ಪಾಕಿಸ್ತಾನದ ಪ್ರಸ್ತುತ ಆರ್ಥಿಕ ಬಿಕ್ಕಟ್ಟು ಪಾಕಿಸ್ತಾನವಷ್ಟೇ ಅಲ್ಲ ಕಾಶ್ಮೀರಿ ಪ್ರತ್ಯೇಕತಾವಾದಿಗಳನ್ನೂ ಸರಿ ಸಮಾನವಾಗಿ ಕಾಡುತ್ತಿದೆ. ಏಕೆಂದರೆ, ಭಾರತದ ವಿರುದ್ಧ ಪ್ರತ್ಯೇಕತಾವಾದಿಗಳು ದಾಳಿ ಮಾಡಬಹುದು ಎಂಬ ದುರುದ್ದೇಶದಿಂದ ಆ ನಾಯಕರಿಗೆ ಪಾಕ್ ಆಶ್ರಯ ನೀಡಿದೆ. ಆದರೆ, ವಾಸ್ತವ ಬೇರೇನೇ ಇದೆ. ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಊಹಿಸಲಾಗದಷ್ಟು ಅಸ್ಥಿರಗೊಂಡಿದೆ. ಇಡೀ ದೇಶ ದಿವಾಳಿಯ ಅಂಚಿನಲ್ಲಿದೆ. ದಿನದಿನಕ್ಕೂ ಬತ್ತಿ ಹೋಗುತ್ತಿರುವ ಆರ್ಥಿಕತೆ ರಾಜಕೀಯ ಪ್ರಕ್ಷುಬ್ಧತೆಗೂ ಕಾರಣವಾಗಿದೆ.
ಪಾಕಿಸ್ತಾನ ಕಾಶ್ಮೀರಿ ಪ್ರತ್ಯೇಕತಾವಾದಿಗಳನ್ನು ಸದಾ ಬೆಂಬಲಿಸುತ್ತಲೇ ಬಂದಿದೆ. ಗಡಿ ಪ್ರದೇಶಗಳ ಬುಡಕಟ್ಟು ಜನಾಂಗದವರ ಪರಕೀಯತೆಯಿಂದಾಗಿ ಪ್ರತ್ಯೇಕತಾವಾದದ ಪಿಡುಗು ತನ್ನದೇ ಗಡಿಯೊಳಗೆ ಬೆಳೆದು ಬಿಟ್ಟಿದೆ. ವೈರಿಯ ವಿರುದ್ಧ ಸೇಡು ತೀರಿಸಿಕೊಳ್ಳುವಾಗ ನಮ್ಮಲ್ಲಿ ಎರಡು ಬುಲೆಟ್‌ಗಳಿರಬೇಕು ಎಂಬ ಗಾದೆ ಮಾತು. ಇದರ ಅರ್ಥ ಎರಡು ಬುಲೆಟ್ಗಳು ಪೈಕಿ ಒಂದು ನಮ್ಮ ಶತ್ರುವಿಗೆ, ಮತ್ತೊಂದು ಸ್ವಯಂ ರಕ್ಷಣೆಗಾಗಿ ಎಂದಾಗುತ್ತದೆ.
1971ರಲ್ಲಿ ಈಗಿನ ಬಾಂಗ್ಲಾದೇಶದಿಂದ (ಆಗಿನ ಪೂರ್ವ ಪಾಕಿಸ್ತಾನದ) ಪ್ರತ್ಯೇಕ ರಾಷ್ಟ್ರಕ್ಕಾಗಿ ನಡೆದ ಪ್ರತ್ಯೇಕತಾವಾದಿ ಚಳುವಳಿಯನ್ನು ಭಾರತ ಬೆಂಬಲಿಸಿತ್ತು. ಹೀಗಾಗಿ ಪಾಕಿಸ್ತಾನವು ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳಲು ಬಯಸಿತ್ತು. 1980ರ ದಶಕದಲ್ಲಿ ಪಾಕಿಸ್ತಾನ ಭಾರತ ವಿರುದ್ಧದ ಖಲಿಸ್ತಾನ್ ಚಳವಳಿಯನ್ನು ಬೆಂಬಲಿಸಿತ್ತು. ಆದರೆ, ಇದು ಭಾರತವನ್ನು ವಿಭಜಿಸುವ ವಿಫಲ ಪ್ರಯತ್ನವಾಗಿತ್ತು. ಇದರ ನಂತರ ಪಾಕಿಸ್ತಾನವು ತನ್ನ ಹಳೆಯ ಗುರಿಯಾದ ಕಾಶ್ಮೀರಕ್ಕೆ ತನ್ನ ಗಮನ ಕೇಂದ್ರೀಕರಿಸಿ, ಅನೇಕ ಬಾರಿ ಕಾಶ್ಮೀರವನ್ನು ಏಕೀಕರಿಸಲು ಪ್ರಯತ್ನಿಸುತ್ತಿದೆ.
ಕೆ-ಫ್ಯಾಕ್ಟರ್: ಕಾಶ್ಮೀರವು ಪಾಕಿಸ್ತಾನಿ ರಾಜಕಾರಣಿಗಳಿಗೆ ಉತ್ತಮವಾಗಿಯೇ ಕೆಲಸ ಮಾಡುತ್ತದೆ. ಕಾಶ್ಮೀರ ಪ್ರತ್ಯೇಕತಾವಾದದ ಪಕ್ಷ ಸೇರಿಕೊಂಡವರಿಗೆ ಚುನಾವಣಾ ರಾಜಕೀಯದಲ್ಲಿ ಸಹಾಯ ಮಾಡುತ್ತದೆ. ಇದೇ ವೇಳೆ ಕಾಶ್ಮೀರದ ಬಗ್ಗೆ ಅಸಮಾಧಾನ ತೋರಿದವರು ರಾಷ್ಟ್ರದ ಕ್ರೋಧವನ್ನು ಎದುರಿಸಬೇಕಾಗಿರುವುದು ಸ್ಪಷ್ಟ ಸತ್ಯ. ಇಡೀ ದೇಶವು ಸಾಕಷ್ಟು ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿರುವಾಗಲೂ ಕಾಶ್ಮೀರದ ವಿಷಯದಲ್ಲಿ ಈಗಲೂ ಇದೇ ನಿಲುವು ಹೊಂದಿದೆ. ಫೆಬ್ರವರಿ 23ರಂದು ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನವು ಕಾಶ್ಮೀರದ ಕುರಿತು ಮತ್ತೊಮ್ಮೆ ಪ್ರಸ್ತಾಪಿಸಿತ್ತು. ತನ್ನ ರಾಷ್ಟ್ರದ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆಯೋ, ಇಲ್ಲವೋ ಎಂಬುದರ ಬಗ್ಗೆಯೂ ಗಮನ ಕೊಡದೇ ಈ ವಿಚಾರ ಪ್ರಸ್ತಾಪ ಮಾಡಿತ್ತು.
ರಾಜಕೀಯ ಇಚ್ಛಾಶಕ್ತಿ ಕೊರತೆ: ಆಂತರಿಕ ಮತ್ತು ಬಾಹ್ಯ ಸಂಘರ್ಷಗಳಿಂದ ತನ್ನ ಸಂಪನ್ಮೂಲಗಳು ಬರಿದಾಗಿವೆ. ತನ್ನ ಆರ್ಥಿಕತೆಗೆ ಗೆದ್ದಲಿನಂತಿದೆ ಎಂಬುದನ್ನು ಪಾಕಿಸ್ತಾನವು ಅಕ್ಷರಶಃ ಮರೆತಿದೆ. ಇತ್ತೀಚಿನ ಪ್ರವಾಹಗಳು ಹಾನಿ ಮಾಡಿವೆ ಹಾಗೂ ದೇಶದ ಆರ್ಥಿಕತೆಯನ್ನು ಇನ್ನಷ್ಟು ಹದಗೆಡಿಸಿದೆ. ಪಾಕಿಸ್ತಾನವು ತನ್ನ ಬಜೆಟ್‌ನ ಹೆಚ್ಚಿನ ಭಾಗವನ್ನು ಸೇನೆಗಾಗಿಯೇ ಖರ್ಚು ಮಾಡುತ್ತದೆ. ಏಕೆಂದರೆ, ದೇಶವನ್ನು ಸ್ಥಾಪಿಸಿದಾಗಿನಿಂದ ತಾನು ಪಳಗಿಸುತ್ತಿರುವ ಈ ಬಿಳಿ ಆನೆಯನ್ನು ನಿರ್ವಹಿಸುವ ಅಗತ್ಯವಿದೆ. ತಮ್ಮ ಗಡಿ ಭಾಗದಲ್ಲಿ ಪ್ರತ್ಯೇಕತಾವಾದವನ್ನೇ ಹೊಂದಿದೆ. ಅಫ್ಘಾನಿಸ್ತಾನದ ಗಡಿಗಳ ಮೇಲೆ ನಿಗಾ ಇಡುತ್ತಿದೆ. ಪಾಕಿಸ್ತಾನದ ಯಾವುದೇ ರಾಜಕೀಯ ಪಕ್ಷವನ್ನು ತೆಗೆದುಕೊಂಡರೂ ಅದು ಕಾಶ್ಮೀರದಲ್ಲಿನ ಪ್ರತ್ಯೇಕತಾವಾದಿಗಳ ಮೇಲೆ ಅವಲಂಬಿತವಾಗಿದೆ. ಯಾವುದೇ ನಾಯಕರು ಸಹ ಪ್ರತ್ಯೇಕತಾವಾದಿಗಳ ವಿರುದ್ಧ ಮಾತನಾಡುವ ಧೈರ್ಯವೂ ತೋರಲ್ಲ. ಒಟ್ಟಿನಲ್ಲಿ ಪಾಕಿಸ್ತಾನವೇ ಕುಸಿಯುವ ಹಂತ ಮತ್ತು ದೇಶದ ಅಸ್ತಿತ್ವವೇ ಅಪಾಯದಲ್ಲಿದೆ ಇರುವಾಗಲೂ ಕಾಶ್ಮೀರ ನೀತಿಯೇ ಅದಕ್ಕೆ ಪ್ರಮುಖವಾಗಿದೆ.
ಭಯೋತ್ಪಾದನೆಗೆ ಉತ್ತೇಜನ:ಯುನೈಟೆಡ್ ಜಿಹಾದ್ ಕೌನ್ಸಿಲ್. ಇದು ಕಾಶ್ಮೀರದಲ್ಲಿಮ ಅನೇಕ ಸಣ್ಣ ಉಗ್ರಗಾಮಿ ಸಂಘಟನೆಗಳ ಸಮ್ಮಿಶ್ರಣವಾಗಿದ್ದು, ಪಾಕಿಸ್ತಾನದಲ್ಲಿ ತನ್ನ ನೆಲೆಯನ್ನು ಹೊಂದಿದೆ. ಅಲ್ಲಿಯೇ ಇದರ ನಾಯಕ ಸೈಯದ್ ಸಲಾಹುದಿನ್ 20 ವರ್ಷಗಳಿಗೂ ಹೆಚ್ಚು ಕಾಲದಿಂದ ವಾಸಿಸುತ್ತಿದ್ದಾನೆ. ಪ್ರತ್ಯೇಕತಾವಾದಿ ಗುಂಪುಗಳ ಈ ಒಕ್ಕೂಟವು ವಿಭಜಿತ ತಂತ್ರದೊಂದಿಗೆ ಕಾಶ್ಮೀರಕ್ಕೆ ಹೆಚ್ಚಿನ ಹಣ ಪೂರೈಕೆ ನಿಟ್ಟಿನಲ್ಲಿ ಕೆಲಸ ನಿರ್ವಹಿಸುತ್ತದೆ. ಜೆಕೆಎಲ್ಎಫ್, ಹಿಜ್ಬ್ ಮತ್ತು ತೆಹ್ರೀಕ್ ಉಲ್ ಮುಜಾಹಿದ್ದೀನ್ ಹಾಗೂ ಇತ್ಯಾದಿ ಸಂಘಟನೆಗಳನ್ನು ಬಣಗಳಾಗಿ ವಿಂಗಡಿಸಲಾಗಿದೆ.