ಕರ್ನಾಟಕ

karnataka

ETV Bharat / international

ಹ್ಯಾಂಡ್ ಗ್ರೆನೇಡ್ ದಾಳಿ: ಓರ್ವ ಪಾಕಿಸ್ತಾನಿ ಪೊಲೀಸ್ ಹುತಾತ್ಮ, 4 ಮಂದಿ ಗಾಯ - ವಾಯುವ್ಯ ಪಾಕಿಸ್ತಾನದಲ್ಲಿ ರಸ್ತೆಬದಿಯ ಪೊಲೀಸ್ ಸಿಬ್ಬಂದಿ ಮೇಲೆ ದಾಳಿಕೋರರು ಹ್ಯಾಂಡ್ ಗ್ರೆನೇಡ್ ಎಸೆದಿದ್ದಾರೆ

ಅಫ್ಘಾನಿಸ್ತಾನದ ಗಡಿಯಲ್ಲಿರುವ ಖೈಬರ್ ಪಖ್ತುಂಕ್ವಾ ಪ್ರಾಂತ್ಯದ ಮರ್ದಾನ್‌ನಲ್ಲಿ ಈ ಘಟನೆ ಜರುಗಿದೆ. ಈ ದಾಳಿಯ ಹೊಣೆಯನ್ನು ಈವರೆಗೂ ಯಾರೂ ವಹಿಸಿಕೊಂಡಿಲ್ಲ.

Pakistani policeman killed, 4 wounded in hand grenade attack
Pakistani policeman killed, 4 wounded in hand grenade attack

By

Published : Jul 7, 2022, 6:13 PM IST

ಪೇಶಾವರ (ಪಾಕಿಸ್ತಾನ): ವಾಯುವ್ಯ ಪಾಕಿಸ್ತಾನದಲ್ಲಿ ರಸ್ತೆಬದಿಯ ಪೊಲೀಸ್ ಸಿಬ್ಬಂದಿ ಮೇಲೆ ದಾಳಿಕೋರರು ಹ್ಯಾಂಡ್ ಗ್ರೆನೇಡ್ ಎಸೆದಿದ್ದು, ಇದರಲ್ಲಿ ಓರ್ವ ಅಧಿಕಾರಿ ಸಾವಿಗೀಡಾಗಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಈ ದಾಳಿಯ ಹೊಣೆಯನ್ನು ಈವರೆಗೂ ಯಾರೂ ವಹಿಸಿಕೊಂಡಿಲ್ಲ.

ಅಧಿಕಾರಿಗಳು ಮೃತರನ್ನು ಮತ್ತು ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಿದ್ದಾರೆ ಎಂದು ಪೊಲೀಸ್ ವಕ್ತಾರ ಅದ್ನಾನ್ ಖಾನ್ ಮಾಹಿತಿ ನೀಡಿದ್ದಾರೆ. ಈ ಭಾಗದಲ್ಲಿ ಹಿಂದಿನ ಬುಡಕಟ್ಟು ಪ್ರದೇಶಗಳು ಅಫ್ಘಾನಿಸ್ತಾನದೊಂದಿಗೆ ಸುದೀರ್ಘವಾದ ಗಡಿಯನ್ನು ಹಂಚಿಕೊಂಡಿದ್ದವು. ಹಾಗೆ ಈ ಪ್ರದೇಶ ವರ್ಷಗಳ ಕಾಲ ಉಗ್ರಗಾಮಿಗಳಿಗೆ ಸುರಕ್ಷಿತ ತಾಣವಾಗಿತ್ತು. ಪರಿಣಾಮ ಈ ಪ್ರದೇಶವನ್ನು ತೆರವುಗೊಳಿಸಲು ಸೇನೆಯು ಭಾರಿ ಕಾರ್ಯಾಚರಣೆಗಳನ್ನು ನಡೆಸಿತ್ತು.

ಇದನ್ನೂ ಓದಿ:ಗುರೂಜಿ ಹತ್ಯೆಯಾದ ಪ್ರೆಸಿಡೆಂಟ್​ ಹೋಟೆಲ್​ಗೆ ಎಡಿಜಿಪಿ ಅಲೋಕ್ ಕುಮಾರ್ ಭೇಟಿ, ಪರಿಶೀಲನೆ

ABOUT THE AUTHOR

...view details