ಸಿಡ್ನಿ: ಹಾರಾಟದ ವೇಳೆ ಎದುರಾದ ಭಾರಿ ಪ್ರಮಾಣದ ಟರ್ಬುಲೆನ್ಸ್ ಪರಿಣಾಮ ಏರ್ ಇಂಡಿಯಾ ವಿಮಾನದಲ್ಲಿದ್ದ ಕೆಲವು ಪ್ರಯಾಣಿಕರು ಗಾಯಗೊಂಡಿದ್ದಾರೆ. ವಿಮಾನವು ಬುಧವಾರ ದೆಹಲಿಯಿಂದ ಸಿಡ್ನಿಗೆ ಸಂಚರಿಸುತ್ತಿತ್ತು. ಮಂಗಳವಾರ ಈ ಘಟನೆ ಸಂಭವಿಸಿದೆ.
ಭಾರಿ ಟರ್ಬುಲೆನ್ಸ್: ದೆಹಲಿ-ಸಿಡ್ನಿ ವಿಮಾನ ಪ್ರಯಾಣಿಕರಿಗೆ ಗಾಯ - ರ್ ಇಂಡಿಯಾ ವಿಮಾನದಲ್ಲಿ ಹಲವಾರು ಪ್ರಯಾಣಿಕರು ಗಾಯ
ದೆಹಲಿಯಿಂದ ಸಿಡ್ನಿಗೆ ಸಂಚರಿಸುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿದ್ದ ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ.
ದೆಹಲಿ-ಸಿಡ್ನಿ ವಿಮಾನ ಪ್ರಯಾಣಿಕರಿಗೆ ಗಾಯ, ಚಿಕಿತ್ಸೆ
ಹಾರಾಟದ ಸಮಯದಲ್ಲಿ ಭಾರಿ ಪ್ರಮಾಣದ ವ್ಯತಿರಿಕ್ತ ಹವಾಮಾನಕ್ಕೆ ವಿಮಾನ ಅಲುಗಾಡಿದೆ. ಹೀಗಾಗಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ಸಿಡ್ನಿ ನಿಲ್ದಾಣಕ್ಕೆ ಆಗಮಿಸಿದ ನಂತರ ವೈದ್ಯಕೀಯ ನೆರವು ನೀಡಲಾಗಿದೆ. ಯಾವುದೇ ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲಿಸಿಲ್ಲ ಎಂದು ತಿಳಿದುಬಂದಿದೆ. ಕ್ಯಾಬಿನ್ ಸಿಬ್ಬಂದಿ ವಿಮಾನದಲ್ಲಿದ್ದ ವೈದ್ಯರು ಮತ್ತು ನರ್ಸ್ ಸಹಾಯದಿಂದ ಪ್ರಥಮ ಚಿಕಿತ್ಸಾ ಕಿಟ್ ಬಳಸಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ.
ಇದನ್ನೂ ಓದಿ:ಹೊಟ್ಟೆಯೊಳಗೆ ಮರೆಮಾಚಿ ಅಕ್ರಮವಾಗಿ ಸಾಗಿಸುತ್ತಿದ್ದ 11 ಕೋಟಿ ಮೌಲ್ಯದ ಕೊಕೇನ್ ವಶ