ಮಾಸ್ಕೋ(ರಷ್ಯಾ): ಪ್ರಾದೇಶಿಕ ಮತ್ತು ಜಾಗತಿಕ ಸಂಸ್ಥೆಗಳ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳುವ ಸಲುವಾಗಿ ಪಾಕಿಸ್ತಾನ ಬ್ರಿಕ್ಸ್‌ನ ಸದಸ್ಯತ್ವ ಪಡೆದುಕೊಳ್ಳಲು ಮುಂದಾಗಿದೆ. ರಷ್ಯಾದ ಸುದ್ದಿ ಸಂಸ್ಥೆ ಟಾಸ್ ವರದಿಯ ಪ್ರಕಾರ, ರಷ್ಯಾದಲ್ಲಿ ಹೊಸದಾಗಿ ನೇಮಕಗೊಂಡ ಪಾಕಿಸ್ತಾನದ ರಾಯಭಾರಿ ಮುಹಮ್ಮದ್ ಖಾಲಿದ್ ಜಮಾಲಿ ತಮ್ಮ ದೇಶವು 2024ರಲ್ಲಿ ಬ್ರಿಕ್ಸ್‌ನ ಸದಸ್ಯರಾಗಲು ಅರ್ಜಿ ಸಲ್ಲಿಸಿದೆ ಎಂದು ಹೇಳಿದ್ದಾರೆ.
ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾದಿಂದ 2010ರಲ್ಲಿ ಬ್ರಿಕ್ಸ್ ರಚನೆಯಾಯಿತು. ಈ ದೇಶಗಳ ಮೊದಲ ಅಕ್ಷರಗಳನ್ನು ಸೇರಿಸಿ, ಬ್ರಿಕ್ಸ್ ಎಂಬ ಹೆಸರನ್ನಿಡಲಾಯಿತು. ಈ ದೇಶಗಳು ಜಾಗತಿಕ ಜನಸಂಖ್ಯೆಯಲ್ಲಿ ಶೇ 41ರಷ್ಟು ಪಾಲು ಹೊಂದಿವೆ. ಜಾಗತಿಕ ಅಭಿವೃದ್ಧಿಯಲ್ಲಿ ಶೇ 24ರಷ್ಟು ಪಾಲು ಮತ್ತು ಜಾಗತಿಕ ವ್ಯಾಪಾರದಲ್ಲಿ ಶೇ 16ರಷ್ಟು ಪಾಲುದಾರಿಕೆ ಹೊಂದಿವೆ. ಅಕ್ಟೋಬರ್‌ನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ, ಸಂಘಟನೆಯಲ್ಲಿ ಇನ್ನೂ ಆರು ದೇಶಗಳನ್ನು ಸೇರಿಸಲು ನಿರ್ಧರಿಸಲಾಗಿದೆ.
ಹೊಸದಾಗಿ ಸೇರ್ಪಡೆಯಾಯಾಗುವ 6 ರಾಷ್ಟ್ರಗಳು:ಮುಂದಿನ ವರ್ಷ ಬ್ರಿಕ್ಸ್‌ನ ಸದಸ್ಯತ್ವ ಪಡೆದ ರಾಷ್ಟ್ರಗಳ ಸಂಖ್ಯೆ 11ಕ್ಕೆ ಏರಿಕೆಯಾಗಲಿದೆ. ಅರ್ಜೆಂಟೀನಾ, ಈಜಿಪ್ಟ್, ಇಥಿಯೋಪಿಯಾ, ಇರಾನ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಈ ಆರು ದೇಶಗಳಾಗಿವೆ. ಈ ದೇಶಗಳ ಸದಸ್ಯತ್ವವು ಜನವರಿ 1, 2024ರಿಂದ ಜಾರಿಗೆ ಬರಲಿದೆ. ಅಂದರೆ, ಮುಂದಿನ ವರ್ಷದ ಆರಂಭದಿಂದ ಬ್ರಿಕ್ಸ್‌ನಲ್ಲಿ ಒಟ್ಟು 11 ಸದಸ್ಯರು ಇರಲಿದ್ದಾರೆ. ರಷ್ಯಾದಲ್ಲಿರುವ ಪಾಕಿಸ್ತಾನದ ರಾಯಭಾರಿ ಮುಹಮ್ಮದ್ ಖಾಲಿದ್ ಜಮಾಲಿ, 2024ರಲ್ಲಿ ರಷ್ಯಾ ಅಧ್ಯಕ್ಷತೆ ವಹಿಸಲಿದೆ. ಇದರಿಂದ ರಷ್ಯಾದ ಬೆಂಬಲದೊಂದಿಗೆ ನಮ್ಮ ದೇಶವು ಬ್ರಿಕ್ಸ್ ಸದಸ್ಯರಾಗಬಹುದು'' ಎಂದು ವಿಶ್ವಾಸ ವ್ಯಕ್ತಪಡಿಸಿದರು.