ಮನಿಲಾ(ಫಿಲಿಪೈನ್ಸ್) : ಕಳೆದ ವಾರದಲ್ಲಿ ಫಿಲಿಪೈನ್ಸ್‌ನಲ್ಲಿ ಸಂಭವಿಸಿದ ಚಂಡಮಾರುತದಿಂದ ಸತ್ತವರ ಸಂಖ್ಯೆ 121ಕ್ಕೆ ಏರಿಕೆಯಾಗಿದ್ದು, ಇದರಲ್ಲಿ 81 ಮಂದಿ ಫಿಲಿಪೈನ್ ನಗರದಲ್ಲಿ ಉಂಟಾದ ಭೂಕುಸಿತದಲ್ಲಿ ಸಮಾಧಿಯಾಗಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಮಧ್ಯ ಫಿಲಿಪೈನ್ಸ್‌ನಲ್ಲಿ 118 ಮತ್ತು ದಕ್ಷಿಣ ಫಿಲಿಪೈನ್ಸ್‌ನಲ್ಲಿ 3 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಚಂಡಮಾರುತ ಹೆಸರು 'ಮೆಗಿ' ಈ ಚಂಡಮಾರುತದಿಂದ ಪ್ರವಾಹ ಮತ್ತು ಭಾರೀ ಭೂಕುಸಿತದಂಥಹ ದುಷ್ಪರಿಣಾಮಗಳು ಉಂಟಾಗಿವೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಮಂಡಳಿಯು ಇದುವರೆಗೆ ಕೇವಲ 76 ಮಂದಿ ಸಾವನ್ನಪ್ಪಿದ್ದು, 29 ಕಾಣೆಯಾಗಿದ್ದಾರೆ ಎಂದು ವರದಿ ಮಾಡಿದೆ. ವಿಪತ್ತುಗಳಿಂದ ಪೀಡಿತ ಪ್ರಾಂತ್ಯಗಳಿಂದ ವರದಿಗಳನ್ನು ಈ ಸಂಸ್ಥೆ ಸಂಗ್ರಹಿಸುತ್ತಿದ್ದು, ಇನ್ನೂ ಸಾವುನೋವುಗಳ ಸಂಖ್ಯೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಬೇಬೇ ನಗರದಲ್ಲಿ ಉಂಟಾದ ಭೂಕುಸಿತದಲ್ಲಿ 81 ಮತ್ತು ಲೇಯ್ಟ್ ಪ್ರಾಂತ್ಯದ ಅಬುಯೋಗ್ ಪಟ್ಟಣದಲ್ಲಿ 31 ಮತ್ತು ಸಮರ್ ಪ್ರಾಂತ್ಯದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ಅವರು ವರದಿಗಳಲ್ಲಿ ಉಲ್ಲೇಖಿಸಲಾಗಿದೆ.