿ ನಿರಾಕರಿಸಿದ ಚೀನಾ - ವಿಮಾನ ಪತನಕ್ಕೆ ಪೈಲಟ್​ಗಳು ಕಾರಣವಲ್ಲ

ಚೀನಾದಲ್ಲಿ ವಿಮಾನ ಪತನಗೊಂಡು ಅದರಲ್ಲಿ ಪ್ರಯಾಣಿಸುತ್ತಿದ್ದ 132 ಜನರು ಮೃತಪಟ್ಟ ಘಟನೆಗೆ ಅದರ ಪೈಲಟ್​ಗಳೇ ಕಾರಣ ಎಂಬ ವದಂತಿ ಸಾಮಾಜಿಕ ಜಾಲತಾಣದಲ್ಲಿ ಹರಡಿದ್ದು, ಇದನ್ನು ಚೀನಾ ಅಧಿಕಾರಿಗಳು ಅಲ್ಲಗಳೆದಿದ್ದಾರೆ. ಅಲ್ಲದೇ ತನಿಖೆ ಪ್ರಗತಿಯ ಹಂತದಲ್ಲಿದೆ ಎಂದು ತಿಳಿಸಿದ್ದಾರೆ..

plane-crash
ವಿಮಾನ ಪತನ

By

Published : Apr 12, 2022, 4:57 PM IST

ಬೀಜಿಂಗ್ ​:132 ಜನರನ್ನು ಬಲಿ ಪಡೆದ ಚೀನಾದ ಬೋಯಿಂಗ್​ ವಿಮಾನ ಪತನಕ್ಕೆ ಅದರ ಪೈಲಟ್​ಗಳೇ ಕಾರಣ ಎಂಬುದನ್ನು ವಾಯುಯಾನ ಅಧಿಕಾರಿಗಳು ಅಲ್ಲಗಳೆದಿದ್ದಾರೆ. ಅಲ್ಲದೇ, ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ. ಮಾರ್ಚ್​ 21ರಂದು ದಕ್ಷಿಣ ಚೀನಾದ ಗುವಾಂಗ್​ಕ್ಸಿ ಪ್ರದೇಶದ ವುಝೌನಗರದ ಸಮೀಪ 132 ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನ 8800 ಮೀಟರ್​ ಎತ್ತರದಿಂದ ಬಿದ್ದಿತ್ತು.

ದುರ್ಘಟನೆಯಲ್ಲಿ 9 ಸಿಬ್ಬಂದಿ ಸೇರಿದಂತೆ ಎಲ್ಲ ಪ್ರಯಾಣಿಕರು ಮೃತಪಟ್ಟಿದ್ದರು. ವಿಮಾನ ಪತನಕ್ಕೆ ಪೈಲಟ್​ಗಳೇ ಕಾರಣ ಎಂಬ ವದಂತಿ ಸಾಮಾಜಿಕ ಜಾಲತಾಣದಲ್ಲಿ ಹರಡಿದೆ. ಇದು ತನಿಖೆಯನ್ನು ದಿಕ್ಕುತಪ್ಪಿಸುವ ಕೆಲಸವಾಗಿದೆ. ಸಾರ್ವಜನಿಕ ವಿಶ್ವಾಸವನ್ನು ಹಾಳು ಮಾಡುವುದಲ್ಲದೇ, ಕಾನೂನಿನ ಉಲ್ಲಂಘನೆ ಮಾಡಿದಂತೆ ಎಂದು ಚೀನಾದ ನಾಗರಿಕ ವಿಮಾನಯಾನ ಆಡಳಿತ (ಸಿಎಎಸಿ) ತಿಳಿಸಿದೆ.

ವಿಮಾನದ ಎರಡು ಬ್ಲ್ಯಾಕ್​ಬಾಕ್ಸ್​ಗಳು ದೊರಕಿದ್ದು, ತನಿಖೆ ಮುಂದುವರಿದಿದೆ. ದುರಂತಕ್ಕೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಸರ್ಕಾರವೂ ಕೂಡ ಯಾವುದೇ ನಿರ್ಧಾರಕ್ಕೆ ಬಂದಿಲ್ಲ. ಹೀಗಾಗಿ, ಸಾಮಾಜಿಕ ಜಾಲತಾಣದಲ್ಲಿ ಹರಡಿದ ವದಂತಿಯನ್ನು ಯಾರು ನಂಬಬಾರದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನ ದುರಂತದಲ್ಲಿ ಮೃತಪಟ್ಟ ಮೂವರು ಪೈಲಟ್​ಗಳು ನುರಿತ ವ್ಯಕ್ತಿಗಳಾಗಿದ್ದು, ಅದರ ಕ್ಯಾಪ್ಟನ್ 6,709 ಗಂಟೆಗಳ ಹಾರಾಟ ನಡೆಸಿದ್ದರೆ, ಮೊದಲ ಮತ್ತು ಎರಡನೇ ಪೈಲಟ್​ ಕ್ರಮವಾಗಿ 31,769 ಗಂಟೆಗಳು ಮತ್ತು 556 ಗಂಟೆಗಳ ಕಾಲ ಹಾರಾಟ ನಡೆಸಿದ ಅನುಭವ ಹೊಂದಿದ್ದಾರೆ.

ಓದಿ:ಶ್ರೀಲಂಕಾ ಮೇಲಿದೆ $51 ಬಿಲಿಯನ್ ಸಾಲ! ಮರುಪಾವತಿ ನಿಲ್ಲಿಸಿ, ಇನ್ನಷ್ಟು ಸಾಲಕ್ಕೆ ಮೊರೆ

ABOUT THE AUTHOR

...view details