ಕೀವ್ :ರಷ್ಯಾ ಹಾಗೂ ಉಕ್ರೇನ್ ನಡುವೆ ಯುದ್ಧ ಆರಂಭವಾಗಿನಿಂದ ಈವರೆಗೆ 11ಮಿಲಿಯನ್‌ಗಿಂತ ಹೆಚ್ಚು ಜನರು ಉಕ್ರೇನ್‌ನಿಂದ ಪಲಾಯನ ಮಾಡಿದ್ದಾರೆ ಎಂದು ಯುಎನ್ ಹೇಳಿದೆ. ಇತ್ತೀಚಿನ ಯುಎನ್ ಅಂಕಿ-ಅಂಶಗಳ ಪ್ರಕಾರ ಫೆಬ್ರವರಿ 24ರಂದು ರಷ್ಯಾ-ಉಕ್ರೇನ್ ನಡುವೆ ಯುದ್ಧ ಪ್ರಾರಂಭವಾದ ನಂತರ ಉಕ್ರೇನ್‌ನಿಂದ 5.1 ಮಿಲಿಯನ್ ಜನರು ನೆರೆಯ ದೇಶಗಳಿಗೆ ತೆರಳಿದರೆ, ಇನ್ನೂ 6.48 ಮಿಲಿಯನ್ ಜನರು ಯುದ್ಧ ಪೀಡಿತ ರಾಷ್ಟ್ರದೊಳಗೆ ಸ್ಥಳಾಂತರಗೊಂಡಿದ್ದಾರೆ ಎಂದು ವಿಶ್ವಸಂಸ್ಥೆ ಬಹಿರಂಗಪಡಿಸಿದೆ.
5.1 ಮಿಲಿಯನ್ ಜನರಲ್ಲಿ ಪೋಲೆಂಡ್ಗೆ 2,867,241 ನಿರಾಶ್ರಿತರು ತೆರಳಿದ್ದಾರೆ. ಉಳಿದಂತೆ ರೊಮೇನಿಯಾಗೆ 769,616, ರಷ್ಯಾ 578,255, ಹಂಗೇರಿ 480,974, ಮೊಲ್ಡೊವಾ 430,170, ಸ್ಲೋವಾಕಿಯಾ 349,286 ಮತ್ತು ಬೆಲಾರಸ್ 3,900 ಮಂದಿ ಪಲಾಯಾನ ಮಾಡಿದ್ದಾರೆ. ಏಪ್ರಿಲ್ 21ರ ಹೊತ್ತಿಗೆ ಜೆಕ್ ಗಣರಾಜ್ಯವು ಉಕ್ರೇನಿಯನ್ ನಿರಾಶ್ರಿತರಿಗೆ 304,039 ತುರ್ತು ವೀಸಾಗಳನ್ನು ನೀಡಿದೆ.
ಇದನ್ನೂ ಓದಿ:ರಷ್ಯಾ-ಉಕ್ರೇನ್ ಸಂಘರ್ಷದಲ್ಲಿ 102 ನಾಗರಿಕರು ಸಾವು ; 5 ಲಕ್ಷ ನಿರಾಶ್ರಿತರು ಉಕ್ರೇನ್‌ನಿಂದ ಪಲಾಯನ : ವಿಶ್ವಸಂಸ್ಥೆ