ವೆಲ್ಲಿಂಗ್ಟನ್:ಪ್ರಪಂಚದಾದ್ಯಂತಅನೇಕ ದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ನಿರಂತರವಾಗಿ ಭೂಕಂಪಗಳ ಅನುಭವವಾಗುತ್ತಿದೆ. ಸೋಮವಾರ(ನಿನ್ನೆ) ಬೆಳಗ್ಗೆಪಪುವಾ ನ್ಯೂ ಗಿನಿಯಾದಲ್ಲಿ ಭೂಕಂಪ ಸಂಭವಿಸಿದ್ದು ನಾಲ್ಕು ಜನರು ಸಾವನ್ನಪ್ಪಿ, 300ಕ್ಕೂ ಹೆಚ್ಚು ಮನೆಗಳು ಧರೆಗುರುಳಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಆಸ್ಟ್ರೇಲಿಯಾದ ಸಮೀಪವಿರುವ ಪಪುವಾ ನ್ಯೂ ಗಿನಿಯಾದಲ್ಲಿ ಸೋಮವಾರ(ಏ.3) ಬೆಳಗ್ಗೆ (ಸ್ಥಳೀಯ ಕಾಲಮಾನ) ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 7.0 ತೀವ್ರತೆ ದಾಖಲಾಗಿದೆ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ(USGS) ತಿಳಿಸಿದೆ.
"ಪೆಸಿಫಿಕ್ ರಾಷ್ಟ್ರದ ಉತ್ತರ ಭಾಗದಲ್ಲಿರುವ ಚಂಬ್ರಿ ಸರೋವರದ ಸಮೀಪ ಕೇಂದ್ರ ಬಿಂದು ಇದೆ. ಇದು ಭೂಮಿಯಲ್ಲಿ ಆಳವಾದ ಬಿರುಕುಗಳನ್ನು ಉಂಟು ಮಾಡಿದೆ. ಈ ಪ್ರದೇಶವು ಜೌಗು ಪ್ರದೇಶಗಳಿಂದ ಕೂಡಿದೆ. ಇಲ್ಲಿನ ಜನರು ಬೇಟೆ ಮತ್ತು ಮೀನುಗಾರಿಕೆಯನ್ನು ಜೀವನಾಧಾರವಾಗಿಸಿಕೊಂಡು ಬದುಕು ಸಾಗಿಸುತ್ತಾರೆ" ಎಂದು ಪೋರ್ಟ್ ಮೊರೆಸ್ಬಿ ಜಿಯೋಫಿಸಿಕಲ್ ಅಬ್ಸರ್ವೇಟರಿಯ ಕಾರ್ಯನಿರ್ವಾಹಕ ಸಹಾಯಕ ನಿರ್ದೇಶಕ ಮ್ಯಾಥ್ಯೂ ಮೊಯಿಹೊಯ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಭೂಕಂಪದ ಕೇಂದ್ರ ಬಿಂದುವಿನ ಸುತ್ತಲಿನ 23 ಹಳ್ಳಿಗಳಲ್ಲಿ ಹೆಚ್ಚಿನ ಹಾನಿ ಉಂಟಾಗಿದೆ. ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ 17 ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳನ್ನು ಉಲ್ಲೇಖಿಸಿ ಪಪುವಾ ನ್ಯೂ ಗಿನಿಯಾ ದೈನಿಕವೊಂದು ವರದಿ ಮಾಡಿದೆ.
ಇದನ್ನೂ ಓದಿ:ಅರ್ಜೆಂಟೀನಾ, ತಜಕಿಸ್ತಾನದಲ್ಲಿ ಕಂಪಿಸಿದ ಭೂಮಿ: ಕ್ರಮವಾಗಿ 6.5, 5.9 ತೀವ್ರತೆ ದಾಖಲು