ರಮಲ್ಲಾ, ಪ್ಯಾಲೆಸ್ಟೇನ್:ಗಾಜಾ ಮೇಲಿನ ಇಸ್ರೇಲ್ ದಾಳಿಯಲ್ಲಿ ಅಪಾಯಕಾರಿ ಬೆಳವಣಿಗೆಗಳನ್ನು ನಿಲ್ಲಿಸಲು ತಕ್ಷಣದ ಮಧ್ಯಸ್ಥಿಕೆ ವಹಿಸುವಂತೆ ಅಂತಾರಾಷ್ಟ್ರೀಯ ಸಮುದಾಯವನ್ನು ಪ್ಯಾಲೇಸ್ಟಿನಿಯನ್ ವಿದೇಶಾಂಗ ವ್ಯವಹಾರಗಳು ಮತ್ತು ಅನಿವಾಸಿಗಳ ಸಚಿವಾಲಯ ಒತ್ತಾಯಿಸಿದೆ. ಗಾಜಾದಲ್ಲಿ ಇಂಟರ್ನೆಟ್ ಸೇವೆ ಕಡಿತ ಮತ್ತು ನಿರಂತರ ಶೆಲ್ ದಾಳಿ ಹಿನ್ನೆಲೆ ಯುದ್ಧವನ್ನು ನಿಲ್ಲಿಸುವಂತೆ ಪ್ಯಾಲೆಸ್ಟೇನ್ ಜಗತ್ತಿಗೆ ಕರೆ ನೀಡಿದೆ.
ಗಾಜಾ ಮೇಲಿನ ಇಸ್ರೇಲ್ ಯುದ್ಧದಲ್ಲಿ ಅಪಾಯಕಾರಿ ಬೆಳವಣಿಗೆಗಳನ್ನು ತಡೆಯಲು ತಕ್ಷಣದ ಮಧ್ಯಸ್ಥಿಕೆಗಾಗಿ ಇಡೀ ಜಗತ್ತಿಗೆ ಕರೆ ನೀಡುತ್ತದೆ ಎಂದು ಪ್ಯಾಲೆಸ್ಟೇನಿಯನ್ ವಿದೇಶಾಂಗ ವ್ಯವಹಾರಗಳು ಮತ್ತು ವಲಸಿಗರ ಸಚಿವಾಲಯವು ಸಾಮಾಜಿಕ ಮಾಧ್ಯಮದ ಮೂಲಕ ತಿಳಿಸಿದೆ.
ಗಾಜಾ ಮೇಲಿನ ಯುದ್ಧದ ಇತ್ತೀಚಿನ ಬೆಳವಣಿಗೆಗಳಲ್ಲಿ, ವಿಶೇಷವಾಗಿ ಇಂಟರ್ನೆಟ್ ಸೇವೆ ಕಡಿತ ಮತ್ತು ನಿರಂತರ ಶೆಲ್ ದಾಳಿಯನ್ನು ತಡೆಯುವುದು ಮತ್ತು ಈ ಯುದ್ಧವನ್ನು ನಿಲ್ಲಿಸಲು ತಕ್ಷಣವೇ ಮಧ್ಯಪ್ರವೇಶಿಸುವಂತೆ ಇಡೀ ಜಗತ್ತಿಗೆ ಕರೆ ನೀಡುತ್ತದೆ. ಇದು ಗಾಜಾದಲ್ಲಿರುವ ನಮ್ಮ ಜನರ ವಿರುದ್ಧ ಪ್ರತಿ ನಿಮಿಷವೂ ಇಸ್ರೇಲ್ ನಡೆಸುತ್ತಿರುವ ಹತ್ಯಾಕಾಂಡಗಳ ವಿಸ್ತರಣೆಗೆ ಕಾರಣವಾಗುತ್ತದೆ ಎಂದು ಸಚಿವಾಲಯ ಹೇಳಿದೆ.
ಗಾಜಾದಲ್ಲಿ ಇಸ್ರೇಲ್ ಸೇನೆ ಮತ್ತೊಮ್ಮೆ ವೈಮಾನಿಕ ದಾಳಿಯನ್ನು ತೀವ್ರಗೊಳಿಸಿದೆ. ಗಾಜಾದ ಹಲವು ಪ್ರದೇಶಗಳಲ್ಲಿ ಇಂಟರ್ನೆಟ್ ಅನ್ನು ಸ್ಥಗಿತಗೊಳಿಸಲಾಗಿದೆ. ಕಳೆದ ರಾತ್ರಿ ಗಾಜಾದಲ್ಲಿ ತನ್ನ ಚಟುವಟಿಕೆಯನ್ನು ಹೆಚ್ಚಿಸುವುದಾಗಿ ಇಸ್ರೇಲ್ ರಕ್ಷಣಾ ಪಡೆಗಳ (ಐಡಿಎಫ್) ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗಾರಿ ಹೇಳಿದ್ದಾರೆ ಎಂದು ಪ್ಯಾಲೇಸ್ಟಿನಿಯನ್ ವಿದೇಶಾಂಗ ಸಚಿವಾಲಯ ಹೇಳಿಕೆ ನೀಡಿದೆ.
ಇಸ್ರೇಲ್ ಮೇಲೂ ಕ್ಷಿಪಣಿ ದಾಳಿ:ಇಸ್ರೇಲ್ ತನ್ನ ಕಾರ್ಯಾಚರಣೆಯನ್ನು ತೀವ್ರಗೊಳಿಸುತ್ತಿದ್ದಂತೆ ಗಾಜಾ ಸ್ಕೈಲೈನ್‌ನಲ್ಲಿ ಸ್ಫೋಟಗಳು ಕಂಡುಬಂದಿವೆ. ಇಸ್ರೇಲ್‌ನ ಅಶ್ಕೆಲೋನ್ ನಗರದ ಮೇಲೂ ಕ್ಷಿಪಣಿಗಳ ದಾಳಿ ನಡೆದಿದೆ. ಇಸ್ರೇಲ್ ಸೇನೆಯು ತನ್ನ ಸೇನಾ ಕಾರ್ಯಾಚರಣೆಯನ್ನು ವಿಸ್ತರಿಸುತ್ತಿದ್ದಂತೆ ಶುಕ್ರವಾರ ಇಸ್ರೇಲ್‌ನ ಗಡಿ ಪ್ರದೇಶದ ಗಾಜಾ ಭಾಗದಲ್ಲಿ ಭಾರೀ ಶೆಲ್ ದಾಳಿಗಳು ಕಂಡು ಬಂದಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಗಾಜಾ ನಗರ ಮತ್ತು ಉತ್ತರ ಗಾಜಾದ ಸುತ್ತಮುತ್ತಲಿನ ಪ್ರದೇಶಗಳ ಮೇಲಿನ ದಾಳಿಗಳನ್ನು ಮುಂದುವರಿಸುತ್ತದೆ. ಗಾಜಾದ ದಕ್ಷಿಣ ಭಾಗಕ್ಕೆ ಸ್ಥಳಾಂತರಗೊಳ್ಳಲು ಪ್ಯಾಲೆಸ್ಟೀನಿಯಾದವರಿಗೆ ಸೂಚಿಸಲಾಗಿದೆ. ನಾವು ಇಸ್ರೇಲ್ ರಾಜ್ಯದ ಭದ್ರತಾ ಹಿತಾಸಕ್ತಿಗಳನ್ನು ರಕ್ಷಿಸುವ ಸಲುವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು IDF ವಕ್ತಾರ ಡೇನಿಯಲ್ ಹಗಾರಿ ಹೇಳಿದ್ದಾರೆ.
ಗಾಜಾದಲ್ಲಿ ಇಂಟರ್ನೆಟ್ ಸ್ಥಗಿತ: ಗಾಜಾದಲ್ಲಿ ಪ್ರಾಥಮಿಕ ಇಂಟರ್ನೆಟ್ ಪೂರೈಕೆದಾರರಾದ ನೆಟ್‌ಸ್ಟ್ರೀಮ್ ಸೇವೆಗಳನ್ನು ಒದಗಿಸುವುದನ್ನು ನಿಲ್ಲಿಸಿದೆ ಎಂದು ಜಾಗತಿಕ ಇಂಟರ್ನೆಟ್ ಮಾನಿಟರ್ ನೆಟ್‌ಬ್ಲಾಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ. ಭಾರೀ ಬಾಂಬ್ ಸ್ಫೋಟದಿಂದ ಫೋನ್ ಮತ್ತು ಇಂಟರ್ನೆಟ್ ಸೇರಿದಂತೆ ಸೇವೆಗಳನ್ನು ಕಡಿತಗೊಳಿಸಲಾಗಿದೆ ಎಂದು ಪ್ಯಾಲೇಸ್ಟಿನಿಯನ್ ಮೊಬೈಲ್ ಫೋನ್ ಸೇವಾ ಪೂರೈಕೆದಾರ ಜವ್ವಾಲ್ ಹೇಳಿದ್ದಾರೆ.
ಓದಿ:ಬಾಹ್ಯಾಕಾಶದಿಂದ ಪಾಳುಭೂಮಿಯಂತೆ ಗೋಚರಿಸುತ್ತಿರುವ ಉತ್ತರ ಗಾಜಾ!
ಗಾಜಾದಲ್ಲಿ 7 ಸಾವಿರಕ್ಕೂ ಹೆಚ್ಚು ಸಾವು: ಮತ್ತೊಂದೆಡೆ, ಇಸ್ರೇಲ್ ಉಗ್ರರ ದಾಳಿಯಿಂದಾಗಿ ಗಾಜಾದಲ್ಲಿ ನಾಗರಿಕರ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಗಾಜಾದ ಆರೋಗ್ಯ ಸಚಿವಾಲಯದ ಪ್ರಕಾರ ಇದುವರೆಗೆ 7 ಸಾವಿರಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಗಾಯಗೊಂಡವರ ಸಂಖ್ಯೆ 10 ಸಾವಿರಕ್ಕೂ ಹೆಚ್ಚು ಎಂದು ಹೇಳಿದೆ.