ಕರ್ನಾಟಕ

karnataka

ETV Bharat / international

ಇತಿಹಾಸ ಸೃಷ್ಟಿಸಿದ 'ಕೆ ಹುಯ್ ಕ್ವಾನ್': ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಗೆದ್ದ ಮೊದಲ ಏಷ್ಯಾ ನಟ - ಎವೆರಿಥಿಂಗ್‌ ಎವೆರಿವೇರ್‌ ಆಲ್‌ ಅಟ್‌ ಒನ್ಸ್‌

ಎವೆರಿಥಿಂಗ್‌ ಎವೆರಿವೇರ್‌ ಆಲ್‌ ಅಟ್‌ ಒನ್ಸ್‌ ಚಿತ್ರದಲ್ಲಿನ ಪಾತ್ರಕ್ಕಾಗಿ 'ಕೆ ಹುಯ್ ಕ್ವಾನ್' ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಗೆದ್ದು ಇತಿಹಾಸ ಸೃಷ್ಟಿಸಿದ್ದಾರೆ.

Ke Huy Quan
ಕೆ ಹುಯ್ ಕ್ವಾನ್

By

Published : Mar 13, 2023, 7:40 AM IST

Updated : Mar 13, 2023, 9:46 AM IST

ಲಾಸ್ ಏಂಜಲೀಸ್: 'ಎವೆರಿಥಿಂಗ್ ಎವೆರಿವೇರ್ ಆಲ್ ಅಟ್ ಒನ್ಸ್' ಖ್ಯಾತಿಯ ಕೆ ಹುಯ್ ಕ್ವಾನ್ ಅವರು ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟನೆಗಾಗಿ ಆಸ್ಕರ್​ ಪ್ರಶಸ್ತಿ ಗೆದ್ದು ದಾಖಲೆ ಸೃಷ್ಟಿಸಿದ್ದಾರೆ. ಈ ಮೂಲಕ ಅವರು ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಗೆದ್ದ ಮೊದಲ ಏಷ್ಯದ ನಟ ಎನಿಸಿದ್ದಾರೆ.

ಸುಮಾರು 40 ವರ್ಷಗಳ ನಂತರ ಮತ್ತೆ ಗಮನ ಸೆಳೆದ ಬಾಲ ತಾರೆ ಕ್ವಾನ್, ಪ್ರಶಸ್ತಿ ಸ್ವೀಕರಿಸುವಾಗ ಭಾವುಕರಾದರು. ಪ್ರಶಸ್ತಿ ಸ್ವೀಕಾರ ಭಾಷಣದಲ್ಲಿ ಮಾತನಾಡಿದ ಅವರು, "ನನ್ನ ಪ್ರಯಾಣವು ದೋಣಿಯಲ್ಲಿ ಪ್ರಾರಂಭವಾಯಿತು. ನಾನು ಒಂದು ವರ್ಷವನ್ನು ಆಶ್ರಯ ಶಿಬಿರದಲ್ಲಿ ಕಳೆದಿದ್ದೇನೆ. ಅದು ಹೇಗಾದರೂ ಇರಲಿ. ಆದರೆ ಇಂದು ನಾನು ಹಾಲಿವುಡ್‌ನ ಅತಿದೊಡ್ಡ ವೇದಿಕೆಯಲ್ಲಿ ನಿಂತಿದ್ದೇನೆ. ಈ ರೀತಿಯ ಚಲನಚಿತ್ರಗಳಲ್ಲಿ ಮಾತ್ರ ಇದು ಸಾಧ್ಯ. ಇಂದು ನಾನು ಪ್ರಶಸ್ತಿ ಸ್ವೀಕರಿಸುತ್ತಿದ್ದೇನೆ ಎಂದು ನಂಬಲು ಸಾಧ್ಯವಿಲ್ಲ. ಇದು ನನ್ನ ಅಮೆರಿಕನ್ ಕನಸು" ಎಂದರು.

ಇದನ್ನೂ ಓದಿ:ಆಸ್ಕರ್​ಗೆ ಅಂಗಳದಲ್ಲಿ 'ಚೆಲ್ಲೊ ಶೋ': ಎಡಿಟಿಂಗ್‌ ಕೆಲಸದ 'ಶ್ರೇಯಸ್ಸು' ಈ ಕನ್ನಡಿಗನಿಗೂ ಸಲ್ಲಬೇಕು!

ಕ್ವಾನ್‌ಗೆ ಈ ಪ್ರಶಸ್ತಿ ವಿಶೇಷವಾಗಿ ಭಾವನಾತ್ಮಕ ಸಂಕೇತವಾಗಿದೆ. 1984ರ "ಇಂಡಿಯಾನಾ ಜೋನ್ಸ್ ಅಂಡ್ ದಿ ಟೆಂಪಲ್ ಆಫ್ ಡೂಮ್" ನಲ್ಲಿ ಹ್ಯಾರಿಸನ್ ಫೋರ್ಡ್ ಅವರ ಸೈಡ್‌ಕಿಕ್ ಪಾತ್ರದಲ್ಲಿ ಬಣ್ಣ ಹಚ್ಚಿದ್ದರು. ಬಳಿಕ 1985 ರಲ್ಲಿ "ದಿ ಗೂನೀಸ್" ನಲ್ಲಿ ಕಾಣಿಸಿಕೊಂಡ ಅವರು ತಮ್ಮ ಬಾಲ್ಯದಲ್ಲಿಯೇ ಖ್ಯಾತಿ ಪಡೆದವರು. ಆದರೆ ಕ್ವಾನ್ ಸ್ವಲ್ಪ ಸಮಯದ ನಂತರ ನಟನೆಯಿಂದ ದೂರ ಉಳಿದಿದ್ದರು.

ಡೇನಿಯಲ್ ಕ್ವಾನ್ ಮತ್ತು ಡೇನಿಯಲ್ ಸ್ಕೀನೆರ್ಟ್ ನಿರ್ದೇಶಿಸಿದ "ಎವೆರಿಥಿಂಗ್ ಎವೆರಿವೇರ್ ಆಲ್ ಅಟ್ ಒನ್ಸ್" 2022 ರ SXSW ನಲ್ಲಿ ವಿಮರ್ಶಾತ್ಮಕ ಮತ್ತು ವಾಣಿಜ್ಯ ಮೆಚ್ಚುಗೆ ಪಡೆದ ಚಿತ್ರ. ಗಲ್ಲಾ ಪೆಟ್ಟಿಗೆಯಲ್ಲಿ ಈ ಚಲನಚಿತ್ರ ಜಾಗತಿಕವಾಗಿ $100 ಮಿಲಿಯನ್ ಗಳಿಸಿತ್ತು.

ಇದನ್ನೂ ಓದಿ:ಆಸ್ಕರ್​ 2023ಕ್ಕೆ ಕ್ಷಣಗಣನೆ: ಪ್ರತಿಷ್ಟಿತ ಪ್ರಶಸ್ತಿ ಪಡೆಯುವ ವಿಶ್ವಾಸದಲ್ಲಿ ಭಾರತ

ಆಸ್ಕರ್​ 2023: ಪ್ರತಿಷ್ಠಿತ ಆಸ್ಕರ್​ 2023 ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆರಂಭವಾಗಿದೆ. ಆರ್​ಆರ್​ಆರ್ ಮತ್ತು ತಂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದೆ. ಚಿತ್ರ ನಿರ್ದೇಶಕ ಎಸ್​.ಎಸ್ .ರಾಜಮೌಳಿ, ನಟ ಜೂನಿಯರ್​ ಎನ್​ಟಿಆರ್, ರಾಮ್ ಚರಣ್​, ಸಂಗೀತ ಸಂಯೋಜಕ ಎಂ.ಎಂ.ಕೀರವಾಣಿ ಮೊದಲಾದವರು ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ಅನೇಕ ಸೆಲೆಬ್ರಿಟಿಗಳು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ. ಲಾಸ್ ಏಂಜಲೀಸ್‍ನ ಡಾಲ್ಬಿ ಥಿಯೇಟರ್‌ನಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ.

ಈ ಬಾರಿಯ ಆಸ್ಕರ್ ಸಮಾರಂಭದಲ್ಲಿ ದೀಪಿಕಾ ಪಡುಕೋಣೆ ನಿರೂಪಕರಲ್ಲಿ ಒಬ್ಬರಾಗಿದ್ದಾರೆ. ಹಾಲಿವುಡ್‌ನ ಖ್ಯಾತ ಕಲಾವಿದರ ಜತೆ ಬಾಲಿವುಡ್ ಸ್ಟಾರ್ ಕೂಡ ಒಬ್ಬರಾಗಿರುವುದು ವಿಶೇಷ. ಡ್ವೇನ್ ಜಾನ್ಸನ್, ಎಮಿಲಿ ಬ್ಲಂಟ್, ಮೈಕೆಲ್ ಬಿ. ಜೋರ್ಡಾನ್ ಸೇರಿದಂತೆ ಇನ್ನೂ ಹಲವರ ಜತೆ ದೀಪಿಕಾ ಕೂಡ ಇರುವುದು ಭಾರತೀಯರಲ್ಲಿ ಹೆಮ್ಮೆ ಉಂಟು ಮಾಡಿದೆ.

ಇದನ್ನೂ ಓದಿ:ಅಮೆರಿಕದ ಅಭಿಮಾನಿಗಳೊಂದಿಗೆ ಭಾರತೀಯ ಶ್ರೇಷ್ಠ ನಟ ರಾಮ್​ಚರಣ್​​

Last Updated : Mar 13, 2023, 9:46 AM IST

ABOUT THE AUTHOR

...view details