ಲಾಸ್ ಏಂಜಲೀಸ್(ಅಮೆರಿಕ): ಓಮಿಕ್ರಾನ್ ಸ್ಟ್ರೈನ್ ವಿರುದ್ಧ ಫೈಜರ್ - ಬಯೋಎನ್‌ಟೆಕ್ ಕೋವಿಡ್ ಲಸಿಕೆ ಶೇಕಡಾ 73 ರಷ್ಟು ಪರಿಣಾಮಕಾರಿಯಾಗಿದೆ ಎಂದು ಫೈಜರ್ ಪ್ರಕಟಿಸಿದೆ. ಈ ಲಸಿಕೆಯನ್ನು 6 ತಿಂಗಳಿಂದ 4 ವರ್ಷಗಳವರೆಗಿನ ಮಕ್ಕಳನ್ನು ರಕ್ಷಿಸುವಲ್ಲಿ ಈ ಲಸಿಕೆ ಹೆಚ್ಚು ಪರಿಣಾಮಕಾರಿ ಎಂದು ಫೈಜರ್ ಹೇಳಿದೆ.
ಜೂನ್ 17 ರಂದು ಈ ವಯಸ್ಸಿನ ಮಕ್ಕಳಿಗೆ ಫೈಜರ್ ಲಸಿಕೆ ನೀಡಲು ಅಮೆರಿಕದ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಅನುಮತಿ ನೀಡಿದೆ. ಲಸಿಕೆ ನೀಡಿಕೆ ಅಧ್ಯಯನದಲ್ಲಿ ಭಾಗವಹಿಸಿದವರು ಮೂರು 3-µg ಡೋಸ್‌ಗಳ Pfizer-BioNTech ಲಸಿಕೆ ಅಥವಾ ಪ್ಲಸೀಬೊ ಪಡೆದುಕೊಂಡಿದ್ದಾರೆ. 6 ತಿಂಗಳಿಂದ 4 ವರ್ಷ ವಯಸ್ಸಿನ ಮಕ್ಕಳಲ್ಲಿ ಲಸಿಕೆ ಪರಿಣಾಮಕಾರಿತ್ವವು ಶೇಕಡಾ 73.2 ರಷ್ಟಿದೆ ಎಂದು ಅಲ್ಲಿನ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.