ಕರ್ನಾಟಕ

karnataka

ETV Bharat / international

ಪಾಕ್ ಭದ್ರತಾ ಪಡೆಗಳಿಂದ ತೆಹ್ರೀಕ್-ಇ-ತಾಲಿಬಾನ್​ ಕಮಾಂಡರ್ ಹತ್ಯೆ

ಪಾಕಿಸ್ತಾನ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿ ನಿಷೇಧಿತ ಉಗ್ರ ಸಂಘಟನೆ ಟಿಟಿಪಿಯ ಕಮಾಂಡರ್​ನನ್ನು ಹತ್ಯೆಗೈದಿವೆ.

ತೆಹ್ರೀಕ್​ ಇ ತಾಲಿಬಾನ್​ ಕಮಾಂಡರ್​ನ ಹತ್ಯೆ
ತೆಹ್ರೀಕ್​ ಇ ತಾಲಿಬಾನ್​ ಕಮಾಂಡರ್​ನ ಹತ್ಯೆ

By

Published : May 2, 2023, 11:40 AM IST

ಪೇಶಾವರ್​ (ಪಾಕಿಸ್ತಾನ):ಇಲ್ಲಿನಕಾನೂನು ಜಾರಿ ಸಂಸ್ಥೆಗಳು ಮತ್ತು ಪೋಲಿಯೊ ನಿರ್ಮೂಲನೆ ತಂಡಗಳ ಮೇಲೆ ನಡೆದಿದ್ದ ಅನೇಕ ದಾಳಿಗಳಲ್ಲಿ ಭಾಗಿಯಾಗಿದ್ದ ನಿಷೇಧಿತ ತೆಹ್ರೀಕ್-ಇ-ತಾಲಿಬಾನ್​ (ಟಿಟಿಪಿ) ಭಯೋತ್ಪಾದಕ ಸಂಘಟನೆಯ ಕಮಾಂಡರ್​​​ನನ್ನು ಕೊಂದಿರುವುದಾಗಿ ಪಾಕಿಸ್ತಾನ ಭದ್ರತಾ ಪಡೆ (ಪಿಎಸ್​ಎಫ್) ಸೋಮವಾರ ತಿಳಿಸಿದೆ. ದಕ್ಷಿಣ ವಜೀರಿಸ್ತಾನ್ ಬುಡಕಟ್ಟು ಜಿಲ್ಲೆಯ ಗಡಿಯಲ್ಲಿರುವ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಗುಪ್ತಚರ ಆಧಾರಿತ ಕಾರ್ಯಾಚರಣೆಯಲ್ಲಿ ನಿಷೇಧಿತ ಟಿಟಿಪಿ ಗಂಡಾಪುರ ಗುಂಪಿನ ಕುಖ್ಯಾತ ಅಬ್ದುಲ್ ಜಬರ್ ಷಾನನ್ನು ಹತ್ಯೆ ಮಾಡಲಾಗಿದೆ. ಕಾರ್ಯಾಚರಣೆಯಲ್ಲಿ ಇತರೆ ಇಬ್ಬರು ಉಗ್ರರು ಗಾಯಗೊಂಡಿರುವುದಾಗಿ ಪಿಎಸ್​ಎಫ್​ ತಿಳಿಸಿದೆ.

ಭಯೋತ್ಪಾದಕ ಕಮಾಂಡರ್ ಅಬ್ದುಲ್​ ಜಬರ್​​ ಕಾನೂನು ಜಾರಿ ಸಂಸ್ಥೆಗಳು, ಧಾರ್ಮಿಕ ಗುಂಪುಗಳು, ಪೋಲಿಯೊ ತಂಡಗಳ ಮೇಲೆ ದಾಳಿ ಮತ್ತು ಸುಲಿಗೆಯಲ್ಲಿ ತೊಡಗಿದ್ದ ಕಾರಣಕ್ಕೆ ಹತ್ಯೆಗೈಯ್ಯಲಾಗಿದೆ. ಇದು ಈ ಪ್ರದೇಶದಲ್ಲಿನ ನಮಗೆ ಸಿಕ್ಕ ಸತತ ಎರಡನೇ ಯಶಸ್ಸು ಎಂದು ಪಿಎಫ್​ಐ ಹೇಳಿದೆ. ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಪಡಿಸಿಕೊಂಡ ನಂತರ ಟಿಟಿಪಿ ಇತ್ತೀಚಿನ ದಿನಗಳಲ್ಲಿ ಪ್ರಬಲವಾಗಿದ್ದು, ದಾಳಿಗಳನ್ನು ಹೆಚ್ಚಿಸಿದೆ.

ಇದನ್ನೂ ಓದಿ:ಟರ್ಕಿ ಪಡೆಗಳ ಕಾರ್ಯಾಚರಣೆ: ಐಎಸ್ ಉಗ್ರ ಸಂಘಟನೆ ನಾಯಕನ ಹತ್ಯೆ

ಟರ್ಕಿಯಲ್ಲಿ ಐಎಸ್ ನಾಯಕನ ಹತ್ಯೆ:ಟರ್ಕಿ ಪಡೆಗಳು ಸಿರಿಯಾದಲ್ಲಿ ಇಸ್ಲಾಮಿಕ್ ಸ್ಟೇಟ್​​(ಐಎಸ್​) ಸಂಘಟನೆಯ ನಾಯಕನನ್ನು ಹೊಡೆದುರುಳಿಸಿವೆ ಎಂದು ಟರ್ಕಿ ಅಧ್ಯಕ್ಷ ರಿಸೆಪ್​ ತಯ್ಯಿಪ್​ ಎರ್ಡೊಗನ್​ ಹೇಳಿದ್ದಾರೆ. ಇತ್ತೀಚೆಗೆ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ತಿಳಿಸಿರುವ ಎರ್ಡೊಗನ್​, ಶನಿವಾರ ಟರ್ಕಿ ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಐಎಸ್​ ಸಂಘಟನೆಯ ಶಂಕಿತ ನಾಯಕ ಅಬು ಹುಸೇನ್ ಅಲ್ ಖುರೇಶಿ ಎಂಬಾತನನ್ನು ಹತ್ಯೆಗೈಯ್ಯಲಾಗಿದೆ. ಗುಪ್ತಚರ ಪಡೆ ಖುರೇಶಿ ಮೇಲೆ ದೀರ್ಘಕಾಲದಿಂದ ನಿಗಾ ವಹಿಸಿದ್ದವು. ಭಯೋತ್ಪಾದಕ ಸಂಘಟನೆಯ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಎರ್ಡೊಗನ್ ಹೇಳಿದ್ದಾರೆ.

ಎರ್ಡೊಗನ್ ಹೇಳಿಕೆಗೆ ಉಗ್ರ ಸಂಘಟನೆ ಐಎಸ್ ಈವರೆಗೂ​ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸಿರಿಯನ್ ಗಡಿಯಲ್ಲಿ ಐಎಸ್ ಮತ್ತು ಕುರ್ದಿಶ್ ಗುಂಪುಗಳ ವಿರುದ್ಧ ಟರ್ಕಿ ಹಲವಾರು ಕಾರ್ಯಾಚರಣೆಗಳನ್ನು ನಡೆಸುತ್ತಲೇ ಇದೆ. ಶಂಕಿತ ಉಗ್ರರ ಹತ್ಯೆ ಅಥವಾ ಸೆರೆ ಸರಣಿ ಮುಂದುವರಿದಿದೆ. ಇನ್ನು ಐಎಸ್​ ಹಿಂದಿನ ಮುಖ್ಯಸ್ಥನನ್ನು ಅಕ್ಟೋಬರ್‌ನಲ್ಲಿ ಕೊಲ್ಲಲಾಗಿತ್ತು. ಆತನ ಕೊಲೆಯ ನಂತರ ಅಬು ಹುಸೇನ್ ಅಲ್ ಖುರೇಶಿ ಉಗ್ರಗಾಮಿ ಗುಂಪಿನ ನಾಯಕ ಎಂದು ಗುರುತಿಸಿಕೊಂಡಿದ್ದ. ಬಳಿಕ ಐಎಸ್ ಉಗ್ರರ ಗುಂಪು ಈತನನ್ನು ಇಸ್ಲಾಮಿಕ್ ಸ್ಟೇಟ್‌ನ ನಿಷ್ಠಾವಂತ ಪುತ್ರರಲ್ಲಿ ಒಬ್ಬ ಎಂದು ಬಣ್ಣಿಸುತ್ತಿದ್ದವು.

ಐಎಸ್​ ಉಗ್ರ ಪಡೆಗಳು ಇರಾಕ್ ಮತ್ತು ಸಿರಿಯಾ ಪ್ರದೇಶಗಳ ಮೇಲೆ ಹೊಂದಿದ್ದ ಹಿಡಿತ ಕೈಜಾರಿ ಹೋದ ನಂತರ ಅವುಗಳ ಮೇಲೆ ಮತ್ತೆ ಪ್ರಾಬಲ್ಯ ಸಾಧಿಸಲು ಖುರೇಶಿ ಪ್ರಯತ್ನಿಸುತ್ತಿದ್ದ. ಆದರೆ, ಉಭಯ ರಾಷ್ಟ್ರಗಳ ಸ್ಲೀಪರ್ ಸೆಲ್‌ಗಳು ಉಗ್ರರ ಮೇಲೆ ಮಾರಣಾಂತಿಕ ದಾಳಿಗಳನ್ನು ನಡೆಸುತ್ತಿದ್ದು, ಈಗ ಅದರ ನಾಯಕ ಪ್ರಾಣ ತೆತ್ತಿದ್ದಾನೆ.

ಇದನ್ನೂ ಓದಿ:ಪೂಂಚ್ ಭಯೋತ್ಪಾದಕ ದಾಳಿ ಪ್ರಕರಣ.. ಧಾರ್ಮಿಕ ಗುರು, ಸರ್ಕಾರಿ ನೌಕರ ಸೇರಿ ಆರು ಮಂದಿ ಬಂಧನ

ABOUT THE AUTHOR

...view details