ಗಾಜಾ:ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವಿನ ನಾಲ್ಕು ದಿನಗಳ ತಾತ್ಕಾಲಿಕ ಕದನ ವಿರಾಮ ಇಂದು ಕೊನೆಗೊಳ್ಳಲಿದೆ. ಮೂರನೇ ಹಂತದ ಭಾಗವಾಗಿ ಹಮಾಸ್ 17 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿ, ರೆಡ್ ಕ್ರಾಸ್ ಸಂಸ್ಥೆಗೆ ಈಗಾಗಲೇ ಹಸ್ತಾಂತರಿಸಿದೆ. ಇವರಲ್ಲಿ 14 ಮಂದಿ ಇಸ್ರೇಲಿ ಪ್ರಜೆಗಳು ಮತ್ತು ಮೂವರು ವಿದೇಶಿಯರಿದ್ದಾರೆ. 14 ಇಸ್ರೇಲಿ ಪ್ರಜೆಗಳಲ್ಲಿ 9 ಮಂದಿ ಮಕ್ಕಳಾಗಿದ್ದರೆ, ವಿದೇಶಿಯರಲ್ಲಿ ನಾಲ್ಕು ವರ್ಷದ ಅಮೆರಿಕನ್ ಮಗು ಸಹ ಇದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಇಸ್ರೇಲ್ 39 ಪ್ಯಾಲೆಸ್ಟೀನಿಯನ್ ಕೈದಿಗಳನ್ನು ಜೈಲಿನಿಂದ ಬಿಡುಗಡೆಗೊಳಿಸಿದೆ. ಇದುವರೆಗೆ ಹಮಾಸ್ 58 ಜನರನ್ನು ಮತ್ತು ಇಸ್ರೇಲ್ 114 ಜನರನ್ನು ಒಪ್ಪಂದದ ಭಾಗವಾಗಿ ರಿಲೀಸ್ ಮಾಡಿದೆ.
ಸ್ಥಳದಲ್ಲಿ ಕದನ ವಿರಾಮದಿಂದಾಗಿ ಗಾಜಾಕ್ಕೆ ಸುಲಭವಾಗಿ ಮಾನವೀಯ ನೆರವು ತಲುಪುತ್ತಿವೆ. 120 ಟ್ರಕ್‌ಗಳು ಗಾಜಾ ತೆರಳಿವೆ ಎಂದು ಈಜಿಪ್ಟ್ ಹೇಳಿದೆ. ಉಭಯ ಪಕ್ಷಗಳ ನಡುವಿನ ತಾತ್ಕಾಲಿಕ ಕದನ ವಿರಾಮ ಅಂತ್ಯಗೊಳ್ಳುತ್ತಿದ್ದಂತೆ ಒಪ್ಪಂದವನ್ನು ವಿಸ್ತರಿಸಲಾಗುತ್ತದೆಯೇ/ಇಲ್ಲವೇ ಎಂಬುದನ್ನು ಕಾದು ನೋಡಬೇಕು.
ಕದನ ವಿರಾಮ ವಿಸ್ತರಣೆ ಕುರಿತು ಇದುವರೆಗೆ ಯಾವುದೇ ಘೋಷಣೆಯಾಗಿಲ್ಲ. ಗಾಜಾ ಪಟ್ಟಿಗೆ ಭೇಟಿ ನೀಡಿರುವ ಇಸ್ರೇಲ್ ಪ್ರಧಾನಿ ನೆತನ್ಯಾಹು ಪ್ರತಿಯೊಬ್ಬ ಒತ್ತೆಯಾಳನ್ನೂ ಮುಕ್ತಗೊಳಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಹಮಾಸ್‌ನ ಅಂತ್ಯ, ಒತ್ತೆಯಾಳುಗಳ ಬಿಡುಗಡೆ ಮತ್ತು ಭವಿಷ್ಯದ ಬೆದರಿಕೆಗಳನ್ನು ತಡೆಗಟ್ಟುವುದು ಮೂರು ಪುರಮುಖ ಗುರಿಗಳಾಗಿವೆ. ಈ ಗುರಿಗಳನ್ನು ಸಾಧಿಸಲು ಅಗತ್ಯವಿರುವ ಎಲ್ಲಾ ಶಕ್ತಿಯನ್ನು ನಾವು ಹೊಂದಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.