ಕರ್ನಾಟಕ

karnataka

ETV Bharat / international

ಭಾರತಕ್ಕೆ ಪರಮಾಣು ಬಾಂಬ್‌ ದಾಳಿ ಬೆದರಿಕೆ ಹಾಕಿದ ಪಾಕಿಸ್ತಾನ ಸಚಿವೆ - ಬಿಲಾವಲ್ ಭುಟ್ಟೋ ಜರ್ದಾರಿ

ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್‌ ಭುಟ್ಟೋ ನೀಡಿದ ವಿವಾದಿತ ಹೇಳಿಕೆಗೆ ಭಾರತದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಅದೇ ದೇಶದ ಮತ್ತೊಬ್ಬ ಸಚಿವೆ ಭಾರತಕ್ಕೆ ಪರಮಾಣು ಬಾಂಬ್‌ ದಾಳಿ ಬೆದರಿಕೆ ಹಾಕಿದ್ದಾರೆ.

Shazia Marri
ಶಾಜಿಯಾ ಮಾರಿ

By

Published : Dec 18, 2022, 9:46 AM IST

ಇಸ್ಲಾಮಾಬಾದ್: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ವಾಗ್ದಾಳಿ ನಡೆಸಿದ ಬೆನ್ನಲ್ಲೇ ಇದೀಗ ಪಾಕಿಸ್ತಾನ ಪೀಪಲ್ಸ್ ಪಕ್ಷದ ನಾಯಕಿ ಶಾಜಿಯಾ ಮಾರಿ ಭಾರತಕ್ಕೆ ಪರಮಾಣು ಯುದ್ಧದ ಬೆದರಿಕೆಯೊಡ್ಡಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಜಿಯಾ, 'ಪಾಕಿಸ್ತಾನದ ಬಳಿ ಅಣುಬಾಂಬ್ ಇದೆ ಎಂಬುದನ್ನು ಭಾರತ ಮರೆಯಬಾರದು. ಅಗತ್ಯ ಬಿದ್ದರೆ ನಾವು ಹಿಂದೆ ಸರಿಯುವುದಿಲ್ಲ' ಎಂದರು. ಇದೇ ವೇಳೆ, ಬಿಲಾವಲ್ ಭುಟ್ಟೊ ಹೇಳಿಕೆಯನ್ನೂ ಸಮರ್ಥಿಸಿಕೊಂಡರು.

'ಪಾಕಿಸ್ತಾನಕ್ಕೆ ಪರಮಾಣು ರಾಷ್ಟ್ರದ ಸ್ಥಾನಮಾನ ನೀಡಿದ್ದು ಸುಮ್ಮನಿರಲು ಅಲ್ಲ. ಪಾಕಿಸ್ತಾನಕ್ಕೂ ಹೇಗೆ ಉತ್ತರಿಸಬೇಕು ಎಂಬುದು ಗೊತ್ತಿದೆ. ನೀವು ನಮ್ಮ ವಿರುದ್ಧ ಪದೇ ಪದೇ ಆರೋಪಗಳನ್ನು ಮಾಡುತ್ತಿದ್ದರೆ, ನಾವು ಮೌನವಾಗಿ ಕೇಳಲು ಸಾಧ್ಯವಿಲ್ಲ' ಎಂದು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ:ಮೋದಿ ಬಗ್ಗೆ ವಿವಾದಿತ ಹೇಳಿಕೆ ಕೊಟ್ಟ ಬಿಲಾವಲ್ ಭುಟ್ಟೋ ಜನ್ಮ ಜಾಲಾಡಿದ ಭಾರತ

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧಿವೇಶನ ಸಂದರ್ಭ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಬಿಲಾವಲ್ ಭುಟ್ಟೊ, ಪ್ರಧಾನಿ ಮೋದಿ ವಿರುದ್ಧ ವೈಯಕ್ತಿಕ ದಾಳಿ ನಡೆಸಿದ್ದರು. 'ಬಿನ್​ ಲಾಡೆನ್​ ಸತ್ತಿದ್ದಾನೆ, ಗುಜರಾತ್​ ಕಟುಕ ಬದುಕಿದ್ದಾನೆ' ಎಂದಿದ್ದರು. ಅಷ್ಟೇ ಅಲ್ಲ, ಭಾರತ ಸರ್ಕಾರವು ಮಹಾತ್ಮ ಗಾಂಧಿ ಬದಲಿಗೆ ಹಿಟ್ಲರ್‌ನಿಂದ ಪ್ರಭಾವಿತವಾಗಿದೆ ಎಂದು ಆರೋಪಿಸಿದ್ದರು. ಈ ಹೇಳಿಕೆಗೆ ಭಾರತದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಶನಿವಾರ ಭಾರತೀಯ ಜನತಾ ಪಕ್ಷ ರಾಷ್ಟ್ರವ್ಯಾಪಿ ಪ್ರತಿಭಟನೆಗಳನ್ನು ನಡೆಸಿ, ಭುಟ್ಟೋ ಪ್ರತಿಕೃತಿಗಳನ್ನು ಸುಟ್ಟುಹಾಕಿದೆ.

ಇದನ್ನೂ ಓದಿ:ಪಾಕ್ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ವಿರುದ್ಧ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ

ABOUT THE AUTHOR

...view details