ಇಸ್ಲಾಮಾಬಾದ್:ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ಖಾನ್ ತೋಷಖಾನಾ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಇಸ್ಲಾಮಾಬಾದ್‌ಗೆ ತೆರಳುತ್ತಿದ್ದಾಗ ಬೆಂಗಾವಲು ವಾಹನ ಅಪಘಾತಕ್ಕೀಡಾಗಿದೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ. ವಾಹನ ಪಲ್ಟಿಯಾಗಿದೆ ಎಂದು ಇನ್ನೊಂದು ಮಾಧ್ಯಮ ಚಿತ್ರ ಸಮೇಯ ಬಿತ್ತರಿಸಿದೆ. ಘಟನೆಯಲ್ಲಿ ಖಾನ್ ಆರೋಗ್ಯದ ಬಗ್ಗೆ ಯಾವುದೇ ಮಾಹಿತಿ ತಿಳಿದುಬಂದಿಲ್ಲ.
ವಿಚಾರಣೆಗೆ ಹಾಜರಾಗಲು ತೆರಳುವ ಮೊದಲು ಟ್ವೀಟ್ ಮಾಡಿದ ಪಾಕ್ ಮಾಜಿ ಪ್ರಧಾನಿ, "ನನ್ನ ಎಲ್ಲಾ ಪ್ರಕರಣಗಳಲ್ಲಿ ಜಾಮೀನು ಪಡೆದಿದ್ದರೂ, ಸರ್ಕಾರ ನನ್ನನ್ನು ಬಂಧಿಸಲು ಉದ್ದೇಶಿಸಿದೆ ಎಂಬುದು ಈಗ ಸ್ಪಷ್ಟವಾಗಿದೆ. ಅವರ ದುರುದ್ದೇಶಗಳ ಬಗ್ಗೆ ತಿಳಿದಿದ್ದರೂ, ನಾನು ಇಸ್ಲಾಮಾಬಾದ್ ಮತ್ತು ನ್ಯಾಯಾಲಯಕ್ಕೆ ಹೋಗುತ್ತಿದ್ದೇನೆ. ಏಕೆಂದರೆ ನಾನು ಕಾನೂನನ್ನು ನಂಬುತ್ತೇನೆ" ಎಂದು ಬರೆದುಕೊಂಡಿದ್ದರು.
ಲಾಹೋರ್ ಕೋರ್ಟ್ಗೆ ನಾನು ಹಾಜರಾಗುತ್ತಿರುವುದು ಪ್ರಕರಣ ವಿಚಾರಣೆಗಾಗಿ ಮಾತ್ರವಲ್ಲ, ದುಷ್ಟಕೂಟದ ಕೆಟ್ಟ ಉದ್ದೇಶವನ್ನು ಎಲ್ಲರಿಗೂ ತಿಳಿಸುವುದಾಗಿದೆ. ನಮ್ಮ ಚುನಾವಣಾ ಪ್ರಚಾರವನ್ನು ತಡೆಯಲಾಗದೇ ನನ್ನನ್ನು ಜೈಲಿಗೆ ಕಳುಹಿಸಲು ಸರ್ಕಾರ ಸಂಚು ರೂಪಿಸಿದೆ. ಇದು ಈಗ ಸ್ಪಷ್ಟವಾಗಿದೆ ಎಂದು ಖಾನ್ ಸರಣಿ ಟ್ವೀಟ್ ಮಾಡಿದ್ದಾರೆ. ಪ್ರಕರಣದ ವಿಚಾರಣೆಗೆ ಹೋಗುತ್ತಿದ್ದ ವೇಳೆ ಅಪಘಾತ ನಡೆದಿರುವುದು ಆತಂಕಕ್ಕೀಡು ಮಾಡಿದೆ.
ಇಮ್ರಾನ್ ಖಾನ್ ವಿರುದ್ಧದ ದೂರೇನು?:ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ಮುಖ್ಯಸ್ಥ 70 ವರ್ಷ ವಯಸ್ಸಿನ ಖಾನ್, ಚುನಾವಣೆ ಆಯೋಗ ಸಲ್ಲಿಸಿದ ದೂರಿನ ಸಂಬಂಧ ವಿಚಾರಣೆಗೆ ಹಾಜರಾಗಲು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ಎದುರು ಹಾಜರಾಗಲು ಇಮ್ರಾನ್ ಖಾನ್ ನಿರ್ಧರಿಸಿದ್ದರು. ಆಸ್ತಿ ಘೋಷಣೆಗಳಲ್ಲಿ ಉಡುಗೊರೆಗಳ ವಿವರಗಳನ್ನು ಮರೆಮಾಚಿದ್ದಕ್ಕಾಗಿ ಪಾಕಿಸ್ತಾನದ ಚುನಾವಣಾ ಆಯೋಗ ದೂರು ದಾಖಲಿಸಿತ್ತು. ತೋಷಖಾನಾ ಎಂಬ ರಾಜ್ಯದ ಡಿಪಾಸಿಟರಿಯಿಂದ ರಿಯಾಯಿತಿ ದರದಲ್ಲಿ ಪ್ರಧಾನ ಮಂತ್ರಿಯಾಗಿ ಸ್ವೀಕರಿಸಿದ ದುಬಾರಿ ಗ್ರಾಫ್ ಕೈಗಡಿಯಾರ ಸೇರಿದಂತೆ ಉಡುಗೊರೆಗಳನ್ನು ಖರೀದಿಸಲು ಖಾನ್ ಅಡ್ಡಗಾಲು ಹಾಕಿದ್ದಾರೆ ಮತ್ತು ಲಾಭಕ್ಕಾಗಿ ಮಾರಾಟ ಮಾಡಿದ್ದಾರೆ ಎಂಬುದು ಅವರ ಮೇಲಿರುವ ಪ್ರಮುಖ ಆರೋಪ.