ಕರ್ನಾಟಕ

karnataka

ETV Bharat / international

ಲೈವ್​ ವರದಿ ಮಾಡುತ್ತಿದ್ದಾಗ ದುರ್ವರ್ತನೆ; ಬಾಲಕನ ಕೆನ್ನೆಗೆ ಬಾರಿಸಿದ ಪತ್ರಕರ್ತೆ - ಪಾಕಿಸ್ತಾನದಲ್ಲಿಬಾಲಕನ ಕೆನ್ನೆಗೆ ಬಾರಿಸಿದ ಪರ್ತಕರ್ತೆ

ಸುದ್ದಿಯನ್ನು ನೇರಪ್ರಸಾರದಲ್ಲಿ ವರದಿ ಮಾಡುತ್ತಿದ್ದಾಗ ಮಹಿಳಾ ಪತ್ರಕರ್ತೆಯೊಬ್ಬರು ಬಾಲಕನ ಕೆನ್ನೆಗೆ ಬಾರಿಸಿರುವ ವಿಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ಹುಡುಗನ ದುರ್ವರ್ತನೆ ಪತ್ರಕರ್ತೆಯ ಸಿಟ್ಟಿಗೆ ಕಾರಣವಾಗಿತ್ತು.

Pakistani reporter slaps boy, Pakistani reporter slaps boy video viral, Pakistani reporter slaps boy news, ಲೈವ್​ ವರದಿ ಮಾಡುತ್ತಿದ್ದಾಗಲೇ ಬಾಲಕನ ಕೆನ್ನೆಗೆ ಬಾರಿಸಿದ ಪರ್ತಕರ್ತೆ, ಪಾಕಿಸ್ತಾನದಲ್ಲಿಬಾಲಕನ ಕೆನ್ನೆಗೆ ಬಾರಿಸಿದ ಪರ್ತಕರ್ತೆ, ಪಾಕಿಸ್ತಾನದಲ್ಲಿ ಬಾಲಕನ ಕೆನ್ನೆಗೆ ಬಾರಿಸಿದ ಪರ್ತಕರ್ತೆ ಸುದ್ದಿ,
ಲೈವ್​ ವರದಿ ಮಾಡುತ್ತಿದ್ದಾಗಲೇ ಬಾಲಕನ ಕೆನ್ನೆಗೆ ಬಾರಿಸಿದ ಪರ್ತಕರ್ತೆ

By

Published : Jul 13, 2022, 8:13 AM IST

ಇಸ್ಲಾಮಾಬಾದ್(ಪಾಕಿಸ್ತಾನ)​:ಸುದ್ದಿವಾಹಿನಿ ಪತ್ರಕರ್ತೆಯೊಬ್ಬರು ಬಾಲಕನಿಗೆ ಕಪಾಳಮೋಕ್ಷ ಮಾಡಿರುವ ವಿಡಿಯೋ ಇಲ್ಲಿದೆ. ಈದ್-ಉಲ್-ಅಧಾ ನಿಮಿತ್ತ ಪಾಕಿಸ್ತಾನ ಸರ್ಕಾರ ಇದೇ ಜುಲೈ 9ರಂದು ರಜೆ ಘೋಷಿಸಿತ್ತು. ಹಬ್ಬದ ಸಂಭ್ರಮ ಮತ್ತು ಜನರ ಪ್ರತಿಕ್ರಿಯೆಯನ್ನು ಪತ್ರಕರ್ತೆ ವರದಿ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಘಟನೆ ನಡೆದಿದೆ.

ಪತ್ರಕರ್ತೆ ವರದಿ ಮಾಡುತ್ತಿದ್ದ ಸಮಯದಲ್ಲಿ ಸುತ್ತಮುತ್ತಲು ಮಕ್ಕಳು, ಮಹಿಳೆಯರು ಇದ್ದರು. ಆದರೆ, ಬಾಲಕನೊಬ್ಬ ಅಡ್ಡಿಯುಂಟು ಮಾಡಿದ್ದಾನೆ. ಅಷ್ಟೇ ಅಲ್ಲ, ಅಸಭ್ಯ ಪದ ಬಳಕೆಯನ್ನೂ ಮಾಡಿದ್ದಾನೆ. ಹೀಗಾಗಿ ಸಹಜವಾಗಿಯೇ ಕೋಪಗೊಂಡ ಪತ್ರಕರ್ತೆ ಬಾಲಕನ ಕೆನ್ನೆಗೆ ಬಾರಿಸಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:ಹಿಜಾಬ್ ಗಲಾಟೆ ವರದಿ ಮಾಡಲು ತೆರಳಿದ್ದ ಮಾಧ್ಯಮ ಪ್ರತಿನಿಧಿಗಳ ಮೇಲೆ ಪ್ರತಿ ದೂರು ದಾಖಲು

ABOUT THE AUTHOR

...view details