ಕರ್ನಾಟಕ

karnataka

ಬಹುಮತ ಕಳೆದುಕೊಂಡ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಬಿಎಪಿ ಪಕ್ಷದಿಂದಲೂ ಬೆಂಬಲ ವಾಪಸ್​

By

Published : Mar 30, 2022, 7:35 PM IST

ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾ ಮತ್ತು ಐಎಸ್‌ಐನ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ನದೀಮ್ ಅಂಜುಮ್ ಅವರು ಇಸ್ಲಾಮಾಬಾದ್‌ನಲ್ಲಿರುವ ಪ್ರಧಾನಿ ಇಮ್ರಾನ್ ಖಾನ್ ಅವರ ನಿವಾಸಕ್ಕೆ ಆಗಮಿಸಿ, ಕೆಲ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ..

Pakistan Pm  Imran Khan loses majority after key ally sides with Opposition ahead of the no-trust vote
ಬಹುಮತ ಕಳೆದುಕೊಂಡ ಪಾಕ್ ಪ್ರಧಾನಿ ಇಮ್ರಾನ್ ಖಾನ್: ರಾಷ್ಟ್ರೀಯ ಭದ್ರತಾ ಮಂಡಳಿಗೆ ಸಭೆ

ಇಸ್ಲಾಮಾಬಾದ್, ಪಾಕಿಸ್ತಾನ :ಅವಿಶ್ವಾಸ ನಿರ್ಣಯಕ್ಕೂ ಮುನ್ನ ಸರ್ಕಾರದ ಮೈತ್ರಿ ಪಕ್ಷಗಳು ಬೆಂಬಲವನ್ನು ವಾಪಸ್​ ಪಡೆದ ಕಾರಣದಿಂದ ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್ ಸರ್ಕಾರ ಬಹುಮತ ಕಳೆದುಕೊಂಡಿದೆ ಎಂದು ಪಿಟಿಐ ಟ್ವೀಟ್ ಮಾಡಿದೆ. ಸರ್ಕಾರದ ಮಿತ್ರಪಕ್ಷ ಮುತ್ತಾಹಿದ ಖ್ವಾಮಿ ಮೂಮೆಂಟ್​​ನ ವಿರೋಧ ಪಕ್ಷದೊಂದಿಗೆ ಕೈಜೋಡಿಸಿದ್ದು, ಈಗ ಇಮ್ರಾನ್ ಖಾನ್ ಸರ್ಕಾರ 164 ಸ್ಥಾನಗಳನ್ನು ಹೊಂದಿದೆ.

ತಮ್ಮ ಸರ್ಕಾರವನ್ನು ಉಳಿಸಿಕೊಳ್ಳಲು ಇಮ್ರಾನ್​ ಖಾನ್​ಗೆ ಕನಿಷ್ಠ 172 ಸಂಸದರ ಬೆಂಬಲ ಬೇಕು. ಈ ಸರ್ಕಾರ ರಚಿಸಿರುವ ಪಕ್ಷಗಳೆಂದರೆ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಇ ಇನ್ಸಾಫ್ (ಪಿಟಿಐ) 155, ಎಂಎನ್​ಎ ಮತ್ತು ಪಿಎಂಎಲ್​(ಕ್ಯೂ) 4, ಜಿಡಿಎ 3, ಬಿಎಪಿ 1 ಮತ್ತು ಎಎಂಲ್​​ 1 ಸಂಸದರನ್ನು ಹೊಂದಿವೆ. ಆದರೆ ವಿರೋಧ ಪಕ್ಷಕ್ಕೆ 175 ಶಾಸಕರ ಬೆಂಬಲವಿದೆ.

ಮುತ್ತಾಹಿದ ಖ್ವಾಮಿ ಮೂಮೆಂಟ್​​ನ ಸೈಯದ್ ಅಮಿನುಲ್ ಹಕ್ ಮತ್ತು ಫರೋಗ್ ನಸೀಮ್ ರಾಜೀನಾಮೆ ನೀಡಿದ ಬಳಿಕ ಬಲೂಚಿಸ್ತಾನ್ ಅವಾಮಿ ಪಕ್ಷದ (ಬಿಎಪಿ) ನಾಯಕ ಖಾಲಿದ್ ಮಾಗ್ಸಿ ಅವರು ತಮ್ಮ ಪಕ್ಷವು ಪ್ರಧಾನಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಇ ಇನ್ಸಾಫ್ (ಪಿಟಿಐ) ಸರ್ಕಾರಕ್ಕೆ ನೀಡಿದ ಬೆಂಬಲವನ್ನು ಹಿಂಪಡೆಯಲು ನಿರ್ಧರಿಸಿದೆ ಎಂದು ಈಗ ರಾಷ್ಟ್ರೀಯ ಅಸೆಂಬ್ಲಿಯ ಸ್ಪೀಕರ್‌ಗೆ ಪತ್ರ ಬರೆದಿದ್ದಾರೆ. ಈ ಮೂಲಕ ಸರ್ಕಾದ ಮೈತ್ರಿಕೂಟದಿಂದ ಮತ್ತೊಂದು ಪಕ್ಷ ಹೊರ ಬಂದಿದೆ.

ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾ ಮತ್ತು ಐಎಸ್‌ಐನ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ನದೀಮ್ ಅಂಜುಮ್ ಅವರು ಇಸ್ಲಾಮಾಬಾದ್‌ನಲ್ಲಿರುವ ಪ್ರಧಾನಿ ಇಮ್ರಾನ್ ಖಾನ್ ಅವರ ನಿವಾಸಕ್ಕೆ ಆಗಮಿಸಿ, ಕೆಲ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಪಾಕಿಸ್ತಾನದ ಸೇನಾ ಮುಖ್ಯಸ್ಥ ಮತ್ತು ಐಎಸ್‌ಐ ಮುಖ್ಯಸ್ಥರೊಂದಿಗಿನ ಸಭೆಯ ನಂತರ ಪ್ರಧಾನಿ ಇಮ್ರಾನ್ ಖಾನ್ ದೇಶದ ರಾಷ್ಟ್ರೀಯ ಭದ್ರತಾ ಮಂಡಳಿಯ ಸಭೆಯನ್ನು ಕರೆದಿದ್ದಾರೆ.

ಇದನ್ನೂ ಓದಿ:ಸೇನಾ ಹೆಲಿಕಾಪ್ಟರ್​ ಪತನ: 8 ಯುಎನ್ ಶಾಂತಿಪಾಲಕರಲ್ಲಿ 6 ಪಾಕಿಸ್ತಾನಿ ಸೇನಾ ಸೈನಿಕರು ಸಾವು!

ABOUT THE AUTHOR

...view details