ಇಸ್ಲಾಮಾಬಾದ್:ವಿಶ್ವಂಸ್ಥೆಯಲ್ಲಿ ಭಾರತದ ವಿರುದ್ಧ ಪಿತೂರಿ ನಡೆಸುತ್ತಲೇ ಇರುವ ಪಾಕಿಸ್ತಾನ, ಭದ್ರತಾ ಮಂಡಳಿಯ ಖಾಯಂ ಸದಸ್ಯನಾಗುವ ಭಾರತದ ಯತ್ನಕ್ಕೆ ಮತ್ತೊಮ್ಮೆ ತಡೆಯೊಡ್ಡಿದೆ. ಖಾಯಂ ಸ್ಥಾನ ಪಡೆಯುವ ಚುನಾವಣೆಯ ವೇಳೆ ನೆರೆದೇಶ ಭಾರತದ ವಿರುದ್ಧ ಮತ ಹಾಕಿದೆ.
ಪ್ರತಿ 2 ಅಥವಾ 5 ವರ್ಷಗಳಿಗೊಮ್ಮೆ ನಡೆಯುವ ಚುನಾವಣೆಯಲ್ಲಿ ಯುಎನ್ಎಸ್ಸಿಯ ಸದಸ್ಯತ್ವ ಪಡೆಯುವ ಕುರಿತು ಚರ್ಚೆ ನಡೆಸಲಾಗುತ್ತದೆ. ಈ ವೇಳೆ ಭಾರತ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳ ಅರ್ಧದಷ್ಟು(2/3) ಬೆಂಬಲ ಪಡೆಯಬೇಕು. ಹಾಗಾದಲ್ಲಿ ಮಾತ್ರ ದೇಶಕ್ಕೆ ಮಂಡಳಿಯಲ್ಲಿ ಸದಸ್ಯತ್ವ ದೊರೆಯಲಿದೆ. ಇದಕ್ಕೆ ಪಾಕಿಸ್ತಾನ ಮೊದಲಿನಿಂದಲೂ ವಿರೋಧಿಸುತ್ತಲೇ ಬಂದಿದೆ. ಇದೀಗ ಮತ್ತೊಮ್ಮೆ ಭಾರತದ ವಿರುದ್ಧ ಧ್ವನಿ ಎತ್ತಿದೆ.
ಭಾರತ ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರವಾಗಲು ಪಾಕಿಸ್ಥಾನ ವಿರೋಧಿಸುತ್ತದೆ. ಕಾರಣ ಆ ದೇಶ ವಿಶ್ವಸಂಸ್ಥೆಯ ನಿರ್ಣಯಗಳನ್ನು ಉಲ್ಲಂಘಿಸಿದೆ. ಜಾತ್ಯತೀತ ರಾಷ್ಟ್ರ ಎಂದು ಘೋಷಿಸಿಕೊಂಡರೂ, ಅದನ್ನು ಪಾಲಿಸುವಲ್ಲಿ ಆ ದೇಶ ವಿಫಲವಾಗಿದೆ ಎಂದು ಆರೋಪಿಸಿದೆ.