ಕರ್ನಾಟಕ

karnataka

ETV Bharat / international

ತನ್ನ 6 ಮಕ್ಕಳ ಮುಂದೆಯೇ ಪತ್ನಿ ಕೊಂದು ಪಾತ್ರೆಯಲ್ಲಿ ಬೇಯಿಸಿದ ದುರುಳ ಪತಿ!

ಪಾಕಿಸ್ತಾನದಲ್ಲಿ ಅತಿ ಘೋರ ಎನ್ನಿಸುವ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬ ತನ್ನ ಮಕ್ಕಳ ಮುಂದೆಯೇ ಹೆಂಡ್ತಿಯನ್ನು ಕೊಲೆಗೈದು ದೊಡ್ಡದೊಂದು ಪಾತ್ರೆಯಲ್ಲಿ ಕುದಿಸಿ ಅತ್ಯಂತ ಅಮಾನವೀಯತೆ ಮೆರೆದಿದ್ದಾನೆ.

Pakistan Man Boils Wife In Cauldron  Pakistan Man Boils Wife In Cauldron In Front Of His Children  Pakistan crime news  ಪಾಕಿಸ್ತಾನದಲ್ಲಿ ತನ್ನ ಆರು ಮಕ್ಕಳ ಮುಂದೆನೇ ಹೆಂಡ್ತಿಯನ್ನು ಪಾತ್ರೆಯಲ್ಲಿ ಕುದಿಸಿದ ಪತಿ  ಪಾಕಿಸ್ತಾನ ಅಪರಾಧ ಸುದ್ದಿ  ಪಾಕಿಸ್ತಾನದಲ್ಲಿ ಘೋರ ದುರಂತ
ತನ್ನ ಆರು ಮಕ್ಕಳ ಮುಂದೆನೇ ಹೆಂಡ್ತಿಯನ್ನು ಪಾತ್ರೆಯಲ್ಲಿ ಕುದಿಸಿದ ಪತಿ

By

Published : Jul 15, 2022, 10:51 AM IST

ಕರಾಚಿ(ಪಾಕಿಸ್ತಾನ):ವ್ಯಕ್ತಿಯೊಬ್ಬ ತನ್ನ ಆರು ಮಕ್ಕಳ ಮುಂದೆಯೇ ಪತ್ನಿಯನ್ನು ಕೊಂದು ದೊಡ್ಡದೊಂದು ಪಾತ್ರೆಯಲ್ಲಿ ಕುದಿಸಿರುವ ಘಟನೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ನಡೆದಿದೆ. ನಗರದ ಗುಲ್ಶನ್-ಎ-ಇಕ್ಬಾಲ್ ಪ್ರದೇಶದ ಖಾಸಗಿ ಶಾಲೆಯ ಅಡುಗೆಮನೆಯಲ್ಲಿ ಪ್ರಕರಣ ನಡೆದಿದೆ. ಅಲ್ಲಿನ ದೊಡ್ಡ ಪಾತ್ರೆಯಲ್ಲಿ ಮಹಿಳೆಯ ಶವವನ್ನು ಪೊಲೀಸರು ನೋಡಿ ಅರೆಕ್ಷಣ ದಂಗಾಗಿ ಹೋಗಿದ್ದರು. ಈ ಕುರಿತು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ.

ಪೊಲೀಸರ ಪ್ರಕಾರ, ದಾರುಣವಾಗಿ ಮೃತಪಟ್ಟ ಮಹಿಳೆಯ 15 ವರ್ಷದ ಮಗಳು ಪೊಲೀಸರಿಗೆ ಕರೆ ಮಾಡಿ ಮಾಹಿತಿ ಮುಟ್ಟಿಸಿದ್ದಾಳೆ. ಸುದ್ದಿ ತಿಳಿದ ಕೂಡಲೇ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದರು. ಬಳಿಕ ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಜಿನ್ನಾ ಸ್ನಾತಕೋತ್ತರ ವೈದ್ಯಕೀಯ ಕೇಂದ್ರಕ್ಕೆ ರವಾನಿಸಿದ್ದಾರೆ.

ಇದನ್ನೂ ಓದಿ:ರೌಡಿಶೀಟರ್​ ಕೊಲೆ ಹಳೇ ವೈಷಮ್ಯದಿಂದಲೇ ನಡೆದಿದೆ ಎಂದ ಶಿವಮೊಗ್ಗ ಎಸ್​​​ಪಿ.. ಭಯ ಮೂಡಿಸುತ್ತಿದೆ ಸಿಸಿಟಿವಿ ದೃಶ್ಯ!

ದುರುಳ ಪತಿ ತನ್ನ ಪತ್ನಿಯನ್ನು ಅಕ್ರಮ ಸಂಬಂಧದಲ್ಲಿ ತೊಡಗಿಸಿಕೊಳ್ಳುವಂತೆ ಬಲವಂತಪಡಿಸಿದ್ದನಂತೆ. ಅದಕ್ಕೆ ಆಕೆ ನಿರಾಕರಿಸಿದಾಗ ಕುಪಿತಗೊಂಡು ಭೀಕರವಾಗಿ ಕೊಂದಿದ್ದಾನೆ ಎಂದು ತಿಳಿದುಬಂದಿದೆ.

ABOUT THE AUTHOR

...view details