ಕರ್ನಾಟಕ

karnataka

ETV Bharat / international

ಕಾಶ್ಮೀರ ಇತ್ಯರ್ಥಕ್ಕೂ ಮುನ್ನ ಭಾರತದೊಂದಿಗೆ ಶಾಂತಿ ಸಾಧ್ಯವಿಲ್ಲ: ಪಾಕ್‌ ಪ್ರಧಾನಿ ಅಭ್ಯರ್ಥಿ

ಅವಿಶ್ವಾಸ ಗೊತ್ತುವಳಿ ಮೂಲಕ ಇಮ್ರಾನ್ ಖಾನ್ ಅವರನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಿದ ನಂತರ ರಾಷ್ಟ್ರೀಯ ಅಸೆಂಬ್ಲಿ ಮತ್ತೆ ಸಭೆ ಸೇರಲಿದ್ದು, ಸೋಮವಾರ ಪಾಕಿಸ್ತಾನದ ನೂತನ ಪ್ರಧಾನಿ ಆಯ್ಕೆಯಾಗಲಿದ್ದಾರೆ. ಸಂಯುಕ್ತ ವಿರೋಧ ಪಕ್ಷದಿಂದ ಶಹಬಾಜ್ ಷರೀಫ್ ಪ್ರಧಾನಿ ಅಭ್ಯರ್ಥಿಯಾಗಿದ್ದಾರೆ.

ಪಾಕಿಸ್ಥಾನದಲ್ಲಿ ಅಧಿಕಾರದಿಂದ ಕೆಳಗಿಳಿದ ಇಮ್ರಾನ್ ಖಾನ್ ಸರ್ಕಾರ
ಪಾಕಿಸ್ಥಾನದಲ್ಲಿ ಅಧಿಕಾರದಿಂದ ಕೆಳಗಿಳಿದ ಇಮ್ರಾನ್ ಖಾನ್ ಸರ್ಕಾರ

By

Published : Apr 10, 2022, 6:14 PM IST

Updated : Apr 10, 2022, 7:04 PM IST

ಇಸ್ಲಾಮಾಬಾದ್: ಇಮ್ರಾನ್ ಖಾನ್ ಸರ್ಕಾರ ಅಧಿಕಾರದಿಂದ ಕೆಳಗಿಳಿದಿದ್ದು, ಪಾಕಿಸ್ತಾನದಲ್ಲಿ ಹೊಸ ಸರ್ಕಾರ ರಚನೆ ಪ್ರಕ್ರಿಯೆ ಆರಂಭವಾಗಿದೆ. ಇದರ ನಡುವೆ ಹೊಸ ಸರ್ಕಾರವು ಭಾರತದೊಂದಿಗೆ ಹೇಗೆ ದ್ವಿಪಕ್ಷೀಯ ಸಂಬಂಧ ಇರಿಸಿಕೊಳ್ಳಲಿದೆ ಎಂಬ ಬಗ್ಗೆ ಪ್ರಶ್ನೆ ಮನೆ ಮಾಡಿದೆ. ಇದೀಗ ವಿರೋಧ ಪಕ್ಷದ ಪ್ರಧಾನಿ ಅಭ್ಯರ್ಥಿ ಶೆಹಬಾಜ್ ಷರೀಫ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಪಾಕಿಸ್ತಾನದ ಪ್ರಧಾನಿಯಾಗುವ ಮುನ್ನವೇ ಪಾಕಿಸ್ತಾನ ಮುಸ್ಲಿಂ ಲೀಗ್ (ಎನ್) ನಾಯಕ ಶಹಬಾಜ್ ಷರೀಫ್ ಕಾಶ್ಮೀರದ ವಿಷಯ ಪ್ರಸ್ತಾಪಿಸಿದರು. ಈ ಹಿಂದಿನವರಂತೆಯೇ ಕಾಶ್ಮೀರಕ್ಕೆ ಸಂಬಂಧಿಸಿದಂತೆ ಭಾರತದೊಂದಿಗಿನ ಸಂಬಂಧದ ಬಗ್ಗೆ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಭಾರತದೊಂದಿಗೆ ಶಾಂತಿ ಬಯಸುತ್ತೇವೆ, ಆದರೆ, ಕಾಶ್ಮೀರ ವಿವಾದ ಇತ್ಯರ್ಥವಾಗುವವರೆಗೆ ಅದು ಸಾಧ್ಯವಿಲ್ಲ' ಎಂದು ಅವರು ಹಳೆಯ ರಾಗವನ್ನೇ ಎಳೆದಿದ್ದಾರೆ.

ಇದನ್ನೂ ಓದಿ:ಗುಜರಾತ್‌ನ ಬಿಜೆಪಿ ಸರ್ಕಾರದ ವಿರುದ್ಧ ಕೇಜ್ರಿವಾಲ್ ಕಿಡಿ : ಕೇಸರಿ ಕೋಟೆಗೆ ಲಗ್ಗೆ ಇಡುತ್ತಾ ಆಪ್​ !?

Last Updated : Apr 10, 2022, 7:04 PM IST

For All Latest Updates

ABOUT THE AUTHOR

...view details