ಕರ್ನಾಟಕ

karnataka

ETV Bharat / international

'ಇಸ್ರೋ ವಿಜ್ಞಾನಿಗಳು ಮೆಚ್ಚುಗೆಗೆ ಅರ್ಹರು': ಚಂದ್ರಯಾನ-3 ಯಶಸ್ಸಿನ ಬಗ್ಗೆ ಪಾಕಿಸ್ತಾನ ವಿದೇಶಾಂಗ ಸಚಿವಾಲಯ ಬಣ್ಣನೆ.. - ಪಾಕಿಸ್ತಾನ ವಿದೇಶಾಂಗ ಸಚಿವಾಲಯ ಹೇಳಿಕೆ

Chandrayaan-3 success: ''ತಮ್ಮ ದೇಶವು ಬ್ರಿಕ್ಸ್‌ಗೆ ಸೇರಲು ಯಾವುದೇ ಔಪಚಾರಿಕ ವಿನಂತಿಗಳನ್ನು ಮಾಡಿಲ್ಲ'' ಎಂದು ಪಾಕಿಸ್ತಾನ ವಿದೇಶಾಂಗ ಸಚಿವಾಲಯದ ವಕ್ತಾರ ಬಲೂಚ್ ಮಾಧ್ಯಮಗೋಷ್ಟಿಯಲ್ಲಿ ಹೇಳಿದರು. ''ಇದು ಒಂದು ದೊಡ್ಡ ವೈಜ್ಞಾನಿಕ ಸಾಧನೆಯಾಗಿದೆ. ಇದಕ್ಕಾಗಿ ಇಸ್ರೋ ವಿಜ್ಞಾನಿಗಳು ಮೆಚ್ಚುಗೆಗೆ ಅರ್ಹರು'' ಎಂದು ಭಾರತದ ಚಂದ್ರಯಾನದ ಯಶಸ್ಸಿನ ಕುರಿತು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Chandrayaan-3 success
'ಇಸ್ರೋ ವಿಜ್ಞಾನಿಗಳು ಮೆಚ್ಚುಗೆಗೆ ಅರ್ಹರು': ಚಂದ್ರಯಾನ-3 ಯಶಸ್ಸಿನ ಬಗ್ಗೆ ಪಾಕಿಸ್ತಾನ ವಿದೇಶಾಂಗ ಸಚಿವಾಲಯ ಹೇಳಿಕೆ..

By ETV Bharat Karnataka Team

Published : Aug 26, 2023, 2:48 PM IST

ಇಸ್ಲಾಮಾಬಾದ್ (ಪಾಕಿಸ್ತಾನ):ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರ ಮುಮ್ತಾಜ್ ಜಹ್ರಾ ಬಲೂಚ್ ಅವರು, ಚಂದ್ರನ ಮೇಲೆ ಭಾರತದ ಚಂದ್ರಯಾನ-3 ಲ್ಯಾಂಡಿಂಗ್ ಮಾಡಿರುವುದು ದೊಡ್ಡ ವೈಜ್ಞಾನಿಕ ಸಾಧನೆ ಎಂದು ಶುಕ್ರವಾರ ಬಣ್ಣಿಸಿದ್ದಾರೆ.

ಮಾಧ್ಯಮಗೋಷ್ಟಿಯಲ್ಲಿ ಭಾರತದ ಚಂದ್ರಯಾನದ ಕುರಿತ ಕೇಳಿರುವ ಪ್ರಶ್ನೆಗೆ ಪಾಕಿಸ್ತಾನ ವಿದೇಶಾಂಗ ಸಚಿವಾಲಯದ ವಕ್ತಾರರು ಹೀಗೆ ಉತ್ತರಿಸಿದರು, "ಇದು ಒಂದು ದೊಡ್ಡ ವೈಜ್ಞಾನಿಕ ಸಾಧನೆ ಎಂದು ನಾನು ಹೇಳಬಲ್ಲೆ, ಇದಕ್ಕಾಗಿ ಇಸ್ರೋ ವಿಜ್ಞಾನಿಗಳು ಮೆಚ್ಚುಗೆಗೆ ಅರ್ಹರು." ಎಂದಿದ್ದಾರೆ.

''ಬ್ರಿಕ್ಸ್‌ಗೆ ಸೇರಲು ತಮ್ಮ ದೇಶವು ಯಾವುದೇ ಔಪಚಾರಿಕ ವಿನಂತಿಗಳನ್ನು ಮಾಡಿಲ್ಲ ಎಂದ ವಿದೇಶಾಂಗ ಸಚಿವಾಲಯದ ವಕ್ತಾರರು, ದೇಶವು ಇತ್ತೀಚಿನ ಬೆಳವಣಿಗೆಗಳನ್ನು ಪರಿಶೀಲಿಸುತ್ತದೆ. ಬ್ರಿಕ್ಸ್‌ನೊಂದಿಗಿನ ಭವಿಷ್ಯದ ಯೋಜನೆ ಬಗ್ಗೆ ನಿರ್ಧರಿಸಬೇಕು ಎಂದು ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ನಾವು ಜೋಹಾನ್ಸ್‌ಬರ್ಗ್‌ನಲ್ಲಿ BRICS ಸಂಬಂಧಿತ ಬೆಳವಣಿಗೆಗಳನ್ನು ಗಮನಿಸಿದ್ದೇವೆ. ಅಂತರ್ಗತ ಬಹುಪಕ್ಷೀಯತೆಗೆ ಅದರ ಮುಕ್ತತೆಯನ್ನೂ ನಾವು ಗಮನಿಸಿದ್ದೇವೆ. ಪಾಕಿಸ್ತಾನವು ಈ ಹಿಂದೆಯೂ ಹಲವಾರು ಬಾರಿ ಈ ಕುರಿತು ಹೇಳಿದೆ ಎಂದರು.

ಬ್ರಿಕ್ಸ್‌ಗೆ ಸೇರಲು ಪಾಕಿಸ್ತಾನವು ಯಾವುದೇ ಔಪಚಾರಿಕ ವಿನಂತಿಯನ್ನು ಮಾಡಿಲ್ಲ. ನಾವು ಇತ್ತೀಚಿನ ಬೆಳವಣಿಗೆಗಳನ್ನು ಪರಿಶೀಲಿಸುತ್ತೇವೆ. BRICS ನೊಂದಿಗೆ ನಮ್ಮ ಭವಿಷ್ಯದ ಕುರಿತು ನಿರ್ಣಯವನ್ನು ಮಾಡುತ್ತೇವೆ. ಪಾಕಿಸ್ತಾನವು ಬಹುಪಕ್ಷೀಯತೆಯ ಉತ್ಕಟ ಬೆಂಬಲಿಗವಾಗಿದೆ. ಹಲವಾರು ಬಹುಪಕ್ಷೀಯ ಸಂಸ್ಥೆಗಳ ಸದಸ್ಯರಾಗಿ ಯಾವಾಗಲೂ ಜಾಗತಿಕ ಶಾಂತಿ ಮತ್ತು ಅಭಿವೃದ್ಧಿಗೆ ಪ್ರಮುಖ ಪಾತ್ರವನ್ನು ವಹಿಸಿದೆ.

ದಕ್ಷಿಣದ ದೇಶಗಳ ನಡುವೆ ಶಾಂತಿ, ಸಹಕಾರವನ್ನು ಉತ್ತೇಜಿಸಲು ಹಲವು ಪ್ರಮುಖ ಕೊಡುಗೆಗಳನ್ನು ನೀಡಿರುವ ಪಾಕಿಸ್ತಾನವು ಅಭಿವೃದ್ಧಿ ಹೊಂದುತ್ತಿರುವ ಪ್ರಮುಖ ರಾಷ್ಟ್ರವಾಗಿದೆ ಎಂದ ಅವರು, ಅಂತಾರಾಷ್ಟ್ರೀಯ ಸಹಕಾರದ ಮನೋಭಾವವನ್ನು ಬೆಳೆಸಲು ಮತ್ತು ಅಂತರ್ಗತ ಬಹುಪಕ್ಷೀಯತೆಯ ಪುನರುಜ್ಜೀವನಕ್ಕಾಗಿ ನಾವು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ನಮ್ಮ ಪ್ರಯತ್ನಗಳನ್ನು ಮುಂದುವರಿಸುತ್ತೇವೆ" ಎಂದು ಅವರು ಹೇಳಿದರು.

ಅರ್ಜೆಂಟೀನಾ, ಇಥಿಯೋಪಿಯಾ, ಈಜಿಪ್ಟ್, ಇರಾನ್, ಸೌದಿ ಅರೇಬಿಯಾ ಮತ್ತು ಯುಎಇ ಎಂಬ ಆರು ಹೊಸ ಸದಸ್ಯರನ್ನು ಸೇರಿಸಿಕೊಳ್ಳಲು ಬ್ರಿಕ್ಸ್ ರಾಷ್ಟ್ರಗಳ ಗುಂಪು ಗುರುವಾರ ನಿರ್ಧರಿಸಿದೆ. ಹೊಸ ಸದಸ್ಯತ್ವವು ಜನವರಿ 1, 2024ರಿಂದ ಜಾರಿಗೆ ಬರಲಿದೆ. ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ (BRICS) ನಾಯಕರು ಗುಂಪಿನ ವಿಸ್ತರಣೆಯನ್ನು ಬೆಂಬಲಿಸಿದ್ದಾರೆ. 2010ರಿಂದ ದಕ್ಷಿಣ ಆಫ್ರಿಕಾ ಗುಂಪಿಗೆ ಸೇರ್ಪಡೆಗೊಂಡ ನಂತರ ಮೊದಲ ಬಾರಿಗೆ ವಿಸ್ತರಣೆಯಾಗಿದೆ.

15ನೇ ಬ್ರಿಕ್ಸ್ ಶೃಂಗಸಭೆಯ ಜೋಹಾನ್ಸ್‌ಬರ್ಗ್ ಘೋಷಣೆ:ಮೊದಲ ಹಂತದ ವಿಸ್ತರಣೆಯ ಭಾಗವಾಗಿ ಬ್ರಿಕ್ಸ್‌ಗೆ ಸೇರಲು ಅರ್ಜೆಂಟೀನಾ, ಈಜಿಪ್ಟ್, ಇಥಿಯೋಪಿಯಾ, ಇರಾನ್, ಸೌದಿ ಅರೇಬಿಯಾ ಮತ್ತು ಯುಎಇಗೆ ಆಹ್ವಾನ ನೀಡಲಾಗಿದೆ ಎಂದು ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಹೇಳಿದ್ದಾರೆ. ಈ ವಿಸ್ತರಣೆಯೊಂದಿಗೆ, ವಿಶ್ವದ ಒಂಬತ್ತು ದೊಡ್ಡ ತೈಲ ಉತ್ಪಾದಕರಲ್ಲಿ ಆರು ದೇಶಗಳು ಈಗ BRICS ನ ಭಾಗವಾಗಿವೆ. 15ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ರಮಾಫೋಸಾ ಈ ಘೋಷಣೆಯನ್ನು ಮಾಡಿದರು.

ಬ್ರಿಕ್ಸ್‌ನ ವಿಸ್ತರಣೆಯನ್ನು ಭಾರತ ಯಾವಾಗಲೂ ಬೆಂಬಲಿಸುತ್ತದೆ. ಹೊಸ ಸದಸ್ಯರನ್ನು ಸೇರಿಸುವುದರಿಂದ ಸಂಘಟನೆಯಾಗಿ ಬ್ರಿಕ್ಸ್ ಅನ್ನು ಬಲಪಡಿಸುತ್ತದೆ ಎಂದು ಯಾವಾಗಲೂ ನಂಬುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು.

ಇದನ್ನೂ ಓದಿ:ನಾನು ಭಾರತಕ್ಕೆ ಬಂದಾಕ್ಷಣ ನಿಮ್ಮ ದರ್ಶನ ಮಾಡಲು, ಸೆಲ್ಯೂಟ್​ ಮಾಡಲು ಇಚ್ಛಿಸಿದ್ದೆ: ಬಾವುಕರಾದ ಪ್ರಧಾನಿ ಮೋದಿ

ABOUT THE AUTHOR

...view details