ರೀಡ್ ಪಾಯಿಂಟ್, ಮೊಂಟಾನಾ :ಅಮೆರಿಕದ ಮೊಂಟಾನಾ ರಾಜ್ಯದಲ್ಲಿ ಯೆಲ್ಲೊಸ್ಟೋನ್ ನದಿಯ ಮೇಲಿನ ಸೇತುವೆ ಜೂನ್ 24ರ ಶನಿವಾರ ಮುಂಜಾನೆ ಕುಸಿದಿತ್ತು. ಇದರಿಂದ ಅಪಾಯಕಾರಿ ವಸ್ತುಗಳನ್ನು ಸಾಗಿಸುತ್ತಿದ್ದ ಗೂಡ್ಸ್ ರೈಲಿನ ಕೆಲವು ವ್ಯಾಗನ್‌ಗಳು ವೇಗವಾಗಿ ಹರಿಯುತ್ತಿದ್ದ ನೀರಿನಲ್ಲಿ ಬಿದ್ದಿದ್ದವು. ಸರಕು ಸಾಗಣೆ ರೈಲಿನ ಟ್ಯಾಂಕರ್‌ಗಳು ಬಿಸಿ ಡಾಂಬರು ಮತ್ತು ಕರಗಿದ ಗಂಧಕವನ್ನು ಹೊತ್ತೊಯ್ಯುತ್ತಿದ್ದವು ಎಂದು ಸ್ಟಿಲ್‌ವಾಟರ್ ಕೌಂಟಿ ಡಿಸಾಸ್ಟರ್ ಮತ್ತು ಎಮರ್ಜೆನ್ಸಿ ಸರ್ವಿಸಸ್ ಹೇಳಿತ್ತು. ಬೆಳಗ್ಗೆ 6 ಗಂಟೆಗೆ ರೈಲು ಅಪಘಾತದ ನಂತರ ಅಧಿಕಾರಿಗಳು ನದಿಯ ಕೆಳಭಾಗದ ಪ್ರದೇಶಗಳಿಗೆ ಕುಡಿಯುವ ನೀರಿನ ಪೂರೈಕೆಯನ್ನು ಸ್ಥಗಿತಗೊಳಿಸಿದ್ದರು. ಕೆಲವು ಟ್ಯಾಂಕರ್‌ಗಳಿಂದ ಹಳದಿ ಬಣ್ಣದ ದ್ರವದ ವಸ್ತು ನದಿಗೆ ಸೇರುತ್ತಿರುವುದು ಕಂಡು ಬಂದಿದೆ. ಆದರೆ ಎರಡು ತಿಂಗಳೂ ಕಳೆದ್ರೂ ಶುಚಿಗೊಳಿಸುವ ಕಾರ್ಯ ತೃಪ್ತಿ ತಂದಿಲ್ಲ ಎಂಬ ಮಾತುಗಳು ಕೇಳಿ ಬಂದಿದೆ.
ರೈಲು ಅಪಘಾತ ಸಂದರ್ಭದಲ್ಲಿ ಮೂರು ಡಾಂಬರು ಟ್ಯಾಂಕರ್ ಮತ್ತು ನಾಲ್ಕು ಸಲ್ಫರ್ ಟ್ಯಾಂಕರ್ ನದಿಗೆ ಬಿದ್ದಿದ್ದವು. ಮೊಂಟಾನಾ ರೈಲ್ ಲಿಂಕ್‌ನ ವಕ್ತಾರ ಆಂಡಿ ಗಾರ್ಲ್ಯಾಂಡ್, ರೈಲು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಮತ್ತು ಯಾವುದೇ ಗಾಯಗಳು ವರದಿಯಾಗಿಲ್ಲ ಎಂದು ಸರ್ಕಾರ ಬಿಡುಗಡೆಗೊಳಿಸಿದ್ದ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿದು ಬಂದಿತ್ತು. ಆಸ್ಫಾಲ್ಟ್ ಮತ್ತು ಸಲ್ಫರ್ ಎರಡೂ ಶೀತ ತಾಪಮಾನಕ್ಕೆ ಒಡ್ಡಿಕೊಂಡಾಗ ವೇಗವಾಗಿ ಗಟ್ಟಿಯಾಗುತ್ತವೆ ಎಂದು ಅಧಿಕಾರಿಗಳು ಹೇಳಿದ್ದರು.
ಈ ಅಪಘಾತ ನಂತರ ಸುತ್ತಮುತ್ತಲಿನ ಪ್ರದೇಶದ ನದಿ ದಡದ ಉದ್ದಕ್ಕೂ ಡಾಂಬರ್ ಮತ್ತು ಸಲ್ಫರ್ ಹರಡಿತ್ತು. ಈ ಘಟನೆ ಕೆಲ ದಿನಗಳ ಬಳಿಕ ಸ್ವಚ್ಛಗೊಳಿಸುವ ಕೆಲಸಗಾರರು ಹೋಗಿದ್ದರು. ಆ ನಂತರ ರೈಲ್ರೋಡ್, ಮೊಂಟಾನಾ ರೈಲ್ ಲಿಂಕ್, ಫೆಡರಲ್ ಮತ್ತು ರಾಜ್ಯ ಅಧಿಕಾರಿಗಳ ಜೊತೆಯಲ್ಲಿ ಕಳೆದ ವಾರ ಹೆಚ್ಚಿನ ಶುಚಿಗೊಳಿಸುವ ಕೆಲಸವನ್ನು ಸ್ಥಗಿತಗೊಳಿಸಿದ್ದರು. ಅಷ್ಟೇ ಅಲ್ಲ ಕಲುಷಿತ ಸೈಟ್‌ಗಳನ್ನು ಸಕ್ರಿಯವಾಗಿ ಹುಡುಕುವುದನ್ನು ನಿಲ್ಲಿಸಿತು. ನದಿಯ ನೀರಿನ ಮಟ್ಟವು ಕುಸಿಯುತ್ತಿರುವುದರಿಂದ ಸ್ವಚ್ಛಗೊಳಿಸುವ ಸಿಬ್ಬಂದಿ ಬಳಸುವ ದೊಡ್ಡ ಪವರ್ ಬೋಟ್‌ಗಳನ್ನು ಸುರಕ್ಷಿತವಾಗಿ ನಿರ್ವಹಿಸುವುದು ಕಷ್ಟಕರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ಈಗ ಮತ್ತೆ ಶುಚಿಗೊಳಿಸುವ ಕಾರ್ಯಾ ಆರಂಭವಾಗಿದ್ದು, ಅಧಿಕಾರಿಗಳು ನದಿಯುದ್ದಕ್ಕೂ ಹರಡಿರುವ ಡಾಂಬರ್ ಮತ್ತು ಸಲ್ಫರ್ ಸ್ವಚ್ಛತಾ ಕಾರ್ಯ ಪ್ರಾರಂಭಿಸಿದ್ದಾರೆ. ಆದ್ರೆ ಅಲ್ಲಿನ ಸರ್ಕಾರ ಶುಚಿಗೊಳಿಸುವ ಕಾರ್ಯದ ಬಗ್ಗೆ ಅತೃಪ್ತಿ ಸೂಚಿಸಿದೆ.