ರಿಯಾದ್: ಸೌದಿ ಅರೇಬಿಯಾ ಮತ್ತು ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆ (OPEC) ಸೇರಿದಂತೆ ತೈಲ ಉತ್ಪಾದಕರು ದಿನಕ್ಕೆ ಸುಮಾರು 1.16 ಮಿಲಿಯನ್ ಬ್ಯಾರೆಲ್ ಕಚ್ಚಾತೈಲ ಉತ್ಪಾದನೆಯನ್ನು ಕಡಿತಗೊಳಿಸುವುದಾಗಿ ಘೋಷಿಸಿದ್ದಾರೆ. ಸೌದಿ ಅರೇಬಿಯಾದ ರಾಜಧಾನಿ ಮತ್ತು ಮುಖ್ಯ ಹಣಕಾಸು ಕೇಂದ್ರವಾದ ರಿಯಾದ್ನಲ್ಲಿ ಮೇ ತಿಂಗಳಿಂದ 2023 ರ ಅಂತ್ಯದವರೆಗೆ ದಿನಕ್ಕೆ 500,000 ಬ್ಯಾರೆಲ್‌ಗಳ ಉತ್ಪಾದನೆ ಕಡಿತಗೊಳಿಸುವುದಾಗಿ ಹೇಳಿದೆ.
ತೈಲ ಮಾರುಕಟ್ಟೆಯಲ್ಲಿ ಸ್ಥಿರತೆ ಕಾಪಾಡುವ ಗುರಿ ಹೊಂದಿರುವ ಹಿನ್ನೆಲೆಯಲ್ಲಿ ಈ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಸೌದಿ ಅಧಿಕಾರಿಗಳು ಹೇಳಿದ್ದಾರೆ. ಕಚ್ಚಾ ತೈಲ ಉತ್ಪಾದನೆಯ ಪ್ರಮಾಣ ಕಡಿಮೆಯಾದರೆ, ತೈಲದ ದರವು ಏರಿಕೆಯಾಗಲಿದೆ. ಇದರಿಂದ ಪೆಟ್ರೋಲ್ ಮತ್ತು ಡೀಸೆಲ್ ದರಗಳೂ ಹೆಚ್ಚುವ ಸಂಭವ ಇದೆ.
2022ರ ಅಕ್ಟೋಬರ್ 5ರಂದು ನಡೆದ 33ನೇ OPEC ಮತ್ತು OPEC ಅಲ್ಲದ ಸಚಿವರ ಸಭೆಯ ಸಮಯದಲ್ಲಿ ಸ್ವಯಂಪ್ರೇರಿತವಾಗಿ ಉತ್ಪಾದನೆ ಕಡಿತ ಮಾಡುವುದರ ಕುರಿತು ಚರ್ಚಿಸಲಾಗಿತ್ತು. ಒಪೆಕ್ ಪ್ಲಸ್ ಅವರು ತಮ್ಮ ನೀತಿಗಳಲ್ಲಿ ಯಾವುದೇ ಬದಲಾವಣೆ ಮಾಡಲು ಉದ್ದೇಶಿಸಿಲ್ಲ ಎಂದು ಹೇಳಿದ್ದರು. ಆದ್ರೆ, ಈಗ ಕೈಗೊಂಡ ಕ್ರಮ ಆಶ್ಚರ್ಯಕರವಾಗಿದ್ದು, ಎಲ್ಲರನ್ನೂ ಬೆಚ್ಚಿಬೀಳಿಸಿದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
ಒಂದು ವರ್ಷದ ಹಿಂದೆ ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದ ನಂತರ ತಮ್ಮ ಕಾರ್ಯಾಚರಣೆಯನ್ನು ಹಿಂತೆಗೆದುಕೊಂಡ ಪಾಶ್ಚಿಮಾತ್ಯ ಸೇವಾ ಕಂಪನಿಗಳು ಲಾಭವಿಲ್ಲದೆ ರಷ್ಯಾ ಉತ್ಪಾದನೆಯನ್ನ ಮುಂದುವರಿಸಲು ಹೆಣಗಾಡುತ್ತಿದೆ. ಇತ್ತೀಚಿನ ತಿಂಗಳುಗಳಲ್ಲಿ ಸೌದಿ ಅರೇಬಿಯಾದ ಉತ್ಪಾದನೆಯು ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆ ನಿಗದಿಪಡಿಸಿದ ಉತ್ಪಾದನಾ ಕೋಟಾಕ್ಕಿಂತ ಕಡಿಮೆಯಾಗಿದೆ.