ಕರ್ನಾಟಕ

karnataka

ETV Bharat / international

ಭಾರತದ ಟಿವಿ ಚಾನೆಲ್​ಗಳಿಗೆ ಪಾಕಿಸ್ತಾನದಲ್ಲಿ ನಿರ್ಬಂಧ: ಕಠಿಣ ಕ್ರಮಕ್ಕೆ ಮುಂದಾದ ಪೆಮ್ರಾ - ಪ್ರಸಾರ ಮಾಡದಂತೆ ಪೆಮ್ರಾ

ಭಾರತದ ಟಿವಿ ಚಾನೆಲ್​ಗಳು ಮತ್ತು ನಿರ್ಬಂಧಿತವಾದ ಭಾರತದ ಕಾರ್ಯಕ್ರಮಗಳನ್ನು ಪ್ರಸಾರ ಮಾಡದಂತೆ ಪಾಕಿಸ್ತಾನದ ಕೇಬಲ್​ ಆಪರೇಟರ್​ಗಳಿಗೆ ಸರ್ಕಾರಿ ಸಂಸ್ಥೆ ಪೆಮ್ರಾ ಆದೇಶ ನೀಡಿದೆ.

ಭಾರತದ ಟಿವಿ ಚಾನೆಲ್​ಗಳಿಗೆ ಪಾಕಿಸ್ತಾನದಲ್ಲಿ ನಿರ್ಬಂಧ: ಕಠಿಣ ಕ್ರಮಕ್ಕೆ ಮುಂದಾದ ಪೆಮ್ರಾ
Pak starts crackdown against airing of Indian content on TV

By

Published : Apr 21, 2023, 3:47 PM IST

ಇಸ್ಲಾಮಾಬಾದ್: ಭಾರತೀಯ ಟೆಲಿವಿಜನ್ ಚಾನೆಲ್‌ಗಳನ್ನು ಪ್ರಸಾರ ಮಾಡುವ ಕೇಬಲ್ ಟಿವಿ ಆಪರೇಟರ್‌ಗಳ ವಿರುದ್ಧ ಪಾಕಿಸ್ತಾನದ ಎಲೆಕ್ಟ್ರಾನಿಕ್ ಮೀಡಿಯಾ ನಿಯಂತ್ರಕ (Pakistan Electronic Media Regulatory Autho­rity - Pemra) ದೇಶಾದ್ಯಂತ ಕಾರ್ಯಾಚರಣೆ ಪ್ರಾರಂಭಿಸಿದೆ. ಕಾನೂನು ಬಾಹಿರ ಎಂದು ಘೋಷಿಸಲಾದ ಭಾರತೀಯ ಕಂಟೆಂಟ್​ ಅನ್ನು ಕೂಡ ಪ್ರಸಾರ ಮಾಡದಂತೆ ಪೆಮ್ರಾ ಆದೇಶಿಸಿದೆ. ಪೆಮ್ರಾದಿಂದ ಪರವಾನಗಿ ಪಡೆದ ಚಾನೆಲ್​ಗಳನ್ನು ಹೊರತುಪಡಿಸಿ ಬೇರೆ ಯಾವುದೇ ಚಾನೆಲ್ ಅನ್ನು ಕೇಬಲ್ ಟಿವಿ ನೆಟ್ವರ್ಕ್​ಗಳಲ್ಲಿ ಬಿತ್ತರಿಸಲು ಅನುಮತಿ ಇಲ್ಲ. ಯಾರಾದರೂ ಈ ಕಾನೂನು ಉಲ್ಲಂಘಿಸಿದರೆ ಪ್ರಾಧಿಕಾರದ ಕಾನೂನುಗಳಿಗೆ ಅನುಗುಣವಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಧಿಕಾರ ತಿಳಿಸಿದೆ. ಅಕ್ರಮ ಭಾರತೀಯ ಚಾನೆಲ್‌ಗಳನ್ನು ಪ್ರಸಾರ ಮಾಡುತ್ತಿರುವ ಕೇಬಲ್ ಆಪರೇಟರ್‌ಗಳ ವಿರುದ್ಧ ಪೆಮ್ರಾ ಪ್ರಾದೇಶಿಕ ಕಚೇರಿಗಳು ತನಿಖಾ ದಾಳಿಗಳನ್ನು ನಡೆಸುತ್ತಿವೆ ಎಂದು ಪೆಮ್ರಾ ಹೇಳಿಕೊಂಡಿದೆ.

ಪೆಮ್ರಾದ ಈ ಕ್ರಮವು ಇದು ಸುಪ್ರೀಂ ಕೋರ್ಟ್ ಮತ್ತು ಪೆಮ್ರಾ ತಾನೇ ಹೊರಡಿಸಿದ ನಿರ್ದೇಶನಗಳನ್ನು ಉಲ್ಲಂಘಿಸಿದೆ ಎಂದು ಪಾಕಿಸ್ತಾನದ ಪ್ರಮುಖ ಮಾಧ್ಯಮ ವರದಿ ಮಾಡಿದೆ. ಪೆಮ್ರಾದ ಕರಾಚಿ ಪ್ರಾದೇಶಿಕ ಕಚೇರಿಯು ವಿವಿಧ ಪ್ರದೇಶಗಳಲ್ಲಿ ಹಠಾತ್ ತಪಾಸಣೆ ನಡೆಸಿತು ಮತ್ತು ಕೇಬಲ್ ಆಪರೇಟರ್‌ಗಳಾದ ಡಿಜಿಟಲ್ ಕೇಬಲ್ ನೆಟ್‌ವರ್ಕ್, ಹೋಮ್ ಮೀಡಿಯಾ ಕಮ್ಯುನಿಕೇಷನ್ಸ್ (ಪ್ರೈ) ಲಿಮಿಟೆಡ್, ಶಹಜೈಬ್ ಕೇಬಲ್ ನೆಟ್ವರ್ಕ್ ಮತ್ತು ಸ್ಕೈ ಕೇಬಲ್ ವಿಷನ್ ಕಚೇರಿಗಳ ಮೇಲೆ ಮೇಲೆ ದಾಳಿ ನಡೆಸಿತು.

ಪೆಮ್ರಾ ಹೈದರಾಬಾದ್ ಕಚೇರಿಯು 23 ಕೇಬಲ್ ಆಪರೇಟರ್‌ಗಳ ಮೇಲೆ ದಾಳಿ ಮಾಡಿದೆ ಮತ್ತು ಅಕ್ರಮ ಭಾರತೀಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದ್ದ ಎಂಟು ಕೇಬಲ್ ನೆಟ್‌ವರ್ಕ್‌ಗಳನ್ನು ಬಂದ್ ಮಾಡಿಸಿದೆ. ಸುಕ್ಕೂರ್​ನಲ್ಲಿ ಕೂಡ ದಿಢೀರ್ ದಾಳಿ ನಡೆಸಲಾಗಿದ್ದು, ಇದರಲ್ಲಿ ಮೀಡಿಯಾ ಪ್ಲಸ್ ಲರ್ಕಾನಾ ಮತ್ತು ಯುನಿವರ್ಸಲ್ ಸಿಟಿವಿ ನೆಟ್‌ವರ್ಕ್ ಲರ್ಕಾನಾ ಅಕ್ರಮ ಕಂಟೆಂಟ್​ ಅನ್ನು ಪ್ರಸಾರ ಮಾಡುತ್ತಿರುವುದು ಕಂಡು ಬಂದಿದೆ.

ಪೆಮ್ರಾದ ಮುಲ್ತಾನ್ ಕಚೇರಿಯು ಬಹವಾಲ್‌ನಗರ ನಗರದಲ್ಲಿ ಮತ್ತು ಸಿಟಿ ಡಿಜಿಟಲ್ ಕೇಬಲ್ ನೆಟ್‌ವರ್ಕ್, ಸ್ಟೇಟ್ ಕೇಬಲ್ ನೆಟ್‌ವರ್ಕ್, ನಸೀಬ್ ಆ್ಯಂಡ್ ಜಮೀಲ್ ಕೇಬಲ್ ನೆಟ್‌ವರ್ಕ್, ವರ್ಲ್ಡ್ ಬ್ರೈಟ್ ಕೇಬಲ್ ನೆಟ್‌ವರ್ಕ್, ಸ್ಟಾರ್ ಇನ್ಫರ್ಮೇಶನ್ ಕಂಪನಿ ಮತ್ತು ಗ್ಲೋಬಲ್ ಸಿಗ್ನಲ್ಸ್ ಕೇಬಲ್ ನೆಟ್‌ವರ್ಕ್​ಗಳ ಮೇಲೆ ಮೇಲೆ ದಾಳಿ ನಡೆಸಿತು. ದಾಳಿಯ ಸಮಯದಲ್ಲಿ ಪೆಮ್ರಾ ತಂಡಗಳು ಅಕ್ರಮ ಉಪಕರಣಗಳನ್ನು ವಶಪಡಿಸಿಕೊಂಡಿದ್ದು, ಕೇಬಲ್ ಆಪರೇಟರ್​ಗಳಿಗೆ ಶೋಕಾಸ್ ನೋಟಿಸ್ ನೀಡಲಾಯಿತು.

ಏನಿದು ಪೆಮ್ರಾ?: ಪಾಕಿಸ್ತಾನ ಎಲೆಕ್ಟ್ರಾನಿಕ್ ಮೀಡಿಯಾ ರೆಗ್ಯುಲೇಟರಿ ಅಥಾರಿಟಿ (PEMRA) ಒಂದು ಸ್ವತಂತ್ರ ಮತ್ತು ಸಾಂವಿಧಾನಿಕವಾಗಿ ಸ್ಥಾಪಿತವಾದ ಫೆಡರಲ್ ಸಂಸ್ಥೆಯಾಗಿದ್ದು, ಸಮೂಹ ಮಾಧ್ಯಮ ಸಂಸ್ಕೃತಿ, ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮದ ಸ್ಥಾಪನೆಗೆ ಚಾನೆಲ್ ಪರವಾನಗಿಗಳನ್ನು ನಿಯಂತ್ರಿಸುವ ಮತ್ತು ವಿತರಿಸುವ ಜವಾಬ್ದಾರಿಯನ್ನು ಹೊಂದಿದೆ. ಆರ್ಟಿಕಲ್ 19 ರ ಅಡಿಯಲ್ಲಿ ಇದನ್ನು ಕ್ರೋಢೀಕರಿಸಲಾಗಿದೆ. ಇದು ಪಾಕಿಸ್ತಾನದ ಧರ್ಮ, ಸಮಗ್ರತೆ, ರಾಷ್ಟ್ರೀಯ ಭದ್ರತೆಯ ಹಿತಾಸಕ್ತಿಯಲ್ಲಿ ಸಮಂಜಸವಾದ ನಿರ್ಬಂಧಗಳನ್ನು ಹೇರುವ ಅಧಿಕಾರವನ್ನು ಹೊಂದಿದೆ.

ಇದನ್ನೂ ಓದಿ : ಭಾರತದಲ್ಲಿ ನೆಟ್​ಫ್ಲಿಕ್ಸ್​ ಗ್ರಾಹಕರ ಸಂಖ್ಯೆ ಶೇ 30ರಷ್ಟು ಏರಿಕೆ

ABOUT THE AUTHOR

...view details