ಕರ್ನಾಟಕ

karnataka

ETV Bharat / international

Pakistan politics: ISI ಮಾಜಿ ಮುಖ್ಯಸ್ಥ ಫೈಜ್ ಹಮೀದ್ ಬಂಧನವಾಗಿಲ್ಲ: ಪಾಕ್ ಮಾಧ್ಯಮ ವರದಿ - ಈಟಿವಿ ಭಾರತ ಕನ್ನಡ

ಪಾಕಿಸ್ತಾನದ ಗೂಢಚಾರ ಸಂಸ್ಥೆ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ ನ ಮಾಜಿ ಮುಖ್ಯಸ್ಥ ಫೈಜ್ ಹಮೀದ್ ಅವರನ್ನು ಬಂಧಿಸಲಾಗಿಲ್ಲ ಎಂದು ವರದಿಗಳು ತಿಳಿಸಿವೆ.

Ex-ISI chief not under arrest: Report
Ex-ISI chief not under arrest: Report

By

Published : Jun 15, 2023, 1:53 PM IST

ಇಸ್ಲಾಮಾಬಾದ್ (ಪಾಕಿಸ್ತಾನ) : ಪಾಕಿಸ್ತಾನದ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಮಾಜಿ ಡೈರೆಕ್ಟರ್ ಜನರಲ್ (ಐಎಸ್‌ಐ), ಲೆಫ್ಟಿನೆಂಟ್ ಜನರಲ್ (ನಿವೃತ್ತ) ಫೈಜ್ ಹಮೀದ್ ಅವರನ್ನು ಬಂಧಿಸಲಾಗಿಲ್ಲ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಮಾಜಿ ಬೇಹುಗಾರಿಕಾ ಮುಖ್ಯಸ್ಥರನ್ನು ಅವರ ತವರು ಚಕ್ವಾಲ್‌ನಲ್ಲಿ ಗೃಹಬಂಧನದಲ್ಲಿ ಇರಿಸಲಾಗಿದೆ ಮತ್ತು ಮೇ 9 ರ ದಾಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುತ್ತಿದೆ ಎಂದು ಕೆಲವು ಸಾಮಾಜಿಕ ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಸಾಮಾಜಿಕ ಮಾಧ್ಯಮ ವರದಿಗಳ ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಳ್ಳಲು ಮಾಧ್ಯಮ ಸಂಸ್ಥೆಗಳು ಮೂರು ವಿಭಿನ್ನ ಮೂಲಗಳನ್ನು ಸಂಪರ್ಕಿಸಿವೆ. ಎಲ್ಲಾ ಮೂರು ಮೂಲಗಳು ಈ ವರದಿಗಳನ್ನು ತಿರಸ್ಕರಿಸಿವೆ ಮತ್ತು ಜನರಲ್ ಫೈಜ್ ಅವರನ್ನು ಬಂಧಿಸಲಾಗಿಲ್ಲ ಎಂದು ಸ್ಪಷ್ಟಪಡಿಸಿವೆ. ಮಾಹಿತಿ ನೀಡಿದ ಮೂವರಲ್ಲಿ ಒಬ್ಬರು ಕಳೆದ ಕೆಲವು ದಿನಗಳ ಹಿಂದೆ ಫೈಜ್ ಅವರನ್ನು ಭೇಟಿಯಾಗಿದ್ದರು.

ಜನರಲ್ ಫೈಜ್ ಅವರು ಐಎಸ್​ಐನಲ್ಲಿದ್ದಾಗ ಆರಂಭದಲ್ಲಿ DGC ಮತ್ತು ನಂತರ DG ISI ಆಗಿದ್ದ ಸಮಯದಲ್ಲಿ ಹಲವಾರು ವಿವಾದಗಳ ಕಾರಣದಿಂದ ಮಾಧ್ಯಮ ಮತ್ತು ರಾಜಕೀಯದಲ್ಲಿ ಚರ್ಚೆಯ ಕೇಂದ್ರಬಿಂದುವಾಗಿದ್ದಾರೆ. ನಿವೃತ್ತಿಯ ನಂತರವೂ ಈ ವಿವಾದಗಳು ಅವರನ್ನು ಹಿಂಬಾಲಿಸಿವೆ. ಇಮ್ರಾನ್ ಖಾನ್ ಅವರನ್ನು ಪ್ರಧಾನಿ ಹುದ್ದೆಯಿಂದ ವಜಾಗೊಳಿಸಿದ ನಂತರ ಫೈಜ್ ಅವರ ಆಪ್ತ ಸಲಹೆಗಾರರಲ್ಲಿ ಒಬ್ಬರಾಗಿದ್ದಾರೆ ಎಂದು ರಾಜಕೀಯ ಮತ್ತು ಮಾಧ್ಯಮದ ಅನೇಕರು ಆರೋಪಿಸಿದ್ದಾರೆ.

ಇತ್ತೀಚಿನ ತಿಂಗಳುಗಳಲ್ಲಿ ಜನರಲ್ ಫೈಜ್ ಇಮ್ರಾನ್‌ಗೆ ಸಲಹೆ ನೀಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಮೇ 9ರ ದಾಳಿಯ ಹಿಂದೆ ಫೈಜ್-ಇಮ್ರಾನ್ ಸಂಪರ್ಕದ ಬಗ್ಗೆಯೂ ಊಹಾಪೋಹಗಳಿವೆ. ಆದಾಗ್ಯೂ, ಈ ವರದಿಗಳನ್ನು ಖಚಿತಪಡಿಸಲಾಗಿಲ್ಲ ಎಂದು ಪಾಕಿಸ್ತಾನದ ಸ್ಥಳೀಯ ಮಾಧ್ಯಮ ಹೇಳಿದೆ. ಮಾಜಿ ಜನರಲ್ ಫೈಜ್ ವಿರುದ್ಧ ಆಸ್ತಿ ಮೀರಿದ ಆದಾಯ ಗಳಿಕೆ ಆರೋಪದ ಪ್ರಕರಣದ ವಿಚಾರಣೆಯನ್ನು ರಾಷ್ಟ್ರೀಯ ಹೊಣೆಗಾರಿಕೆ ಬ್ಯೂರೋ (NAB) ಗೆ ನೀಡಲಾಗಿತ್ತು. ಆದರೆ ಈ ಉಲ್ಲೇಖವನ್ನು ಬ್ಯೂರೋ ಹಿಂತಿರುಗಿಸಿದೆ.

ಈ ವರ್ಷದ ಮಾರ್ಚ್‌ನಲ್ಲಿ ಎನ್‌ಎಬಿ ರಾವಲ್ಪಿಂಡಿ ಕಚೇರಿಯಲ್ಲಿ ಜನರಲ್ ಫೈಜ್ ಅವರ ಆದಾಯ ತೆರಿಗೆ ದಾಖಲೆಯ ಸಂಪೂರ್ಣ ವಿವರಗಳು ಮತ್ತು ಚಕ್ವಾಲ್‌ನ ಕೆಲವು ಅಪರಿಚಿತ ಸ್ಥಳೀಯರು ಸಹಿ ಹಾಕಿದ ಎರಡು ಪುಟಗಳ ದೂರನ್ನು ಒಳಗೊಂಡ ಫೈಲ್ ಅನ್ನು ಸ್ವೀಕರಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಎನ್‌ಎಬಿ ರಾವಲ್ಪಿಂಡಿಯ ಡಿಜಿ ಅವರು ಕಡತವನ್ನು ಪರಿಗಣಿಸಿದ್ದಾರೆ ಮತ್ತು ಆಗಿನ ಅಧ್ಯಕ್ಷರೊಂದಿಗೆ ಸಮಾಲೋಚಿಸಿದ ನಂತರ ಸಂಬಂಧಪಟ್ಟ ಅಧಿಕಾರಿಗಳು ಬ್ಯೂರೋಗೆ ಔಪಚಾರಿಕ ವಿನಂತಿ ಮಾಡಬೇಕೆಂಬ ನಿರ್ದೇಶನದೊಂದಿಗೆ ಪ್ರಕರಣವನ್ನು ಹಿಂತಿರುಗಿಸಲಾಗಿದೆ ಎಂದು ಈ ಮೂಲಗಳು ತಿಳಿಸಿವೆ.

ತನಿಖಾ ಸಂಸ್ಥೆಗಳು ಜನರಲ್ ಫೈಜ್ ವಿರುದ್ಧ ತನಿಖೆ ನಡೆಸುತ್ತಿದ್ದು, ಅದರ ಬಗೆಗಿನ ಯಾವುದೇ ಬೆಳವಣಿಗೆಯನ್ನು ಮಾಧ್ಯಮಗಳೊಂದಿಗೆ ಹಂಚಿಕೊಳ್ಳಲಾಗುವುದು ಎಂದು ಆಂತರಿಕ ಸಚಿವ ರಾಣಾ ಸನಾವುಲ್ಲಾ ಕೆಲ ತಿಂಗಳ ಹಿಂದೆ ಹೇಳಿದ್ದರು.

ಇದನ್ನೂ ಓದಿ : Pakistan financial crisis: ಪಾಕಿಸ್ತಾನಕ್ಕೆ ಐಎಂಎಫ್ ನೆರವಿನ ಸಾಧ್ಯತೆ ಕ್ಷೀಣ- ಮೂಡೀಸ್ ಅಂದಾಜು

ABOUT THE AUTHOR

...view details